LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಸಿದ್ದರಾಮಯ್ಯಗೆ ಗೇಟ್ ಪಾಸ್ ನೀಡೋದು ಪಕ್ಕಾ'- ಆರ್. ಅಶೋಕ್

ಬೆಂಗಳೂರು : ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. ಅವ್ರನ್ನ ಅತಂತ್ರ ಮಾಡಲು ಯಾರು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಗೇಟ್ ಪಾಸ್ ನೀಡೋದು ಪಕ್ಕಾ ಅಂತ ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಒಬಿಸಿ ಸಲಹಾ ಮಂಡಳಿಗೆ ಸಿಎಂ ಅಧ್ಯಕ್ಷರಾದ ವಿಚಾರವಾಗಿ ಮಾತನಾಡಿದ ಅವರು, "ಎರಡೂವರೆ ವರ್ಷದ ಅಗ್ರಿಮೆಂಟ್ ಬಗ್ಗೆ ಕಳೆದ 2 ವರ್ಷಗಳಿಂದಲೂ ಚರ್ಚೆ ಇದೆ. ಡಿಕೆಶಿ ಸಹ ಅಗ್ರಿಮೆಂಟ್‌ಗೆ ಒಪ್ಕೊಂಡಿದ್ದಾರೆ. ನಾನು 6 ತಿಂಗಳಿಂದ ಬದಲಾವಣೆ ಗ್ಯಾರಂಟಿ ಅಂತ ಹೇಳ್ತಿದ್ದೇನೆ. ಸಿದ್ದರಾಮಯ್ಯರನ್ನ ಅತಂತ್ರ ಮಾಡಲು ಕುತಂತ್ರ ಮಾಡ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯಗೆ ಗೇಟ್‌ಪಾಸ್ ನೀಡೋದು ಪಕ್ಕಾ" ಎಂದಿದ್ದಾರೆ.

"ಶಾಸಕರೇ ಸಿಎಂ ಬದಲಾವಣೆ ಬಗ್ಗೆ ಮಾತಾಡ್ತಿದ್ದಾರೆ. ರಾಜಣ್ಣ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕ್ರಾಂತಿ ಆಗೋದು ಗ್ಯಾರಂಟಿ, ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ. 2 ವರ್ಷದಿಂದ ಸರ್ಕಾರ ಟೇಕ್ ಆಫ್ ಆಗಿಲ್ಲ. ಕಾಗೆ ಕೂರೋದಿಕ್ಕೂ ಕೊಂಬೆ ಬೀಳೋದಕ್ಕೂ ಸರಿಯಾಗಿದೆ. ಈಗ ಸಿದ್ದರಾಮಯ್ಯ ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿದ್ದಾರೆ" ಎಂದು ಹೇಳಿದ್ದಾರೆ.

"ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗೋದು ಗ್ಯಾರಂಟಿ ಆಗಿದೆ. ಸಿದ್ದರಾಮಯ್ಯ ದೆಹಲಿಗೆ ಹೋದರೆ ಇಲ್ಲಿಗೆ ಯಾರು ಬರ್ತಾರೆ? ಮಲ್ಲಿಕಾರ್ಜುನ ಖರ್ಗೆ ಬರ್ತಾರೋ? ಪರಮೇಶ್ವರ್ ಬರ್ತಾರೋ? ಡಿಕೆಶಿ ಬರ್ತಾರೊ? ಖರ್ಗೆಯವರಿಗೆ ಒಂದ್ಸಲ ಸಿಎಂ ಆಗೋ ಆಸೆ ಇದೆ. ಅವರೇ ಬರ್ತಾರಾ ನೋಡಬೇಕು. ಖರ್ಗೆ ಪ್ರತೀ ಸಲ ಸಿಎಂ ಹುದ್ದೆ ಹತ್ತಿರ ಬರ್ತಾರೆ, ಕೊನೇ ಕ್ಷಣಕ್ಕೆ ಕೊಕ್ ಆಗ್ತಾರೆ. ಈಗ ಖರ್ಗೆ ಅವರೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು, ಈಗ ಖರ್ಗೆ ಬಂದರೂ ಬರಬಹುದು. ಡಿಕೆಶಿ ಈಗಾಗಲೇ ಸಿಎಂ ಪೋಸ್ಟ್ ಮೇಲೆ ಟವೆಲ್ ಹಾಕಿ ಕೂತಿದ್ದಾರೆ. ಇನ್ನೂ ಎರಡೂವರೆ ವರ್ಷ ಈ ಸರ್ಕಾರದಲ್ಲಿ ಅತಂತ್ರತೆ ಗ್ಯಾರಂಟಿ" ಎಂದು ವಾಗ್ದಾಳಿ ನಡೆಸಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026