ಬೆಂಗಳೂರು: ಹಿರಿಯ ರಂಗ ಕಲಾವಿದ ಮತ್ತು ಪ್ರಸಿದ್ಧ ಚಲನಚಿತ್ರ ನಟರು, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ಶ್ರೀ ರಾಜು ತಾಳಿಕೋಟೆ ಅವರು ನಿಧನ.
ಉತ್ತರ ಕರ್ನಾಟಕ ಸೊಗಡಿನ ಹಾಸ್ಯದಿಂದ ಜನಪ್ರಿಯರಾಗಿದ್ದ ರಾಜು ಅವರ ಅಕಾಲಿಕ ನಿಧನ ಕಲಾಕ್ಷೇತ್ರಕ್ಕೆ ಬಹುದೊಡ್ಡ ನಷ್ಟ.
ರಾಜು ತಾಳಿಕೋಟೆ ಅವರು ಹಲವು ಚಲನಚಿತ್ರಗಳಲ್ಲಿ ಹಾಸ್ಯ ನಟರಾಗಿ ನಟನೆಯನ್ನು ಮಾಡಿದ್ದು ಅಲ್ಲದೆ ರಂಗಭೂಮಿಯಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ ಅದರಲ್ಲಿ ಸಹ ನಾಟಕ ಕ್ಷೇತ್ರದಲ್ಲಿ ಇವರು ಅಸ್ಸಧ ಮೂಲಕವೇ ಜನರನ್ನು ರಕ್ಷಿಸುವ ಹಾಗೂ ಮೆಚ್ಚಿಸುವ ಕೆಲಸವನ್ನು ಮಾಡಿದ್ದಾರೆ.
ರಂಗಭೂಮಿಯಲ್ಲಿ ಅವರು ಮಾಡಿರುವ ಸೇವೆ ಅಪಾರವಾಗಿದ್ದು ಸಾಕಷ್ಟು ಪ್ರಶಸ್ತಿಗಳು ಸಹ ಇವರಿಗೆ ಬಂದಿದ್ದಾವೆ. ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಸಾಕಷ್ಟು ಮನೋರಂಜನೆಯನ್ನು ಸಾರ್ವಜನಿಕರಿಗೆ ಹಾಗೂ ವೀಕ್ಷಕರಿಗೆ ಮನೋರಂಜನೆಯನ್ನು ನೀಡಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದ್ದರು.
ರಾಜು ತಾಳಿಕೋಟೆ ಅವರನ್ನು ಕಳೆದುಕೊಂಡು ರಂಗಭೂಮಿ ಬಡವಾಗಿದ್ದು, ಅನೇಕ ಕಿರಿಯ ರಂಗಕರ್ಮಿಗಳು ರಾಜು ಅವರನ್ನು ನೆನೆಸಿಕೊಂಡು ಅವರ ಕೆಲಸ ಕಾರ್ಯಗಳನ್ನು ನೆನೆದು ದುಃಖ ತಪ್ಪಿತರಾಗಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ
ರಾಜು ತಾಳಿಕೋಟೆ ಅವರ ನಿಧನದ ಸುದ್ದಿ ತಿಳಿದು ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ಹಿರಿಯ ರಂಗ ಕರ್ಮಿಗಳು ಸಿನಿಮಾ ನಟ ನಟಿಯರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದುಃಖದತ್ತರಾದರು.