LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಫ್ಟ್‌ವೇರ್ ಇಂಜಿನೀಯರ್‌ಗೆ ಹಲ್ಲೆ

ಶಿವಮೊಗ್ಗ, ಜೂ.10 : ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಸೋಮಿನಕೊಪ್ಪ ಫ್ಲೈಓವರ್ ಬಳಿ ಹಲ್ಲೆ ನಡೆಸಿ ಅವರ ಕಾರಿನ ಗಾಜನ್ನು ಒಡೆದಿರುವ ಬಗ್ಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯ ಇಂಜಿನಿಯರ್ ಲೋಕೇಶ್ ಹಲ್ಲೆಗೊಳಗಾದವರು.

ನಗರದ ಕ್ಲಬ್ ಒಂದರಲ್ಲಿ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿ ಲೋಕೇಶ್ ಮತ್ತು ಅವರ ಸ್ನೇಹಿತ ಕಾರಿನಲ್ಲಿ ವಿನೋಬನಗರದ ಮನೆಗೆ ತೆರಳುತ್ತಿದ್ದರು. ಗೋಪಿ ಸರ್ಕಲ್‌ನಲ್ಲಿ ವಿಜಯೋತ್ಸವ ನಡೆಯುತ್ತಿತ್ತು. ರಸ್ತೆಯಲ್ಲಿ ಯುವಕರ ಇದ್ದುದರಿಂದ ಅಲ್ಲಿಂದ ಹಾದು ಹೋಗುಗ ಲೋಕೇಶ್ ಕಾರಿನ ಹಾರನ್ ಬಾರಿಸಿದ್ದರು.

ಆಗ ಕೆಲವು ಯುವಕರು ಲೋಕೇಶ್ ಮತ್ತು ಅವರ ಸ್ನೇಹಿತನ ಜೊತೆಗೆ ಜಗಳವಾಡಿದ್ದರು. ಕಾರು ಸೋಮಿನಕೊಪ್ಪದ ಫ್ಲೈಓವರ್ ಕೆಳಗೆ ತೆರಳುವಾಗ ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿ ಬಂದ ಯುವಕರು ದಾಳಿ ನಡೆಸಿದ್ದಾರೆ ಎಂದು ಎಂದು ದೂರಿನಲ್ಲಿ ಹೇಳಿದ್ದಾರೆ.

ಗಾಯಗೊಂಡಿದ್ದ ಲೋಕೇಶ್ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST