LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸರಸ್ವತಿ ಕೆ.ಸಿ ವೀರೇಂದ್ರ  ಒಲಿದ ಗಿನ್ನಿಸ್ ರೆಕಾರ್ಡ್ .!

 

ಚಿತ್ರದುರ್ಗ : ಸರಸ್ವತಿ ಅವರು ಇತ್ತೀಚಿಗೆ ಕಿಬ್ಬೊಟ್ಟೆಯ ಪ್ಲ್ಯಾಂಕ್ ಸ್ಥಾನದ ವಿಭಾಗದಲ್ಲಿ 10 ಪೌಂಡ್ ತೂಕದ ಬ್ಯಾಗನ್ನು ಹೊತ್ತು 2 ನಿಮಿಷ 12 ಸೆಕೆಂಡುಗಳ ಸ್ಥಿರವಾಗಿ ಹಿಮ್ಮುಖ ಹೊಟ್ಟೆಯ  ಮೇಲೆ ಹೆಚ್ಚು ಸಮಯ ಇರಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.

ಗಿನ್ನಿಸ್ ವರ್ಡ್ ರೆಕಾರ್ಡ್ ಸಂಸ್ಥೆಯು 2025ನೇ ಸಾಲಿನ ಸಾಧಕರನ್ನ ಪಟ್ಟಿಯನ್ನ ಬಿಡುಗಡೆಗೊಳಿಸಿ, ಅಧಿಕೃತ ಪ್ರಮಾಣ ಪತ್ರವನ್ನ ಸರಸ್ವತಿ ಕೆ.ಸಿ ವೀರೇಂದ್ರ ಅವರಿಗೆ ನೀಡಿ ಗೌರವಿಸಿದೆ.

ಕಳೆದ 2024ನೇ ಸಾಲಿನಲ್ಲಿ ಪಾಕಿಸ್ತಾನದ ಇರ್ಫಾನ್ ಮೆಹಸೂದ್ ಅವರು 2024ರಲ್ಲಿ 100 ಪೌಂಡ್ ತೂಕದ ಬ್ಯಾಗ್ ಹೊತ್ತು 2 ನಿಮಿಷ 02 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿದು ವಿಶ್ವದಾಖಲೆ ನಿರ್ಮಿಸಿದ್ದರು ಆದ್ರೆ ಭಾರತದ ಯುವತಿ ಸರಸ್ವತಿ ಕೆ.ಸಿ ವೀರೇಂದ್ರ ಅವರು ಆ ದಾಖಲೆಯನ್ನು 10 ಸೆಕೆಂಡುಗಳ ಕಾಲದ ಅಂತರದಲ್ಲಿ ಮುರಿದು, ಹೊಸ ಇತಿಹಾಸ ಬರೆದಿದ್ದಾರೆ.ಇದರಿಂದ ಭಾರತಕ್ಕೆ ಹೊಸ ಕೀರ್ತಿ, ಕರ್ನಾಟಕಕ್ಕೆ ಹೆಮ್ಮೆ ಮತ್ತು ಚಿತ್ರದುರ್ಗಕ್ಕೆ ಶಾಶ್ವತ ಗೌರವ ಲಂಬಿಸಿದೆ.

ಸರಸ್ವತಿ ಕೆ.ಸಿ ವೀರೇಂದ್ರ ಅವರು ಬೆಂಗಳೂರು ನಗರದ ಜೈನ ಇಂಟನ್ರ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು,  ತರಬೇತಿದಾರರಾದ ತುಷಾರ್ ಸೋನಾಲಿಕರ್ ಅವರ ಮಾರ್ಗ ದರ್ಶನದಲ್ಲಿ ಸರಸ್ವತಿ ಕೆ.ಸಿ ವೀರೇಂದ್ರ ತಮ್ಮ ದೈಹಿಕ ಸಾಮಥ್ರ್ಯದ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. 2023 ನೇ ಸಾಲಿನ "ಲಾಂಗೆಸ್ಟ್ ಸಿಟ್ ಇನ್ ಥಾ ವಾಲ್ ಪೋಸಿಶನ್ ಆನ್ ಟೋ" ವಿಭಾಗದಲ್ಲಿ 2 ಗಂಟೆ 36 ಸೆಕೆಂಡುಗಳ ಕಾಲ ಸ್ಥಿರವಾಗಿ ಉಳಿದು, `ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್" ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡಿದರು.

ಕಠಿಣ ಪರಿಶ್ರಮ, ಅಚಲ ನಂಬಿಕೆ ಮತ್ತು ನಿರಂತರ ಅಭ್ಯಾಸದ ಮೂಲಕ ಯಾವ ದಾಖಲೆಯಾದರೂ ಕೂಡ ಮಾಡಬಹುದು, ತಂದೆ ತಾಯಿಗಳ ಪ್ರೇರಣೆಯಿಂದ ವಿಶ್ವದ ಮಟ್ಟದಲ್ಲಿ ನನ್ನ ಹೆಸರು ಗುರುತಿಸಿಕೊಂಡಿದೆ ಅದಕ್ಕೆ ತಂದೆ ತಾಯಿಗಳ ಆಶೀರ್ವಾದ ಅತ್ಯಂತ ಮುಖ್ಯವಾಗಿದೆ ಎಂದು ಸರಸ್ವತಿ ಕೆ.ಸಿ ವೀರೇಂದ್ರ ಅವರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026