ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಜೀವನದಲ್ಲಿ ಬಹುಮುಖ್ಯ :ನ್ಯಾ. ನಿವೇದಿತಾ
ದಾವಣಗೆರೆ :ಮಹಿಳೆಯರ ಪಾತ್ರಜೀವನದಲ್ಲಿ ಬಹು ಮುಖ್ಯವಾದದ್ದು ಮಹಿಳೆಯರು ದುಡಿಯುವುದರಿಂದದೇಶದಆರ್ಥಿಕ ಮಟ್ಟ ಸುಧಾರಣೆಯಾಗಿದ್ದು, ದುಡಿಯುವ ಹಣದಲ್ಲಿ ಸ್ವಲ್ಪ ಹಣವನ್ನು ಒಂದೊಳ್ಳೆಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು. ಆ ಹಣ ಮುಂದೊಂದು ದಿನ ಅನುಕೂಲಕ್ಕೆ ಬರುತ್ತದೆ ಎಂದು ಹಿರಿಯ ಪ್ರಧಾನ ಸಿವಿಲ್ ನ್ಯಾಯಧೀಶೆ ನಿವೇದಿತಾ ಹೇಳಿದರು.
ಅವರು ನಗರದ ಇಂಡಸ್ಟ್ರಿಯಲ್ ಏರಿಯಾ ಶ್ರೀ ಚೌಡೇಶ್ವರಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆವತಿಯಿಂದ ಹಮ್ಮಿಕೊಂಡಿದ್ದತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2005 ರ ನಂತರದಲ್ಲಿ ಬಂದಿರುವ ಕಾನೂನಿನ ನಿಯಮದ ಪ್ರಕಾರ ಮಹಿಳೆಯರು ಕೂಡ ಪಿತೃರ್ಜಿತಾ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳುವಂತಹ ಅವಕಾಶವಿದೆ,ಮಹಿಳೆಯರಿಗೆ ವಿಶೇಷವಾದ ಸೇವೆಗಳು ಕಾನೂನಿನಲ್ಲಿದೆ, ಲೋಕ ಅದಾಲತ್‌ಸೇವೆಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಸಂಸ್ಥೆಯಜಿಲ್ಲಾ ನಿರ್ದೇಶಕ ಲಕ್ಷ÷್ಮಣ್ ಎಂ. ಮಾತನಾಡಿ, ದುಡ್ಡುಇಲ್ಲದವನು ಬಡವನಲ್ಲಜೀವನದಲ್ಲಿ ನಿರ್ದಿಷ್ಟಗುರಿ ಕನಸು ಇಲ್ಲದವನು ಬಡವ,ಮಹಿಳೆಯರ ಸಬಲೀಕರಣಕ್ಕಾಗಿ ಧರ್ಮಸ್ಥಳ ಗ್ರಾಮಭಿರುದ್ಧಿಯೋಜನೆಯು ಸದಾ ಸೇವೆ ನೀಡಲು ಸಿದ್ಧ,ಒಂದೊಳ್ಳೆ ಕಾರ್ಯಕ್ರಮದ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಬಹು ಮುಖ್ಯವಾದದ್ದು,ಜ್ಞಾನ ವಿಕಾಸ ಕಾರ್ಯಕ್ರಮದ ಮುಖಾಂತರ ಮಹಿಳೆಯರಿಗೆ ಕುಟುಂಬ ನಿರ್ವಹಣೆ,ಕಾನೂನುಅರಿವು,ಇಲಾಖೆ ಪರಿಚಯ,ಉತ್ತಮಆರೋಗ್ಯ ನಿರ್ವಹಣೆಗೆ ತರಬೇತಿಗಳ ಮುಖಾಂತರ ಮಹಿಳೆಯರ ಸಬಲೀಕರಣ ಮಾಡಲಾಗುತ್ತಿದೆಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ, ವಕೀಲರಾದಅನಿತಾ ಮಾತನಾಡಿ, ಹೆಣ್ಣೊಂದುಕಲಿತರೆ ಶಾಲೆಯೊಂದುತೆರೆದAತೆ ಹೆಣ್ಣು ಮನೆಯಲ್ಲಿ ಮಕ್ಕಳಿಗೆ ಮೊದಲ ಗುರುವಾಗಿ ಮಕ್ಕಳನ್ನ ಪೋಷಿಸಬೇಕು,ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಮಕ್ಕಳ ಭವಿಷ್ಯಉಜ್ವಲವಾಗುವುದುಎಂದರು ಹಾಗೂ ಇಲಾಖೆಗಳ ಭೇಟಿ ಮಾಡಿಇಲಾಖೆಯಲ್ಲಿರುವ ಸೇವೆಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿಗಾಂಧಿನಗರ ಪಿ ಎಸ್ ಐ ಪಿ ಸಿ ಲಲಿತಾ,ಯೋಜನಾಧಿಕಾರಿ ಶ್ರೀನಿವಾಸ್‌ಬಿ,ಚೌಡೇಶ್ವರಿದೇವಸ್ಥಾನ ಸಮಿತಿಅಧ್ಯಕ್ಷಆನಂದ್,ಹನುಮಂತಪ್ಪ,ಶೈಲಾ ನಾಗರಾಜ್,ಯೋಜನೆಯ ಸಿಬ್ಬಂದಿಗಳು,ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.