Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಸಿದ್ಧಾರ್ಥ ಗೌತಮ ಬುದ್ಧ ವೃತ್ತ ಲೋಕಾರ್ಪಣೆ

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ(ವಿಜಯ್ ನಗರ):
ಹರಿಹರ ರಸ್ತೆಯಲ್ಲಿನ ಶ್ರೀ ಗುರು ಪಿ.. ಯು. ಕಾಲೇಜ್ ಬಳಿ ನಾಲ್ಕು ರಸ್ತೆಗಳು ಸಂಧಿಸುವ ವೃತ್ತಕ್ಕೆ ಇಂದು "ಸಿದ್ಧಾರ್ಥ ಗೌತಮ ಬುದ್ಧ ವೃತ್ತ " ಎಂದು ನಾಮಕರಣ ಮಾಡಿ ನಾಮಫಲಕ ಉದ್ಘಾಟಿಸಲಾಯಿತು.

 ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ಹಂಪಿ ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್ ಇವರ ವತಿಯಿಂದ ನಗರದ ಹೊರವಲಯದಲ್ಲಿ ಬರುವ ಶ್ರೀ ಗುರು ಪಿ ಯು ಕಾಲೇಜು ಹತ್ತಿರ ನಾಲ್ಕು ರಸ್ತೆಗಳು ಸಂಧಿಸುವ  ವೃತ್ತಕ್ಕೆ"  ಸಿದ್ಧಾರ್ಥ ಗೌತಮ ಬುದ್ಧ ವೃತ್ತ "  ಎಂದು ನಾಮಕರಣ ಮಾಡಿ ನಾಮಫಲಕ ಅಳವಡಿಸಲಾಯಿತು.

ಹೊಸಪೇಟೆ ನಗರ ಶಾಂತಿಗೆ ಹೆಸರಾಗಿದೆ. ನಗರ ಆರಂಭ ದಲ್ಲಿಯೇ   ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧ ನ ಹೆಸರಿನ ವೃತ್ತ ಇದ್ದರೆ, ನಗರಕ್ಕೆ ಶೋಬೆ ಎಂಭ  ಭಾವನೆನಂತರ ವಿಶ್ವ ನಾಯಕ, ಸಾಂಸ್ಕೃತಿಕ ನಾಯಕ, ಅಣ್ಣ ಬಸವಣ್ಣನವರ ವೃತ್ತ  ನಂತರ ವಿಶ್ವ ಜ್ಞಾನಿ, ಸಂವಿದಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ವೃತ್ತ ಈ ಮೂವರು ಮಹಾನಾಯಕರ ವೃತ್ತಗಳು ಒಂದೇ ರಸ್ಥೆಯಲ್ಲಿ ಬರುವುದು ಮತ್ತೋಂದು ವಿಶೇಷ ಎಂದುಸಾಮಾಜಿಕ ಕಾರ್ಯಕರ್ತ ಸೋಮಶೇಖರ್ ಬಣ್ಣದಮನೆ ತಿಳಿಸಿದರು.ಇದೇ ಸಂದರ್ಭದಲ್ಲಿ ನಗರದ ಹಿರಿಯರು ಬುದ್ಧಬಸವ, ಅಂಬೇಡ್ಕರ್, ರವರ ಆಶಯಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು .

 ವೃತ್ತಕ್ಕೆ ಅಧಿಕೃತ ವಾಗಿ ನಾಮಕರಣ ಮಾಡಲು ವಿಜಯನಗರ ಜಿಲ್ಲಾಧಿಕಾರಿಗಳಿಗೆ,ವಿಜಯನಗರ ಕ್ಷೇತ್ರ ಶಾಸಕ ಗವಿಯಪ್ಪ ಅವರಿಗೆ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಾಹದೇವಪ್ಪ ಅವರಿಗೆ ಅಂಚೆ ಪತ್ರದ ಮೂಲಕ ಅಧಿಕೃತವಾಗಿ ಸಿದ್ದಾರ್ಥ ಗೌತಮ ಬುದ್ಧ  ವೃತ್ತವನ್ನು ಘೋಷಣೆ ಮಾಡಬೇಕೆಂದು ಮನವಿ ಪತ್ರಗಳನ್ನು ಕಳುಹಿಸಲಾಯಿತು.

ಈ ಸಂದರ್ಭದಲ್ಲಿ  ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎನ್.ಚಿನ್ನಸ್ವಾಮಿ ಸೋಸಲೆ, ಸೋಮಶೇಖರ್ ಬಣ್ಣದಮನೆ, ಮರಡಿ ಜಂಬಯ್ಯ ನಾಯಕಸಣ್ಣ ಮಾರಪ್ಪ ಸ್ಲಂ ವೆಂಕಿ, ಶಿವಕುಮಾರ್, ಕೊಳಗಲ್ ಸೂರ್ಯನಾರಾಯಣ, ರಾಮಚಂದ್ರ ಬಾಬು, ಸಣ್ಣ ಈರಪ್ಪ, ವೀರಭದ್ರ ನಾಯಕ್, ಬಿಸಾಟಿ ಮಹೇಶ್, ವಡ್ಡಿನ ರಮೇಶ್, ಗಿರೀಶ್, ವಿನಾಯಕ್ ಶಟ್ಟರ್, ಯರಿಸ್ವಾಮಿ, ಜಯಪ್ಪ ಪಟ್ಟಿ, ಇಂತಿಯಾಜ್, ಮಾರುತಿ ಕಾಂಳ್ಳೆ, ಪಿಡಿಓ ಉಮೇಶ್, ಹೆಚ್.ಬಿ ಹಳ್ಳಿ ವಿರುಪಾಕ್ಷಿ, ಹಮಾಲಿ ಕಾರ್ಮಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ