LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪಂಚಾಯಿತಿ ಚುನಾವಣೆ - ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ‘ಸೋನಿಯಾ ಗಾಂಧಿ’ ಸ್ಪರ್ಧೆ!

ಇಡುಕ್ಕಿ : ಕೇರಳದಲ್ಲಿ ನಡೆಯುತ್ತಿರುವ ಪಂಚಾಯಿತಿ ಚುನಾವಣೆಯಲ್ಲಿ ಮತದಾರರ ಗಮನ ಸೆಳೆದಿರುವ ವಿಶಿಷ್ಟ ಅಂಶವೇ, ಇಡುಕ್ಕಿ ಜಿಲ್ಲೆಯ ಮುನ್ನಾರ್ ಪ್ರದೇಶದಲ್ಲಿ ‘ಸೋನಿಯಾ ಗಾಂಧಿ’ ಎಂಬ ಹೆಸರಿನ ಅಭ್ಯರ್ಥಿ ಬಿಜೆಪಿ ಪರವಾಗಿ ಕಣಕ್ಕಿಳಿದಿರುವುದು. ಹೆಸರಿನ ಕಾರಣದಿಂದಲೇ ಈ ವಾರ್ಡ್ ಇದೀಗ ರಾಜ್ಯದ ರಾಜಕೀಯ ಕಣಗಳನ್ನು ತನ್ನತ್ತ ಸೆಳೆದಿದೆ.

ಈ ಅಭ್ಯರ್ಥಿಯ ತಂದೆ ದುರೈ ರಾಜ್, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಪಕ್ಷದ ಮೆಚ್ಚುಗೆಗಾಗಿ ತಮ್ಮ ಮಗಳನ್ನು ಸೋನಿಯಾ ಗಾಂಧಿ ಎಂದು ಹೆಸರಿಸಿದ್ದರು. ಆದರೆ ಜೀವನದ ಕವಲುಗಳು ವಿಭಿನ್ನ ದಾರಿಯಲ್ಲಿ ಸಾಗಿದ್ದು, ಸೋನಿಯಾ ಗಾಂಧಿ ಅವರು ಬಳಿಕ ಮುನ್ನಾರ್ ಪಂಚಾಯಿತಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿಜೆಪಿಯ ಸುಭಾಷ್ ರನ್ನು ವಿವಾಹವಾದರು. ನಂತರ ತಾವೂ ಬಿಜೆಪಿ ಸೇರ್ಪಡೆಯಾಗಿ, ಈ ಬಾರಿ ಪಕ್ಷದಿಂದಲೇ ಮೊದಲ ಬಾರಿಗೆ ಚುನಾವಣಾ ರಣತಂತ್ರದಲ್ಲಿ ಭಾಗಿಯಾಗಿದ್ದಾರೆ.

ಸ್ಥಳೀಯ ರಾಜಕೀಯ ಗಣಿತಕ್ಕಿಂತಲೂ ಈ ಅಭ್ಯರ್ಥಿಯ ಹೆಸರೇ ಮತದಾರರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ಅವರ ಎದುರು ಕಾಂಗ್ರೆಸ್ ಪರವಾಗಿ ಮಂಜುಳಾ ರಮೇಶ್ ಕಣಕ್ಕಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಈ ಹೆಸರಿನ ರಾಜಕೀಯ ರೀತಿಯ ಪರಿಣಾಮ ಹೇಗಿರುತ್ತದೆ ಎಂಬುದೇ ಈಗಾಗಲೇ ಕುತೂಹಲಕ್ಕೆ ಕಾರಣವಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026