Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ 

ಬೆಳಗಾವಿ : ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ಬ್ರಹ್ಮ ಕುಮಾರೀಸ್ ಅನಗೋಳ ಸೇವಾ ಕೇಂದ್ರದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜಯೋಗಿನಿ ಬಿಕೆ ವಿದ್ಯಾ ಅಕ್ಕನವರು ಇವತ್ತಿನ ಜಗತ್ತಿನಲ್ಲಿ ಕೇವಲ ಡಿಗ್ರಿ ಸಾಕಾಗುವುದಿಲ್ಲ. ಉದ್ಯೋಗ ಸಿಗಬೇಕಾದರೆ ಉದ್ಯಮ ಮಾಡಬೇಕಾದರೆ ನಿಮ್ಮದೇ ಆದ ಗುರುತು ಮಾಡಿಕೊಳ್ಳಬೇಕಾದರೆ ಕೌಶಲ್ಯ ಬೇಕೇ ಬೇಕು. ಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ ಯಾಗಿದೆ ಕೌಶಲ್ಯ ಅಂದರೆ ಯಾವುದೇ ಕೆಲಸವನ್ನು ಚೆನ್ನಾಗಿ ಬೇಗ ಗುಣಮಟ್ಟದಿಂದ ಮಾಡುವ ಸಾಮರ್ಥ್ಯ ಕೌಶಲ್ಯ ಅಭಿವೃದ್ಧಿಯಿಂದ ಉದ್ಯೋಗ ಅವಕಾಶ ಮತ್ತು ನಾನು ಕೆಲಸ ಮಾಡಬಲ್ಲೆ ಎಂಬ ನಂಬಿಕೆ ಬರುವುದು. ಕೌಶಲ್ಯ ಅಭಿವೃದ್ಧಿಯಿಂದ ಸ್ವತಂತ್ರವಾಗಿ ಏನಾದರೂ ಉದ್ಯೋಗ ಪ್ರಾರಂಭಿಸಬಹುದು. ಬೇರೆಯವರಿಗೂ ಉದ್ಯೋಗ ಕೊಡುವವರಾಗಬಹುದು. ಶಿಕ್ಷಣವು ನಿಮಗೆ ಜೀವನ ನಡೆಸಲು ಸಹಾಯ ಮಾಡುತ್ತದೆ. ಆದರೆ ಕೌಶಲ್ಯವು ನಿಮಗೆ ಜೀವನವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದರು. 

        
ಬಿಕೆ ಅಂಬಿಕಾ ಅಕ್ಕನವರು ಆಶೀರ್ವಚನ ನೀಡಿ ಯುವಕರು ದೇಶದ ಸಂಪತ್ತು ಯುವಕರಲ್ಲಿ ಶಾರೀರಿಕ ಬಲ ಮತ್ತು ಮಾನಸಿಕ ಬಲ ಅಪಾರ ಇರುತ್ತದೆ ಸದೃಢ ಭಾರತ ನಿರ್ಮಾಣ ಮಾಡಲು ಯುವ ಜನಾಂಗ ಹೊಸ ಹೊಸ ಕೌಶಲ್ಯಗಳನ್ನು ಕಲಿಯುವ ಅವಶ್ಯಕತೆ ಇದೆ ಕೃಷ್ಣನಿಗೆ ಬೆಣ್ಣೆಯನ್ನು ಕದೆಯುತ್ತಿದ್ದ ಎಂದು ಹೇಳುತ್ತಾರೆ. ವಾಸ್ತವಾಗಿ ಶ್ರೀ ಕೃಷ್ಣನು ಒಳ್ಳೆಯ ಗುಣಗಳೆಂಬ ಬೆಣ್ಣೆಯನ್ನು ಕದಿಯುತ್ತಿದ್ದ. ಆದ್ದರಿಂದ ಸರ್ವಗುಣ ಸಂಪಣ್ಣ 16 ಕಲೆಗಳಿಂದ ಸಂಪೂರ್ಣ ಮರ್ಯಾದ ಪುರುಷೋತ್ತಮ ಎಂದು ಗಾಯನ ಇದೆ. ಆದ್ದರಿಂದ ತಾವು ಸಹ ಶ್ರೀಕೃಷ್ಣನಂತೆ ಆಗಬೇಕು ಎಂದರು. 
     
 ಅನುರಾಧ ಅಕ್ಕನವರು ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಪಿ ಪಿ ಟಿ ಮುಖಾಂತರ ತಿಳಿಸಿಕೊಟ್ಟರು.
ಬಿಕೆ ಶೀತಲಕ್ಕನವರು ಸಂಸ್ಥೆಯ ಪರಿಚಯ ನೀಡಿದರು. ರೂಪ ಅಕ್ಕನವರು ಎಲ್ಲರಿಗೂ ರಾಜಯೋಗದ ಮೆಡಿಟೇಶನ್ ಅನುಭೂತಿ ಮಾಡಿಸಿದರು. ಬಿಕೆ ಮಹೇಶ್ ಅಣ್ಣನವರು ಸಾಫ್ಟ್ ಕಿಲ್ಸ್ ಮತ್ತು ಹಾರ್ಡ್ ಕಿಲ್ಸ್ ಬಗ್ಗೆ ತಿಳಿಸಿಕೊಟ್ಟರು. 
       
ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ದರ್ಶನ್ ಕುಲಕರ್ಣಿ, ಇಂಟೀರಿಯರ್ ಡಿಸೈನರ್ ಗೌತಮಿ ಕುಲಕರ್ಣಿ, ಮಿಥುನ್ ಕಪಿಲೇಶ್ವರಿ, ವಿಜಯ್ ಸೇರವಾಳ್ಕರ್, ಶಿವಲೀಲಾ, ಶೋಭಾ, ಪಾರ್ವತಿ,  ಮಹಾದೇವಿ, ಅಂಬರಶೇಟ್, ಮನೋಹರ್ , ದೀಪಕ್ , ಸತೀಶ್, ಅಜಿತ್, ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ