ಉಪ ಚುನಾವಣೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೆ, ಜಾತ್ರೆ ನಿಷೇಧ: ಜಿ.ಎಂ.ಗಂಗಾಧರಸ್ವಾಮಿ
ದಾವಣಗೆರೆ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಖಾಲಿ ಇರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ನವೆಂಬರ್ 23 ರಂದು ಮತದಾನ ನಡೆಯಲಿದ್ದು ಉಪಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆ, ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ನ್ಯಾಮತಿ ತಾಲ್ಲೂಕಿನ ಚಿನ್ನಿಕಟ್ಟಿ, ಹರಿಹರ ತಾಲ್ಲೂಕಿನ ಸಾರಥಿ, ಉಕ್ಕಡಗಾತ್ರಿ, ದಾವಣಗೆರೆ ತಾಲ್ಲೂಕಿನ ಗೋಪನಾಳ, ಹೆಬ್ಬಾಳು, ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ, ತಣಿಗೆರೆ, ಬೆಳ್ಳಗನೂರು, ಸಂತೆಬೆನ್ನೂರು, ಜಗಳೂರು ತಾಲ್ಲೂಕಿನ ಹನುಂತಾಪುರ, ಬಸವನಕೋಟೆ, ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ಹಾಗೂ ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 9 ಕ್ಕೆ ನಡೆಯಲಿದೆ. ಅಂದುಉ ನಡೆಯುವ ಸಂತೆ, ಜಾತ್ರೆಯನ್ನು ನಿಷೇಧಿಸಿಲಾಗಿರುತ್ತದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.