LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರ್‌ಸಿಬಿ ವಿಜಯೋತ್ಸವಕ್ಕೆ ರೂ.15 ಕೋಟಿ ಖರ್ಚು

ಬೆಂಗಳೂರು,ಜೂ.07 : ಆರ್‌ಸಿಬಿ ‘ವಿಜಯೋತ್ಸವ’ ಕಾರ್ಯಕ್ರಮಕ್ಕಾಗಿ (ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ) ಸುಮಾರು ರೂ.15 ಕೋಟಿಗೂ ಹೆಚ್ಚು ಖರ್ಚಾಗಿರುವುದಾಗಿ ಗೊತ್ತಾಗಿದೆ.
ಐಪಿಎಲ್‌ನ ಇವೆಂಟ್ ಮ್ಯಾನೇಜ್‌ಮೆಂಟ್ ಜವಾಬ್ದಾರಿ ಹೊತ್ತಿರುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯೇ ವಿಜಯೋತ್ಸವ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿತ್ತು. ಈ ಕಂಪನಿ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಕ್ಕಳಿಗೆ ಸೇರಿದ್ದು, ಸರ್ಕಾರದಲ್ಲಿ ಪ್ರಭಾವ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯೋತ್ಸವವನ್ನು ಶನಿವಾರ ಹಮ್ಮಿಕೊಳ್ಳ ಬೇಕು ಎಂಬುದು ಆರಂಭದ ಯೋಜನೆಯಾಗಿತ್ತು. ಆದರೆ, ಪ್ರಮುಖ ಸಚಿವರೊಬ್ಬರ ಒತ್ತಡದ ಕಾರಣ ತರಾತುರಿಯಲ್ಲಿ ಬುಧವಾರವೇ ನಿಗದಿ ಮಾಡಲಾಯಿತು. ಹೀಗಾಗಿ ಕ್ರೀಡಾಂಗಣ ಮತ್ತು ವಿಧಾನಸೌಧದ ಬಳಿ ಸೇರಬಹುದಾದ ಜನಸಂಖ್ಯೆ ಮತ್ತು ಅದನ್ನು ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯೋಚಿಸುವಲ್ಲಿ ಡಿಎನ್‌ಎ ಸಂಸ್ಥೆಯೂ ಎಡವಿದೆ ಎಂದು ಮೂಲಗಳು ಹೇಳಿವೆ.
ವಿಜಯೋತ್ಸವಕ್ಕೆ ಅಧಿಕಾರಿಗಳ ಒತ್ತಡ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ವಿಜಯೋತ್ಸವ ನಡೆಸಲು ಸಚಿವರು ಮಾತ್ರವಲ್ಲದೇ ಮುಖ್ಯಕಾರ್ಯದರ್ಶಿಯಾದಿಯಾಗಿ ಹಲವು ಹಿರಿಯ ಅಕಾರಿಗಳೂ ಮುತುವರ್ಜಿ ವಹಿಸಿದ್ದರು. ಆರ್‌ಸಿಬಿ 18 ವರ್ಷಗಳಲ್ಲಿ ಮೊದಲ ಬಾರಿಗೆ ಗೆದ್ದಿರುವುದರಿಂದ ವಿಧಾನಸೌಧದ ಮುಂದೆ ವಿಜಯೋತ್ಸವ ಆಚರಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಡಿಎನ್‌ಎ, ಆರ್‌ಸಿಬಿಯ ನಾಲ್ವರ ಬಂಧನ:
ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿ ತದಿಂದ ಉಂಟಾದ ಸಾವು-ನೋವು ಪ್ರಕರಣ ಸಂಬಂಧ ಆರ್‌ಸಿಬಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್‌ಎ ಮ್ಯಾನೇಜ್‌ಮೆಂಟ್ (ಇವೆಂಟ್ ಮ್ಯಾನೇಜ್‌ಮೆಂಟ್) ಸಿಬ್ಬಂದಿ ಸುನಿಲ್ ಮ್ಯಾಥ್ಯು, ಕಿರಣ್ ಮತ್ತು ಸುಮಂತ್ ಎಂಬವರನ್ನು ಕೇಂದ್ರ ಅಪರಾಧ ದಳ ಹಾಗೂ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಸ್ತುತ ಇವರುಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST