E-PAPER
16 Nov 2026, 02:19:55 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪತ್ರಿಕಾ ವಿತರಕರ ಸತ್ಕರಿಸಿದ ರೋಟರಿ ಕ್ಲಬ್

ಬೆಳಗಾವಿ; ಕಳೆದು ೪೦-೪೫ ವರ್ಷಗಳಿಂದ ಬೆಳಗಿನ ಜಾವ ೩-೦೦ ಗಂಟೆಗೆ ಎದ್ದು,ಸಾಯಕಲ್ಲ ಮೇಲೆ ಹೋಗಿ ದಿನಪತ್ರಿಕೆಗಳನ್ನು ಸಂಗ್ರಹಿಸಿ ತಂದು,ತಪ್ಪದೇ ದಿನಂಪ್ರತಿ ಮನೆ ಮನೆಗೆ ಪತ್ರಿಕೆ ಹಂಚುವ ಕಾರ್ಯ ಮಾಡುತ್ತಿರುವ ಕಾಯಕ ಜೀವಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವವಿಸುತ್ತಿರುವ ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಅವರ ಕಾರ್ಯ ಶ್ಲಾಘನೀಯ.

ಯಾರೂ ಗುರುತಿಸದ ಕಾಯಕ ಜೀವಿಗಳನ್ನು ಗುರುತಿಸಿ ,ಕಾಯಕದಲ್ಲಿ ಕೈಲಾಸವನ್ನು ಕಂಡ ವಡಗಾಂವ,ಶಹಾಪೂರ ಭಾಗಗಳಲ್ಲಿ ತಪ್ಪದೆ ವೃತ್ತಪತ್ರಿಕೆಗಳನ್ನು ಹಂಚುವ ಕಾರ್ಯ ಮಾಡುತ್ತಿರುವ ಶ್ರೀ ಚೈತನ್ಯ ಬಾಬಾಸಾಹೇಬ ಬೋಂಗಾಳೆ ಮತ್ತು ಶ್ರೀ ಕಲ್ಲಪ್ಪ ಬಂಡು ಭಿವಸೆ ಅವರಿಗೆ "ರೋಟರಿ ವೋಕೇಶನಲ್ ಅವಾರ್ಡ್" ಹಾಗೂ ಯೋಗ, ಪ್ರಾಣಾಯಾಮದ ಪ್ರಾತಕ್ಷಿತೆಯ ಮೂಲಕ ಸಮಾಜದ ಸ್ವಾಸ್ಥ್ಯಕಾಪಾಡಲು ಸಮರ್ಪಣಾ ಭಾವದ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಶ್ರೀಪ್ರಭಾಕರ ರಘುನಾಥ್ ಲಾಟುಕರ ಅವರಿಗೆ ರೋಟರಿ ವೋಕೇಶನಲ್ ಅವಾರ್ಡ ಅಲ್ಲದೇ "ರೋಟರಿ ಅತ್ಯುತ್ತಮ ವಿದ್ಯಾರ್ಥಿ" ಪ್ರಶಸ್ತಿಯನ್ನು ಪಡೆದ ರಾಷ್ಟ್ರೀಯ ವಿದ್ಯಾಲಯದ ಕು.ದಕ್ಷ ಶರ್ಮಾ ಅವರಿಗೆ ₹ ೧೦೦೦೦ ಗಳ ನಗದು ಮತ್ತು ರೋಲಿಂಗ್ ಶೀಲ್ಡ ನೀಡಿ ಗೌರವಿಸಲಾದ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿಯೋಜಿತ ಜಿಲ್ಲಾ ಗವರ್ನರ್ ರೋ.ಅಶೋಕ ನಾಯಕ ಅವರು ಇಂದಿಲ್ಲಿ ( 28/01/2026 ) ಮೇಲಿನಂತೆ ಹೇಳಿದರು.
ವೇದಿಕೆಯ ಮೇಲೆ ರೊ.ಉದಯಸಿಂಗ ರಜಪೂತ, ರೊ. ನಂದನ ಬಾಗಿ,ಅಸಿಸ್ಟೆಂಟ್ ಗವರ್ನರ್ ರೊ.ರಾಜೇಶ ತಳೆಗಾಂವ,ಇವೆಂಟ ಚೇರ್ಮನ್ ಡಾ.ವಿಜಯ ಪೂಜಾರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರೊ.ದೀಪಕ ಕೊಲ್ಹಾಪುರೆ ಅವರಿಗೆ ರೋಟರಿ ಸದಸ್ಯತ್ವವನ್ನು ನೀಡಲಾಯಿತು.
ಸಮಾರಂಭದಲ್ಲಿ ರೊ.ಅಶೋಕ ಮಳಗಲಿ,ರೊ.ದಯಾನಂದ ಮಾಳಗಿ,ರೊ.ಮನೋಹರ ಜರತಾರಕರ,ರೊ.ಅಶೋಕ ಬದಾಮಿ,ರೊ.ರಾಜೀವ ದೇಶಪಾಂಡೆ, ಸತೀಶ್ ಮಿಠಾರೆ,ಸತೀಶ್ ನಾಯಕ ರೊ.ಅನೀಲ ಬಾಗಿ, ರೋಟರಿ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ