LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ; ಶ್ರೀ ಶಾಂತವೀರ ಸ್ವಾಮೀಜಿ

 

ಹೊಸದುರ್ಗ: ಬಸವಾದಿ ಶರಣರ ವಚನಗಳು ಮತ್ತು ಸಂವಿಧಾನದ ಆಶಯದಂತೆ ಕಳೆದ 28 ವರ್ಷಗಳಿಂದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು, ಶ್ರೀಮಠ ಇಲ್ಲಿಯವರೆಗೂ 132 ಅಂತರ್ಜಾತಿ ವಿವಾಹಗಳಿಗೆ ಸಾಕ್ಷಿಯಾಗಿದೆ ಎಂದು ಕುಂಚಿಟಿಗ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರುಗಳಾದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು

ಪಟ್ಟಣದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಶನಿವಾರ ಹೊಸದುರ್ಗ ತಾಲ್ಲೂಕಿನ ಹುಲೇನಹಳ್ಳಿ ಗ್ರಾಮದ ಕುಂಚಿಟಿಗ ಸಮಾಜದ ವರ ರಂಗನಾಥ ಹಾಗೂ ಹೊಸದುರ್ಗ ಪಟ್ಟಣದ ಭೋವಿ ಸಮಾಜದ ವಧು ನಂದಿನಿರವರಿಗೆ ಲಿಂಗ ಸಂಸ್ಕಾರ, ದೀಕ್ಷೆ ನೀಡಿ ಮಾತನಾಡಿದರು.

ಹೆಣ್ಣು-ಗಂಡು ಒಂದಾದರೆ, ಯಾವುದೇ ಜಾತಿ-ಧರ್ಮ ಅಡ್ಡ ಬರಬಾರದು. ಅದನ್ನೇ ವಚನ ಧರ್ಮ ಮತ್ತು ಸಂವಿಧಾನ ಧರ್ಮ ಹೇಳಿದ್ದು. ನಾವು ಪೀಠ ಅಲಂಕರಿಸಿದಾಗಿನಿಂದಲೂ ಅಂತರ್ ಧರ್ಮ ಮತ್ತು ಅಂತರ್ಜಾತಿ ವಿವಾಹಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಅಂತರ್ಜಾತಿ ವಿವಾಹಗಳು ಸಮಾಜದಲ್ಲಿನ ಜಾತಿ ಮತ್ತು ದ್ವೇಷ ಕಡಿಮೆ ಮಾಡಲು, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಹಾಗೂ ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಸಹಾಯ ಮಾಡುತ್ತವೆ ಎಂದರು.

ಮೊನ್ನೆ (ಶುಕ್ರವಾರ) ಕುಂಚಿಟಿಗ ಸಮಾಜದ ವರ, ನಾಯಕ ಸಮಾಜದ ವಧುವಿಗೆ ಇಂದು(ಶನಿವಾರ) ಕುಂಚಿಟಿಗ ಸಮಾಜದ ವರ, ಭೋವಿ ಸಮಾಜದ ವಧುವಿಗೆ ದೀಕ್ಷಾ ಸಂಸ್ಕಾರ ನೀಡಲಾಗಿದೆ. ಜಾತ್ಯಾತೀತ ತತ್ವ ಮತ್ತು ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳೋಣ. ಹೆಣ್ಣು-ಗಂಡಿನ ಅನುಪಾತ ಕಡಿಮೆಯಾಗಬೇಕಾದರೆ, ಜಾತಿ-ಧರ್ಮ ಅಡ್ಡ ಬಾರದಂತೆ ವಿವಾಹವಾಗಬೇಕಿದೆ. ವಿವಾಹವಾದ ನಂತರ ಸತಿಪತಿಗಳು ಆಚಾರ-ವಿಚಾರಗಳಿಗೆ ಬದ್ಧರಾಗಿ ನಡೆದಾಗ, ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.

ಸಮಾನತೆ ಮತ್ತು ಭಾತೃತ್ವವನ್ನು ಸಾರುವ ತತ್ವವನ್ನೇ ಅನುಸರಿಸಿಕೊಂಡಿರುವ ಕುಂಚಿಟಿಗ ಮಹಾಸಂಸ್ಥಾನ ಮಠ ಕಳೆದ 28 ವರ್ಷಗಳಿಂದ ಜಾತಿ ನಿರ್ಮೂಲನೆ. ಮೌಡ್ಯ. ಕಂದಾಚಾರ. ದುರಭ್ಯಾಸ. ದುರುಗುಣಗಳನ್ನು. ದೂರ ಮಾಡುವ ಕಾಯಕ ನಿರಂತರ ಸಾಗಿದೆ ಕೇವಲ ಆಶೀರ್ವಚನಕ್ಕೆ ಭಾಷಣಕ್ಕೆ ಸೀಮಿತವಾಗದೆ ಸರ್ವ ಜನಾಂಗದೊಂದಿಗೆ ಹಾಗೂ ಸರ್ವ ಜನಾಂಗದ ಮಠಗಳೊಂದಿಗೆ ಕುಂಚಿಟಿಗ ಮಹಾಸಂಸ್ಥಾನ ಮಠ ಸಹೋದರತೆ ಸಹ ಬಾಳ್ವೆಯನ್ನು ಪ್ರಮಾಣಿಕವಾಗಿ ನಿರ್ವಹಿಸುತ್ತಿದೆ ದೊಡ್ಡ ದೊಡ್ಡ ಆಶೀರ್ವಚನ ನೀಡುವ ಕೆಲವರು ಆದರ್ಶ ಹೇಳಿದರೆ ಸಾಲದು. ಸಣ್ಣ ಮಠಗಳನ್ನು ಮತ್ತು ಸಣ್ಣ ಸಮುದಾಯಗಳನ್ನು ನಮ್ಮವರೇಂದು ಭಾವಿಸಿ, ಅವರ ಪ್ರಗತಿಗೆ ಉನ್ನತಿಗೆ ಸಲಹೆ ಸಹಕಾರ ನೀಡಬೇಕಾಗಿರುವುದು ಪಾರಂಪರಿಕ ಮಠಗಳ ಆದ್ಯ ಕರ್ತವ್ಯ ಆದರೆ ಕೆಲವರು ತಮ್ಮ ಪ್ರಗತಿಯನ್ನೇ ಸಾಧಿಸುತ್ತಾ ಸಾಗಿದ್ದಾರೆ ಮಾತಿನಲ್ಲಿ ಲೇಖನಗಳಲ್ಲಿ ಜಾತ್ಯತೀತ ಮಾತನಾಡುವ ಜಾಣರು ಅವಕಾಶ ಬಂದಾಗ ತಾವಸ್ತೆ ಬೆಳೆಯುವ ಆಲೋಚನೆ ಮಾಡುತ್ತಾರೆ ಮಾಡುತ್ತಿದ್ದಾರೆ

ಕುಂಚಿಟಿಗ ಸಮಾಜದಲ್ಲಿ ಒಂದು ಪರಂಪರೆ ಇದೆ ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ಮುನ್ನ ಗುರುಗಳಿಂದ ಸಂಸ್ಕಾರ ಪಡೆದು ದೀಕ್ಷೆ ಸ್ವೀಕರಿಸುವುದು ವಾಡಿಕೆ ಹಾಗೂ ಹಳ್ಳಿಗಳಲ್ಲಿ ಯಾವುದೇ ಗಲಾಟೆ ಗದ್ದಲ ನಡೆದ ಸಂದರ್ಭದಲ್ಲಿ ಪಾದರಕ್ಷೆಗಳನ್ನು ಮುಟ್ಟಿದರೆ ಶ್ರೀಮಠಕ್ಕೆ ಭೇಟಿ ನೀಡಿ ಗುರುಗಳಿಂದ ತೀರ್ಥ ಪ್ರೋಕ್ಷಣೆ ಮಾಡಿಸಿಕೊಂಡು ನಂತರ ಮನೆಗೆ ಪ್ರವೇಶ ಮಾಡುತ್ತಾರೆ

ಗುರುಗಳಂತೆ ಸಮಾಜವು ಜಾತ್ಯತೀತ ಮನೋಭಾವನೆ ಹೊಂದಿರುವುದು ಉತ್ತಮ ಬೆಳವಣಿಗೆ ಹೆಣ್ಣು ಮತ್ತು ಗಂಡಿನ ಎರಡು ಕಡೆಯವರು ಶ್ರೀಮಠಕ್ಕೆ ಅತ್ಯಂತ ಸಂತೋಷದಿಂದ ಬಂದು ದೀಕ್ಷೆ ಸಂಸ್ಕಾರ ಸ್ವೀಕರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವುದು ಸಂತಸದ ವಿಚಾರ ಶ್ರೀಮಠ ಯಾವುದನ್ನು ಒತ್ತಾಯ ಪೂರಕವಾಗಿ ಹೇರುವುದಿಲ್ಲ ಅವರಾಗಿ ಸ್ವಯಂ ಪ್ರೇರಣೆಯಿಂದ ಬಂದವರಿಗೆ ದಾರಿ ತೋರುತ್ತವೆ ಎಂದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026