ಕರ್ಬೂಜ ಹಣ್ಣು ತಿನ್ನಿ ಆರೋಗ್ಯದಲ್ಲಿ ಆಗುವ ಬದಲಾವಣೆ ನೋಡಿ.!
ಬೇಸಿಗೆ ಕಾಲದಲ್ಲಿ ದೊರೆಯುವ ಈ ಹಣ್ಣು ತುಂಬಾ ಸಿಹಿ. ಸಕ್ಕರೆ ಇಲ್ಲವೇ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಅದರ ರುಚಿನೇ ಬೇರೆ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು ಆಯಾಸ, ಸುಸ್ತು ನಿವಾರಿಸುತ್ತದೆ.
ಆಟ ಆಡಿ ಬರುವ ಮಕ್ಕಳಿಗೆ ಈ ಹಣ್ಣಿನ ಪಾನಕವನ್ನು ಕೊಡಬಹುದು. ಮೂಗಿಗೆ ಹಿತವೆನಿಸುವ ಪರಿಮಳ, ನಾಲಿಗೆಗೆ ಹಿಡಿಸುವ ರುಚಿ, ದಾಹ-ದಣಿವು ತಣಿಸುವ ಶಕ್ತಿ ಈ ಹಣ್ಣಿಗಿದೆ. ಅಂದ ಹಾಗೆ ಕರ್ಬೂಜ ಹಣ್ಣು ತಿನ್ನುವುದರಿಂದ ಇನ್ನೇನು ಪ್ರಯೋಜನವಿದೆ ತಿಳಿಯಿರಿ.
ಕಣ್ಣಿನ ಶಕ್ತಿಯನ್ನು ಹೆಚ್ಚಿಸಲು ಅವಶ್ಯವಾದ ವಿಟಮಿನ್ ಎ, ಬೀಟಾ ಕೆರೋಟಿನ್ ಕರ್ಬೂಜ ಹಣ್ಣಿನಲ್ಲಿದ್ದು, ಕಣ್ಣಿನ ಪೊರೆ ಸಮಸ್ಯೆ ಹೆಚ್ಚಾಗುವುದನ್ನು ತಡೆಯುತ್ತದೆ.
ಕರ್ಬೂಜ ಹಣ್ಣಿನಲ್ಲಿರುವ ಅಧಿಕ ಪೊಟಾಶಿಯಂ ತೂಕ ಕರಗಿಸಲು ಸಹಾಯ ಮಾಡುತ್ತದೆ. ಹಾಗೆ ಅತಿ ಕಡಿಮೆ ಕೊಬ್ಬಿನಂಶ ಒಳ್ಳೆಯ ಕಾರ್ಬೋಹೈಡ್ರೇಟ್ ಇದೆ.
ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಸರ್ ಗೂ ಇದು ಒಳ್ಳೆಯದು.
ನಿದ್ರಾ ಸಂಬಂಧಿತ ತೊಂದರೆಗಳನ್ನು ದೂರ ಮಾಡುತ್ತದೆ.
ಅಷ್ಟೇ ಅಲ್ಲದೆ ರಕ್ತ ಶುದ್ಧೀಕರಿಸುವ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚುವಂತೆ ಮಾಡುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳಿಗೂ ಪ್ರಯೋಜನಕಾರಿ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.