LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಶಿವಲಿಂಗಾನಂದ ಶ್ರೀಗಳು ಕೌದಿ ವಸ್ತ್ರವನ್ನು ಧರಿಸಿ ಭಕ್ತಾಧಿಗಳಿಗೆ ದರ್ಶನಾರ್ಶೀವಾದ.!

 

ಚಿತ್ರದುರ್ಗ: ಚಿತ್ರದುರ್ಗ ನಗರದ ಕರುವಿನಕಟ್ಟೆ ವೃತ್ತದಲ್ಲಿನ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯುತ್ತಿರುವ 96ನೇ ಶಿವರಾತ್ರಿ ಸಪ್ತಾಹದ ಅಂತಿಮ ದಿನವಾದ ಇಂದು ಶಿವಲಿಂಗಾನಂದ ಶ್ರೀಗಳು ಕೌದಿ ವಸ್ತ್ರವನ್ನು ಧರಿಸುವುದರ ಮೂಲಕ ಭಕ್ತಾಧಿಗಳಿಗೆ ದರ್ಶನಾರ್ಶೀವಾದವನ್ನು ನೀಡಿದರು.

ಇಂದು ಸಂಜೆ ಶ್ರೀಮಠದ ಆವರಣದಲ್ಲಿ ಚಿಂದಿ ಬಟ್ಟೆಯಿಂದ ನೇಯ್ಗೆ ಮಾಡಿದ ವಸ್ತ್ರವನ್ನು ಧರಿಸಿದ ಶ್ರೀಗಳು ಒಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಮಣ್ಣಿನ ತಟೆಯನ್ನು ಹಿಡಿದು ಕೊರಳಲ್ಲಿ ತಂಟೆ ಹೂವಿನ ಹಾರವನ್ನು ಹಾಕಿಕೊಂಡು ಭಕ್ತಾಧಿಗಳು ನೀಡಿದ ಕಾಣಿಕೆಯನ್ನು ಸ್ವೀಕಾರ ಮಾಡಿ ತಲೆಯಲ್ಲಿ ರುದ್ರಾಕ್ಷಿ ಕೀರಿಟವನ್ನು ಧರಿಸಿ ಮಠದ ಆವರಣದಲ್ಲಿ ಮೂರು ಸುತ್ತನ್ನು ತಿರುಗುವುದು ಮೂಲಕ ಕೌದಿ ಪೂಜೆಗೆ ಮಂಗಳವನ್ನು ಹಾಡಲಾಯಿತು.

ಈ ಸಮಯದಲ್ಲಿ ಆಪಾರ ಸಂಖ್ಯೆಯ ಭಕ್ತಾಧಿಗಳಾದ ಪುರುಷ ಮತ್ತು ಮಹಿಳಾ ಹಾಗೂ ಮಕ್ಕಳು ಶ್ರೀಗಳ ಕಾಲಿಗೆ ಎರಗುವುದರ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಈ ಕೌದಿ ಪೂಜೆಯ ಉದ್ದೇಶ, ಸಕಲ ಜೀವಾತ್ಮಾರಿಗೆ ಲೇಸನ್ನು ಬಯಸುವುದು ಆಗಿದೆ. ಇದು ಬಹಳಷ್ಟು ವರ್ಷದಿಂದ ಸಾಗಿ ಬಂದಿರುವ ಪರಂಪರೆಯಾಗಿದೆ. ಸಕಲ ಜೀವಿಗಳಿಗೆ ಶುಭವನ್ನು ಕೋರುವುದು ಹಾರೈಸುವುದು ಕೌದಿ ಪೂಜೆಯನ್ನು ನಡೆಸಲಾಗುತ್ತಿದೆ. ಎಲ್ಲಾ ಬಟ್ಟೆಯ ಚಿಂದಿಗಳಿಂದ ತಯಾರು ಮಾಡಿದ ವಸ್ತ್ರವಾಗಿದೆ, ಇದನ್ನು ಧರಿಸುವುದರಿಂದ ಯಾವುದೇ ರೋಗಗಳು ಬರುವುದಿಲ್ಲ ಎಂದ ಶ್ರೀಗಳು ಜೀವನದಲ್ಲಿ ಮತಿಗಳು ಭೀನ್ನವಾಗಿರುತ್ತವೆ ಸಂಸ್ಕಾರಗಳು ಭೀನ್ನವಾಗಿರುತ್ತವೆ. ಈ ಭೀನ್ನತೆಯಲ್ಲಿ ಸಕಲ ಜೀವಾತ್ಮನು ಏಕಗ್ರತೆಯನ್ನು ಮಾಡಿಸಿದಾಗ ನಮ್ಮಲ್ಲಿ ಏಕಾಗ್ರತೆ ಕಾಣುತ್ತದೆ ಎಂಬ ಅರ್ಥದಿಂಧ ಸಿದ್ದಾರೂಢ ಮಹತ್ತರು ಈ ಕೌದಿ ಪೂಜೆಯನ್ನು ಪ್ರಾರಂಭ ಮಾಡಿದರು ಎಂದರು.

ಕುಲ ಬೇದ ಜಾತಿ ಬೇದ ವರ್ಗ ಬೇಧ ವರ್ಣ ಬೇಧವನ್ನು ಹೊರತು ಪಡಿಸಿ ಮಾನವ ಕುಲಕ್ಕೆ ಒಳಿತಾಗÀಲಿ ಎಂಬ ಉದ್ದೇಶ ಇದಾಗಿದೆ. ಆಧ್ಮಾತ್ ಚಿಂತನೆ ಒಂದೇ ಸಾಧನೆ ಎಂದು ತೋರಿಸಿದವರು ಸಿದ್ದರೂಢರು. ಕೌದಿ ಪೂಜೆಯನ್ನು ಮಾಡುವುದರ ಮೂಲಕ ಎಲ್ಲರಿಗೂ ಹಿತ ಶುಭವನ್ನು ಕೋರಲಾಗುವುದು ಎಂದು ಶಿವಲಿಂಗಾ ನಂದ ಶ್ರೀಗಳು ತಿಳಿಸಿದರು.

ಈ ಸಂದರ್ಭದಲ್ಲಿ  ಆದಿ ಚುಂಚನಗಿರಿಯ ಪ್ರಕಾಶನಾಥ್ ಶ್ರೀಗಳು, 96ನೇ ಮಹಾ ಶಿವರಾತ್ರಿ  ಮಹೋತ್ಸವದ ಅಧ್ಯಕ್ಷರಾದ ಭಾಸ್ಕರ್, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಜಿ.ಪಂ ಮಾಜಿ ಅಧ್ಯಕ್ಷರಾದ ಸೌಭಾಗ್ಯ ಬಸವರಾಜನ್, ಶ್ರೀ ಮಠದ ಭಕ್ತರಾದ ನಾಗರಾಜ್ ಸಗಂ, ಸತೀಶ್, ಗೋಪಾಲಸ್ವಾಮಿನಾಯ್ಕ್, ಪೈಲ್ವಾನ್ ತಿಪ್ಪೇಸ್ವಾಮಿ, ಪ್ರಶಾಂತ್, ಪ್ರವೀಣ್, ನಿರಂಜನ, ಗಣಪತಿಶಾಸ್ತ್ರಿ, ತಿಪ್ಪೇಸ್ವಾಮಿ, ವೆಂಕಟೇಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026