LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಿಷಬ್ ಶೆಟ್ಟಿ ನಟನೆಯ ಬಾಲಿವುಡ್ ಸಿನಿಮಾದ ಪೋಸ್ಟರ್ ಬಿಡುಗಡೆ

ಬೆಂಗಳೂರು : ಇದೀಗ ‘ಕಾಂತಾರ’ ಸಿನಿಮಾದಿಂದ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಕಾಂತಾರ’ ಸಿನಿಮಾ ರಿಷಬ್ ಶೆಟ್ಟಿ ಅವರಿಗೆ ದೊಡ್ಡ ಮಟ್ಟದ ಗೌರವ, ಐಶ್ವರ್ಯ ಮತ್ತು ಅವಕಾಶಗಳನ್ನು ತಂದುಕೊಂಡಿದೆ.

ರಿಷಬ್ ಶೆಟ್ಟಿ ಪ್ರಸ್ತುತ ‘ಕಾಂತಾರ ಚಾಪ್ಟರ್ 1’ ಸಿನಿಮಾದ ನಿರ್ದೇಶನ ಮತ್ತು ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಪರಭಾಷೆಗಳಿಂದಲೂ ರಿಷಬ್ ಶೆಟ್ಟಿ ಅವರಿಗೆ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ.ತೆಲುಗಿನ ‘ಜೈ ಹನುಮಾನ್’ ಪ್ಯಾನ್ ಇಂಡಿಯಾ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ. ಅದರ ಜೊತೆಗೆ ಬಾಲಿವುಡ್ ಸಿನಿಮಾದ ಅವಕಾಶವೂ ರಿಷಬ್​ಗೆ ಬಂದಿದ್ದು, ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.

ತೆಲುಗಿನಲ್ಲಿ ಫ್ಯಾಂಟಸಿ ಸಿನಿಮಾ ಆಗಿರುವ ‘ಜೈ ಹನುಮಾನ್’ನಲ್ಲಿ ಆಂಜನೇಯನ ಪಾತ್ರದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ, ಹಿಂದಿ ಸಿನಿಮಾದಲ್ಲಿ ಛತ್ರಪತಿ ಶಿವಾಜಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಒಂದು ಪೋಸ್ಟರ್ ಈ ಹಿಂದೆಯೇ ಬಿಡುಗಡೆ ಆಗಿತ್ತು. ಇದೀಗ ಮತ್ತೊಂದು ಪೋಸ್ಟರ್ ಬಿಡುಗಡೆ ಆಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಾಯಿಯ ಎದೆಹಾಲಿನಲ್ಲಿ ವಿಷಕಾರಿ ಅಂಶ ಪತ್ತೆ! ಏನಿದು ವರದಿ?ಡಿಸೆಂಬರ್ ಮೂರನೇ ವಾರದಲ್ಲಿ ಕರ್ನಾಟಕ ಕೇರಳ ಗಡಿ ಬಂದ್- ವಾಟಾಳ್ ಕರೆ7 ಕೋಟಿ ಎಟಿಎಂ ದರೋಡೆ ಕೇಸ್ - ಕಾನ್ಸ್ಟೇಬಲ್‌ ಅಣ್ಣಪ್ಪ ನಾಯಕ್ ಸಸ್ಪೆಂಡ್ಈ ಒಂದು ಎಲೆ ಸಾಕು ನಿಮ್ಮನ್ನು ದಾರಿದ್ರ್ಯದಿಂದ ಹೊರತಂದು ಶ್ರೀಮಂತರನ್ನಾಗಿಸುತ್ತದೆ.!ಮೊದಲ ಪ್ರಯತ್ನದಲ್ಲೇ UPSC ಪಾಸು ಮಾಡಿದ ಅನಿ ಜಾರ್ಜ್‌ಮಧುಮೇಹ ಬರುವ ಮೊದಲು ನಮ್ಮ ದೇಹವು ಕೆಲವು ಸ್ಪಷ್ಟ ಚಿಹ್ನೆಗಳ ಬಗ್ಗೆ ಮಾಹಿತಿ.!--ಸುಂಕದ ಬಂಕಣ್ಣ ಅವರ  ವಚನ.!ಮಣಿಪುರದಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ನಾಲ್ವರು ಉಗ್ರರು ಅರೆಸ್ಟ್- ಅಪಾರ ಶಸ್ತ್ರಾಸ್ತ್ರಗಳು ವಶಕ್ಕೆಬಿಹಾರದ 6 ಜಿಲ್ಲೆಗಳಲ್ಲಿ ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ ಪತ್ತೆಬಿಹಾರದಲ್ಲಿ ಹಿಂದೂ ಬಹುಸಂಖ್ಯಾತ ಸ್ಥಾನಗಳಿಂದ ಗೆದ್ದ ಮುಸ್ಲಿಂ ಶಾಸಕರು