ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಾಹುಕಾರ್ !
[video width="832" height="480" mp4="https://janajeevala.com/wp-content/uploads/2023/09/VID-20230928-WA0315.mp4"][/video]
ಬೆಳಗಾವಿ :ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ಅವರ ವಿರುದ್ದ ಯಮಕನಮರಡಿ ಕಾಂಗ್ರೆಸ್ ಶಾಸಕ ಹಾಗೂ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಅಭಯ ಪಾಟೀಲ ವಿರುದ್ಧ ಸತೀಶ್ ಕಿಡಿ ಕಾರಿದ್ದೇನು ಗೊತ್ತೇ ?: ಅಭಯ ಪಾಟೀಲ ಅಧಿಕಾರದಲ್ಲಿದ್ದಾಗ ತಾವೇನು ಮಾಡಿರಲಿಲ್ಲ. ಹೊಸ ಬಟ್ಟೆಗೆ ಹಳೆ ಕಿಸೆ ಜೋಡಿಸಿ ಹಿಂದೆ ಮುಂದೆ ಮಾಡಿದರು. ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಸೇರಿದಂತೆ ಎಲ್ಲವೂ ಅವರ ಕೈಯಲ್ಲಿತ್ತು. ಸ್ಮಾರ್ಟ್ ಸಿಟಿ ದುಡ್ಡೆಲ್ಲ ಇದ್ದರೂ ಬೆಳಗಾವಿ ಮಾತ್ರ ಸ್ಮಾರ್ಟ್ ಸಿಟಿ ಆಗಲಿಲ್ಲ. ಅವರೇ ಸ್ಮಾರ್ಟ್ ಆದರು. ಬೆಳಗಾವಿ ಜಿಲ್ಲೆ, ಆಡಳಿತ, ಕರೆಕ್ಷನ್ ಬಗ್ಗೆ ಅವನಿಗೇನು ಹೇಳುವ ನೈತಿಕತೆ ಇಲ್ಲ. ಭ್ರಷ್ಟಾಚಾರದ ಬಗ್ಗೆ ಬೇರೆಯವರು ಹೇಳಿದ್ದರೆ OK. ಆದರೆ ಈ ಗಿರಾಕಿ ಹೇಳಿದರೆ ನಾವು ಒಪ್ಪುವುದಿಲ್ಲ ಎಂದು ಕಿಡಿಕಾರಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.