Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಯೂಟ್ಯೂಬ್‌ ನಲ್ಲಿ 500 ಕೋಟಿ ವೀಕ್ಷಣೆ ಕಂಡ ‘ಶ್ರೀ ಹನುಮಾನ್ ಚಾಲೀಸಾ’ ; ಡಿಜಿಟಲ್ ಲೋಕದಲ್ಲಿ ಇತಿಹಾಸ ಸೃಷ್ಟಿ

ನವದೆಹಲಿ: ಟಿ-ಸೀರೀಸ್ (T-series) ನ ಭಕ್ತಿಗೀತೆ, ‘ಶ್ರೀ ಹನುಮಾನ್ ಚಾಲೀಸಾ’ (Shree Hanuman Chalisa) ಇತಿಹಾಸ ನಿರ್ಮಿಸಿದೆ. ‘ಶ್ರೀ ಹನುಮಾನ್ ಚಾಲೀಸಾ’ವು ಯೂಟ್ಯೂಬ್‌ನಲ್ಲಿ 5 ಬಿಲಿಯನ್ (500 ಕೋಟಿ) ವೀಕ್ಷಣೆಗಳನ್ನು ಗಳಿಸಿದ ಭಾರತದ ಮೊದಲ ವೀಡಿಯೊಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗುಲ್ಶನ್ ಕುಮಾರ ಅವರ ಈ ಹನುಮಾನ್ ಚಾಲೀಸಾವು ಸಾರ್ವಕಾಲಿಕವಾಗಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.

ಟಿ-ಸೀರೀಸ್‌ನ ಈ ವೀಡಿಯೊ 500 ಕೋಟಿ ವೀಕ್ಷಣೆಗಳನ್ನು ಪಡೆದಿದ್ದು, ಇಂದಿಗೂ ಇದರ ವೀಕ್ಷಣೆಗಳ ಸಂಖ್ಯೆ ಏರುತ್ತಲೇ ಇದೆ. ಈ ಸಂಖ್ಯೆಯು ಯಾವುದೇ ಬಾಲಿವುಡ್, ಪಂಜಾಬಿ ಅಥವಾ ಇತರೆ ಪ್ರಮುಖ ಸೂಪರ್‌ಸ್ಟಾರ್ ಹಾಡುಗಳ ವೀಕ್ಷಣೆಗಿಂತಲೂ ಹೆಚ್ಚಾಗಿದೆ.
ಪ್ರಮುಖ ಮೈಲಿಗಲ್ಲು
ಈ ಸಾಧನೆ ಮಾಡಿದ ಭಾರತದ ಏಕೈಕ ವೀಡಿಯೊ ‘ಶ್ರೀ ಹನುಮಾನ್ ಚಾಲೀಸಾ’ ಆಗಿದೆ. ಇದು ಯೂಟ್ಯೂಬ್‌ನಲ್ಲಿ ಸಾರ್ವಕಾಲಿಕವಾಗಿ ಹೆಚ್ಚು ವೀಕ್ಷಿಸಲ್ಪಟ್ಟ ಟಾಪ್ 10 ವೀಡಿಯೊಗಳ ಪಟ್ಟಿಗೆ ಸೇರಿದೆ.
ಈ ವಿಡಿಯೋವನ್ನು ಮೇ 10, 2011 ರಂದು ಟಿ-ಸೀರೀಸ್‌ ಬಿಡುಗಡೆ ಮಾಡಿತ್ತು. 14 ವರ್ಷ ಹಳೆಯದಾದ ಈ ವೀಡಿಯೊ ಇನ್ನೂ ಜನಪ್ರಿಯವಾಗಿದೆ. ಹರಿಹರನ್ ಅವರು ಈ ‘ಶ್ರೀ ಹನುಮಾನ್ ಚಾಲೀಸಾ’ ವನ್ನು ಹಾಡಿದ್ದಾರೆ ಮತ್ತು ಲಲಿತ್ ಸೇನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಟಿ-ಸೀರೀಸ್‌ನ ಈ ವಿಡಿಯೋವನ್ನು ಶಂಭು ಗೋಪಾಲ ನಿರ್ದೇಶಿಸಿದ್ದಾರೆ.
ಜಾಗತಿಕವಾಗಿ, ‘ಬೇಬಿ ಶಾರ್ಕ್ ಡ್ಯಾನ್ಸ್’ (1638 ಕೋಟಿ ವೀಕ್ಷಣೆಗಳು), ‘ಡೆಸ್ಪಾಸಿಟೊ’ (885 ಕೋಟಿ ವೀಕ್ಷಣೆಗಳು), ‘ವೀಲ್ಸ್ ಆನ್ ದಿ ಬಸ್’ (816 ಕೋಟಿ ವೀಕ್ಷಣೆಗಳು ), ‘ಬಾತ್ ಸಾಂಗ್’ (728 ಕೋಟಿ ವೀಕ್ಷಣೆಗಳು) ಮತ್ತು ‘ಜಾನಿ ಜಾನಿ ಯೆಸ್ ಪಾಪಾ’ (712 ಕೋಟಿ ವೀಕ್ಷಣೆಗಳು) ನಂತಹ ವೀಡಿಯೊಗಳು ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಈಗ ಭಾರತದ ‘ಶ್ರೀ ಹನುಮಾನ್ ಚಾಲೀಸಾ’ ವೀಡಿಯೊ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊಗಳ ಅಪರೂಪದ ಜಾಗತಿಕ ಲೀಗ್‌ನಲ್ಲಿ ಸ್ಥಾನ ಪಡೆದಿದೆ.

ಭೂಷಣಕುಮಾರ ಅವರಿಂದ ಕೃತಜ್ಞತೆ
ಈ ಸಂದರ್ಭದಲ್ಲಿ ಟಿ-ಸೀರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಭೂಷಣಕುಮಾರ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. “ಹನುಮಾನ್ ಚಾಲೀಸಾ ನನ್ನನ್ನೂ ಒಳಗೊಂಡಂತೆ ಲಕ್ಷಾಂತರ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನನ್ನ ತಂದೆ, ಗುಲ್ಶನ್ ಕುಮಾರ ಅವರು ಆಧ್ಯಾತ್ಮಿಕ ಸಂಗೀತವನ್ನು ಪ್ರತಿ ಮನೆಗೂ ತಲುಪಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಮತ್ತು ಈ ಸಾಧನೆಯು ಅವರ ದೃಷ್ಟಿಕೋನದ ಪ್ರತಿಬಿಂಬವಾಗಿದೆ. 500 ವೀಕ್ಷಣೆಗಳನ್ನು ಮೀರಿ ಮತ್ತು ಯೂಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಟಾಪ್ 10 ವಿಡಿಯೋಗಳಲ್ಲಿ ಸೇರಿರುವುದು ಕೇವಲ ಡಿಜಿಟಲ್ ಸಾಧನೆಯಲ್ಲ; ಇದು ಜನರ ಅಚಲವಾದ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ. ತುಳಸೀದಾಸರು ರಚಿಸಿದ ಈ ಹನುಮಾನ್ ಚಾಲೀಸಾವು ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಹಿಂದೂಗಳ ದೈನಂದಿನ ಪ್ರಾರ್ಥನೆಯ ಭಾಗವಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ