ಶಹಾಪುರ: ಮುಖಾಮುಖಿ ಘರ್ಷಣೆ; ಭಯದಲ್ಲಿ ಅಭಯ ಕ್ಷೇತ್ರ..!?
ಬೆಳಗಾವಿ:ಬಿಜೆಪಿ ಮತ್ತು ಎಂಇಎಸ್ ನಡುವೆ ನಗರದ ಶಹಾಪುರ ಹೊಸೂರ ಬಸವಣ್ಣ ಗಲ್ಲಿಯಲ್ಲಿ ಮುಖಾಮುಖಿ ಘರ್ಷಣೆ ಆಗಿದ್ದು ಎಂಇಎಸ್ ಕಾರ್ಯಕರ್ತರು ಶಹಾಪುರ ಠಾಣೆ ಎದುರು ಧರಣಿ ನಡೆಸಿದರು. ಮಾಜಿ ನಗರ ಸೇವಕ ಭಾತಕಾಂಡೆ ಎಂಬುವವರ ಮನೆ ಮೇಲೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿದರು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಕಿಡಿ ಹೊತ್ತಿಕೊಳ್ಳುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಹಬದಿಗೆ ತಂದಿದ್ದು, ಎಂಇಎಸ್ ಕಾರ್ಯಕರ್ತರು ಘರ್ಷಣೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ಶಹಾಪುರ ಠಾಣೆ ಎದರು ಧರಣಿ ನಡೆಸಿದರು. ಭಾತಖಾಂಡೆ ಅವರ ಮನೆಯ ಖುರ್ಚಿಗಳನ್ನು ಸುಟ್ಟ ಬಗ್ಗೆ ಆರೋಪಿಸಲಾಗಿದೆ. ಡಿಸಿಪಿ ಪಿ. ವಿ. ಸ್ನೇಹಾ ಮತ್ತು ಹಿರಿಯ ಅಧಿಕಾರಿಗಳು FIR ದಾಖಲಿಸುವ ಭರವಸೆ ನೀಡಿದ್ದಾಗಿ ಮುಖಂಡರು ಕಾರ್ಯಕರ್ತರಿಗೆ ತಿಳಿಸಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.