ದಾವಣಗೆರೆಯಿಂದ ಜೋಗ, ಶಿರಸಿಗೆ ವಿಶೇಷ ಪ್ಯಾಕೇಜ್ ಸೌಲಭ್ಯ
ದಾವಣಗೆರೆ :ದಾವಣಗೆರೆ ಹಾಗೂ ಹರಿಹರದಿಂದ ಜೋಗ ಮತ್ತು ಶಿರಸಿಗೆ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆಯನ್ನು ಜುಲೈ 13 ರಿಂದ ಪ್ರತಿ ಶನಿವಾರ, ಭಾನುವಾರ, ರಜಾದಿನಗಳಂದು ಮಾಡಲಾಗಿದೆ.
ದಾವಣಗೆರೆ-ಶಿರಸಿ ಬೆಳಿಗ್ಗೆ 7 ಗಂಟೆಗೆ, ಶಿರಸಿ-ಜೋಗ ಮಧ್ಯಾಹ್ನ 12 ಗಂಟೆಗೆ, ಜೋಗ-ದಾವಣಗೆರೆ ಸಂಜೆ 4.30ಕ್ಕೆ ಇರುತ್ತದೆ. ಪ್ರಯಾಣದ ದರ 2 ಬದಿ ಸೇರಿ ಒಬ್ಬರಿಗೆ ರೂ.650, ಮಕ್ಕಳ ಪ್ರಯಾಣ ದರ ರೂ.500ನ್ನು ನಿಗಧಿಗೊಳಿಸಲಾಗಿದೆ. ಮುಂಗಡ ಬುಕ್ಕಿಂಗ್ ಕೌಂಟರ್ ಹಾಗೂ ಆನ್‍ಲೈನ್ ಬುಕ್ಕಿಂಗ್ ksrtc.karnataka.gov.in ಮಾಡಬಹುದೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಎಫ್ ಬಸಾಪುರ ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.