E-PAPER
16 Nov 2026, 02:19:55 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಧಾರ್ಮಿಕ ಆಚಾರ ವಿಚಾರಗಳ ಕುರಿತು  ವೈಜ್ಞಾನಿಕ ಅಧ್ಯಯನ ಮಾಡಿ ಆಚರಿಸಬೇಕು;ಎಸ್ ಆರ್. ಡೊಂಗರೆ

ಬೆಳಗಾವಿ; ವಿಶ್ವಾಸ ವಿರಲಿ, ಅಂಧ ವಿಶ್ವಾಸ ಬೇಡ. ಶ್ರದ್ಧೆ ಇರಲಿ,ಅಂಧ ಶ್ರದ್ಧೆ ಬೇಡ.ನಾವು ಯಾವುದೇ ಧಾರ್ಮಿಕ ಆಚಾರ ವಿಚಾರಗಳ ಕುರಿತು ಸೈದ್ಧಾಂತಿಕ ಮತ್ತು ವೈಜ್ಞಾನಿಕ ಅಧ್ಯಯನ ಮಾಡಿ ನಂಬಿ ಆಚರಿಸಬೇಕು.ಬಸವಾದಿ ಶಿವ ಶರಣರ ವಚನಗಳು ನಮಗೆ ನಿತ್ಯ ಮಾರ್ಗದರ್ಶನ ಮಾಡುತ್ತವೆ.ನಾವು ವಚನಗಳನ್ನು ಓದಬೇಕು.ತಿಳಿಯಲಿಲ್ಲವೆಂದು ಮರುಗದೇ ಮತ್ತೆ ಮತ್ತೆ ಓದಿ ಅರ್ಥ ಮಾಡಿಕೊಂಡು ಆಚರಣೆಗೆ ತಂದಲ್ಲಿ ಸಮಾಜ ಒಪ್ಪುವ ನಿಜ ಜೀವನದ ಸುಖ ಅನುಭವಿಸಬಹುದು. ಕಂಡುದದನು ಕಂಡು ಗುರುಪಾದವ ಹಿಡಿದಲ್ಲಿ,ಕಾಣದದನು ಕಾಣಬಹುದು... ಎಂಬ ಅಲ್ಲಮ ಪ್ರಭುದೇವರ ವಚನವನ್ನು ಉಲ್ಲೇಖಿಸಿ,ಧಾರ್ಮಿಕ ಆಚರಣೆಗಳಲ್ಲಿಯ  ಮೂಢ ನಂಬಿಕೆ, ಕಂದಾಚಾರಗಳನ್ನು ತಿಳಿಸಿ, ಮುಗ್ದ ಜನರನ್ನು ಶೋಷಣೆ ಮಾಡುವದನ್ನು  ಖಂಡಿಸಲು ಸರ್ವರೂ ಜಾಗೃತರಾಗಬೇಕೆಂದು ಶನಿವಾರ ದಿನಾಂಕ ೨೯/೦೩/೨೦೨೫ ರಂದು ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದವರು ಏರ್ಪಡಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ     " ಮೂಢ ನಂಬಿಕೆ ಮತ್ತು ಪವಾಡ ಬಯಲು" ಎಂಬ ವಿಷಯವಾಗಿ ಉಪನ್ಯಾಸ ನೀಡಿ, ಪವಾಡ -ಬಯಲು ಕಾರ್ಯಕ್ರಮ ಮಾಡಿದ ಯಕ್ಸಂಬಾದ ಸಿ ಕೆ.ಹಾಯಸ್ಕೂಲಿನ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಶರಣ ಎಸ್ ಆರ್. ಡೊಂಗರೆಯವರು
  ಮೇಲಿನಂತೆ ಹೇಳಿದರು. ಜನರಿಗೆ ಮನಮುಟ್ಟುವಂತೆ ಪವಾಡ ಬಯಲು ಪ್ರಾತ್ಯಕ್ಷಿಕೆಯನ್ನು ತೋರಿಸಿದರು.
       ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಬಸವರಾಜ ರೊಟ್ಟಿ ನ್ಯಾಯವಾದಿಗಳು  ಇತ್ತೀಚೆಗೆ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ದಾಳಿ ಮಾಡುತ್ತಿದ್ದು,ಶರಣರ ಕುರಿತು ಇಲ್ಲ ಸಲ್ಲದ  ತಪ್ಪು ಮಾಹಿತಿ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.ವೀಣಾ ಬನ್ನಂಜೆ ಅವರು ಅನುಭವ ಮಂಟಪ ಅಸ್ತಿತ್ವದಲ್ಲಿ ಇರಲೇ ಇಲ್ಲ ಎಂಬ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಅದನ್ನು ಉಗ್ರವಾಗಿ ಖಂಡಿಸುತ್ತದೆ.
   ಸಮಾರಂಭದ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ಶಿವಬಸವ ದೇವರು ಸೋಲಾಪೂರ ಅವರು  ಮೂಢ ನಂಬಿಕೆ ,ಕಂದಾಚಾರಗಳ ನಿರ್ಮೂಲನೆಯ ಜನ ಜಾಗೃತಿಗಾಗಿ ಶರಣರು ಶ್ರಮಿಸಿದರು ಎಂದು ಆಶೀರ್ವಚನದಲ್ಲಿ ಹೇಳಿದರು.
  ರೇಷ್ಮೆ ಇಲಾಖೆಯ ಅಧೀಕ್ಷಕರಾದ ಶರಣೆ ಭಾಗ್ಯಶ್ರಿ ಬೆಣಚಿನಮರ್ಡಿ ಅವರು ಇಂದಿನ ಪ್ರಸಾದ ದಾಸೋಹ ನೀಡಿ,ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು.
 ಜಾಗತಿಕ ಲಿಂಗಾಯತ ಮಹಾ ಸಭಾದ ಶರಣೆಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು.
 ಶರಣೆ ಶಕುಂತಲಾ ನರಸನ್ನವರ ಅವರು ಸ್ವಾಗತಿಸಿದರು. ಪ್ರೀತಿ ಮಠದ ಶರಣು ಸಮರ್ಪಣೆ ಮಾಡಿದರು. ಶರಣೆ ಶ್ರೀದೇವಿ ನರಗುಂದ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
    ಕಾರ್ಯಕ್ರಮದಲ್ಲಿ  ಅಶೋಕ ಮಳಗಲಿ, ಚಂದ್ರಪ್ಪ ಬೂದಿಹಾಳ,ಎಸ್ ಜಿ ಸಿದ್ನಾಳ,ಮುರಿಗೆಪ್ಪ ಬಾಳಿ,ಅರವಿಂದ ಪರುಶೆಟ್ಟಿ,ಮಹಾನಂದಾ ಪರುಶೆಟ್ಟಿ, ಸುಜಾತಾ ಮತ್ತಿಕಟ್ಟಿ, ಅನ್ನಪೂರ್ಣ ಮಳಗಲಿ,ಶಂಕರ ಗುಡಗನಟ್ಟಿ, ಸುಲೋಚನಾ ವಸ್ತ್ರದ, ಮೋಹನ ಗುಂಡ್ಲೂರ,ಬಸವರಾಜ ಮಿಂಡೊಳ್ಳಿ ನೇತ್ರಾವತಿ ರಾಮಾಪೂರಿ, ಕೆಂಪಣ್ಣ ರಾಮಾಪೂರಿ,ಬಸವರಾಜ ಸುಲ್ತಾನಪೂರಿ, ಹನಮಂತ ದುಂಡಿ,ಮಹಾಂತೇಶ ತೋರಣಗಟ್ಟಿ ಅಲ್ಲದೇ ವಿವಿಧ ಬಡಾವಣೆಯ ಬಸವ ಅನುಯಾಯಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ