LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

3 ಸಾವಿರ ಗೃಹಿಣಿಯರಿಂದ ಗೀತೆ ಗಾಯನ

ಬೆಂಗಳೂರು : ಕನ್ನಡ ಡಿಂಡಿಮ ಪ್ರತಿಷ್ಠಾನದಿಂದ ಡಿಸೆಂಬರ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಅಗ್ರಹಾರ ದಾಸರಹಳ್ಳಿಯಲ್ಲಿ ಸಹಸ್ರಾರು ಗಾಯಕರಿಂದ ಕನ್ನಡ ಹಾಡುಗಳು ಪಂಚ ಪ್ರಕಾರಗಳಲ್ಲಿ ಕನ್ನಡ ನಾಡ ಗೀತೆಗಳು, ದಾಸರ ಪದಗಳು, ಶಿವಶರಣರ ಹಾಡುಗಳು, ಕಗ್ಗ ತತ್ವಪದಗಳು, ಜಾನಪದಗಳ 'ಸಹಸ್ರ ಕಂಠ ಗಾನ ವೈಭವ' ಎಂಬ ಕಾರ್ಯಕ್ರಮವು ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಲಿದ್ದು, ಇದೆ ಸಂದರ್ಭದಲ್ಲಿ 'ಕನ್ನಡ ಡಿಂಡಿಮ 2025 ಪ್ರಶಸ್ತಿಯನ್ನು ಪದ್ಮಭೂಷಣ ಡಾ.ರಾಜ್ ಕುಮಾರ್‌ರವರಿಗೆ ಮರಣೋತ್ತರವಾಗಿ ನೀಡಲಾಗುವುದು ಎಂದು ವಿದ್ಯಾ ವಾಚಸ್ಪತಿ ಡಾ.ವಿಶ್ವ ಸಂತೋಷ್ ಭಾರತಿ ಶ್ರೀಪಾದರು ತಿಳಿಸಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಟಿ  ನಡೆಸಿ ಮಾತನಾಡಿದ ಅವರು, ಕನ್ನಡ ಡಿಂಡಿಮ ಕನ್ನಡ ಭಾಷೆ ವಿಶಿಷ್ಟವಾಗಿ ಅಚರಿಸಬೇಕು ಮತ್ತು ಕನ್ನಡ ಭಾಷೆ ಉಳಿಸಲು ಬೆಳಸಲು ಸಂಘಟನೆ ಮಾಡುತ್ತಿದೆ.ಕನ್ನಡ ಸಂಸ್ಕೃತಿಯನ್ನು ಉಳಿಸಿದರು ಮಹಿಳೆಯರು ಅವರನ್ನ ವೇದಿಕೆಗೆ ಕರೆತರಬೇಕು ಎಂದು ಮೂರು ಸಾವಿರ ಗೃಹಿಣಿಯರಿಂದ ಗೀತೆ ಗಾಯನ ಏರ್ಪಡಿಸಲಾಗಿದೆ, ಅದು ವಿಶೇಷವಾದ ಕಾರ್ಯಕ್ರಮ ಎಂದು ತಿಳಿಸಿದರು.

ವಚನ ಸಾಹಿತ್ಯ, ದಾಸರಪದಗಳು, ಗೀಗೀ ಪದಗಳು, ಜಾನಪದ ಗೀತೆಗಳು, ಮಂಕುತಿಮ್ಮನ ಕಗ್ಗ ಮತ್ತು ಸರ್ವಜ್ಞ , ನಿಸಾರ್ ಅಹಮದ್ ನಿತ್ಯೋತ್ಸವ ಗೀತೆಗಳನ್ನು 5000ಹಣತೆಗಳನ್ನು ಹಚ್ಚಿ, ಸಾವಿರಾರು ಗೃಹಿಣಿಯರು ಎಲ್ಲರು ಸೇರಿ 15ಹಾಡುಗಳನ್ನು ಹಾಡುವ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎಮ್.ಶಿವರಾಜುರವರು ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳಸಲು ಕನ್ನಡ ಕಂಪನ್ನು ವಿಶ್ವಕ್ಕೆ ಪಸರಿಸಲು ಕನ್ನಡ ಡಿಂಡಿಮ ಪ್ರತಿಷ್ಠಾನದ ಉದ್ದೇಶವಾಗಿದೆ.ಅಗ್ರಹಾರ ದಾಸರಹಳ್ಳಿ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜನರು ಆಗಮಿಸಿ ಕಾರ್ಯಕ್ರಮಕ್ಕೆ ಯಶ್ವಸಿಗೊಳಿಸಬೇಕಾಗಿ ವಿನಂತಿಸಿದರು.

ಕಳೆದ ವರ್ಷ 2024ರಲ್ಲಿ ಕುವೆಂಪುರವರಿಗೆ ಕನ್ನಡ ಡಿಂಡಿಮ ಪ್ರಶಸ್ತಿ ಕೊಡಮಾಡಲಾಗಿತ್ತು, 2025ನೇ ಸಾಲಿನಲ್ಲಿ ಮೇರುನಟ ಡಾ.ರಾಜ್ ಕುಮಾರ್ ರವರಿಗೆ ಮರಣೋತ್ತರವಾಗಿ ಪ್ರಧಾನ ಮಾಡಲಾಗುತ್ತಿದೆ. ಖ್ಯಾತ ನಟ ಶಿವರಾಜ್ ಕುಮಾರ್, ಗೀತ ಶಿವರಾಜ್ ಕುಮಾರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸಮಾರಂಭದಲ್ಲಿ ಅವಧೂತ ವಿನಯ್ ಗುರೂಜಿ, ಅದಿಚುಂಚನಗಿರಿ ಮಠದ ಪ್ರಕಾಶನಾಥ ಗುರೂಜಿ, ಶಾಸಕರಾದ ಎಂ.ಕೃಷ್ಣಪ್ಪ, ವೊಡೆ ಪಿ.ಕೃಷ್ಣ , ಆನೇಕ ಗಣ್ಯಮಹನೀರುಗಳು.ಗಾಯನ ಕಾರ್ಯಕ್ರಮದಲ್ಲಿ ಗಾಯಕರುಗಳಾದ ಪ್ರವೀಣಿ ಡಿ.ರಾವ್, ಮಂಜೇಶ್, ಗಣೇಶ್ ಪ್ರಸಾದ್, ಸವಿತಕ್ಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗೋಷ್ಟಿಯಲ್ಲಿ  ಶ್ರೀ ಶ್ರೀ ಶ್ರೀ ವಿದ್ಯಾ ವಾಚಸ್ಪತಿ ಡಾ.ವಿಶ್ವ ಸಂತೋಷ್ ಭಾರತಿ ಶ್ರೀಪಾದರು, ಸಂಘಟನೆಯ ಪ್ರಧಾನ ಕಾರ್ಯದರ್ಶಿ, ಆಡಳಿತ ಪಕ್ಷದ ಮಾಜಿ ನಾಯಕರಾದ ಎಮ್.ಶಿವರಾಜುರವರು, ಸಂಘದ ಪದಾಧಿಕಾರಿಗಳಾದ ನವೀನ್ ಹೆಗಡೆ, ಚಿಕ್ಕಣ್ಣ, ಸೋಮಶೇಖರ್, ನಾಗರಾಜಶೆಟ್ಟಿ ರವರು ಉಪಸ್ಥಿತರಿದ್ದರು
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ