LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಎಐ ಸೃಷ್ಟಿತ ಕಂಟೆಂಟ್‌ಗೆ ಕಟ್ಟುನಿಟ್ಟಿನ ನಿಯಮ!

ನವದೆಹಲಿ : ಎಐ ಮೂಲಕ ಸೃಷ್ಟಿಸಲಾಗುವ ಫೋಟೋ, ವಿಡಿಯೋ ಹಾಗೂ ಆಡಿಯೋಗಳು ನೈಜ ವ್ಯಕ್ತಿ ಮತ್ತು ಸ್ಥಳಗಳಂತೆಯೇ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ, ಅವುಗಳ ದುರುಪಯೋಗ ತಡೆಯಲು ಕೇಂದ್ರ ಸರ್ಕಾರ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ರೂಪಿಸಿದೆ. ಡೀಪ್‌ಫೇಕ್ ವಿಡಿಯೋಗಳು, ಸಿಂಥೆಟಿಕ್ ಆಡಿಯೋಗಳು ಮತ್ತು ತಿರುಚಿದ ದೃಶ್ಯಗಳನ್ನು ಇದೀಗ ಐಟಿ ನಿಯಮಗಳ ವ್ಯಾಪ್ತಿಗೆ ತರಲಾಗಿದ್ದು, ಫೆಬ್ರುವರಿ 20ರಿಂದ ಈ ನಿಯಮಗಳು ಜಾರಿಗೆ ಬರಲಿವೆ.

ಹೊಸ ನಿಯಮಗಳ ಪ್ರಕಾರ, ಎಐ ಸೃಷ್ಟಿತ ಅಥವಾ ಸಿಂಥೆಟಿಕ್ ಕಂಟೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆದಾಗ ಅದು ಸ್ಪಷ್ಟವಾಗಿ ಗುರುತಿಸಬಹುದಾದ ರೀತಿಯಲ್ಲಿ ಲೇಬಲ್ ಮಾಡಬೇಕು. ಮೆಟಾಡೇಟಾ ಹಾಗೂ ಯೂನಿಕ್ ಐಡೆಂಟಿಫೈರ್‌ಗಳನ್ನು ಎಂಬೆಡ್ ಮಾಡುವುದು ಕಡ್ಡಾಯವಾಗುತ್ತದೆ. ಒಟ್ಟಿನಲ್ಲಿ, ಬಳಕೆದಾರರಿಗೆ ಅದು ನೈಜವೋ ಅಥವಾ ಕೃತಕವೋ ಎಂಬುದು ತಕ್ಷಣ ಗೊತ್ತಾಗುವಂತೆ ವ್ಯವಸ್ಥೆ ಇರಬೇಕು.

ಸರ್ಕಾರ ನೀಡಿದ ವ್ಯಾಖ್ಯಾನದ ಪ್ರಕಾರ, ಕಂಪ್ಯೂಟರ್ ಮೂಲಕ ನೈಜವೆನಿಸುವ ರೀತಿಯಲ್ಲಿ ಯಾವುದೇ ಧ್ವನಿ ಅಥವಾ ದೃಶ್ಯವನ್ನು ಸೃಷ್ಟಿಸಿದರೆ ಅಥವಾ ಬದಲಾಯಿಸಿದರೆ ಅದನ್ನು ಸಿಂಥೆಟಿಕ್ ಕಂಟೆಂಟ್ ಎಂದು ಪರಿಗಣಿಸಲಾಗುತ್ತದೆ. ಆದರೆ ಸಾಮಾನ್ಯ ಫೋಟೋ ಅಥವಾ ವಿಡಿಯೋ ಸಂಪಾದನೆ-ಉದಾಹರಣೆಗೆ ಕಲರ್ ಕರೆಕ್ಷನ್, ಬ್ರೈಟ್ನೆಸ್ ಹೊಂದಾಣಿಕೆ ಅಥವಾ ನಾಯ್ಸ್ ರಿಮೂವಲ್-ಇವುಗಳಿಗೆ ನಿಯಮ ಅನ್ವಯಿಸುವುದಿಲ್ಲ.

ಸೋಷಿಯಲ್ ಮೀಡಿಯಾ ಬಳಕೆದಾರರು ತಾವು ಅಪ್‌ಲೋಡ್ ಮಾಡುವ ಕಂಟೆಂಟ್ ಎಐ ಸೃಷ್ಟಿತವಾಗಿದ್ದರೆ ಅದನ್ನು ಘೋಷಿಸಬೇಕು. ಪ್ಲಾಟ್‌ಫಾರ್ಮ್‌ಗಳು ಕೂಡ ಅಪ್‌ಲೋಡ್ ಸಮಯದಲ್ಲಿ ಅದು ಎಐ ಜನರೇಟೆಡ್ ಆಗಿದೆಯೇ ಎಂದು ಕೇಳುವ ವ್ಯವಸ್ಥೆ ಮಾಡಬೇಕು. ಜೊತೆಗೆ, ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಅಪ್‌ಲೋಡ್ ಆಗುವ ಎಐ ಕಂಟೆಂಟ್‌ಗಳನ್ನು ಪತ್ತೆಹಚ್ಚಲು ಸ್ವಯಂಚಾಲಿತ ಸಾಧನಗಳ ಮೂಲಕ ಕ್ರಾಸ್‌ ಪರಿಶೀಲನೆ ನಡೆಸುವುದು ಕಡ್ಡಾಯವಾಗಿದೆ.

ಇದೇ ವೇಳೆ, ಕಾನೂನುಬದ್ಧ ಆದೇಶದ ಮೇರೆಗೆ ವಿವಾದಾತ್ಮಕ ಕಂಟೆಂಟ್ ತೆಗೆದುಹಾಕುವ ಅವಧಿಯನ್ನು ಸರ್ಕಾರ ಕಡಿತಗೊಳಿಸಿದೆ. ಮೊದಲು 36 ಗಂಟೆ ಇದ್ದ ಸಮಯವನ್ನು 3 ಗಂಟೆಗೆ, 15 ದಿನಗಳ ಅವಧಿಯನ್ನು 7 ದಿನಗಳಿಗೆ ಹಾಗೂ 24 ಗಂಟೆಯ ಗಡುವನ್ನು 12 ಗಂಟೆಗೆ ಇಳಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಮಕ್ಕಳ ಲೈಂಗಿಕ ದುರ್ಬಳಕೆಯ ವಿಷಯಗಳು, ಅಶ್ಲೀಲ ಕಂಟೆಂಟ್, ನಕಲಿ ಎಲೆಕ್ಟ್ರಾನಿಕ್ ದಾಖಲೆಗಳು, ನೈಜ ವ್ಯಕ್ತಿಯನ್ನು ಹೋಲುವ ಡೀಪ್‌ಫೇಕ್ ವಿಡಿಯೋಗಳು ಮತ್ತು ನಕಲಿ ಧ್ವನಿಗಳನ್ನು ಸೃಷ್ಟಿಸುವುದು ಭಾರತೀಯ ನ್ಯಾಯ ಸಂಹಿತೆ ಹಾಗೂ ಪೋಕ್ಸೋ ಕಾಯ್ದೆಯಡಿ ಗಂಭೀರ ಅಪರಾಧಗಳಾಗುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.

ಎಐ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಅದರ ದುರುಪಯೋಗ ತಡೆಯಲು ಹಾಗೂ ಸಾರ್ವಜನಿಕರಲ್ಲಿ ನಂಬಿಕೆ ಉಳಿಸಲು ಸರ್ಕಾರದ ಈ ಕ್ರಮ ಮಹತ್ವದ ಹೆಜ್ಜೆಯಾಗಿ ಕಾಣುತ್ತಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ತಾವು ಅಪ್​ಲೋಡ್ ಮಾಡುವ ಕಂಟೆಂಟ್ ಎಐ ಸೃಷ್ಟಿತವಾಗಿದ್ದರೆ ಅದನ್ನು ನಮೂದಿಸಬೇಕು. ಇವರು ಕಂಟೆಂಟ್ ಅನ್ನು ಅಪ್​ಲೋಡ್ ಮಾಡುವ ಮುನ್ನ ಅದು ಎಐ ಜನರೇಟೆಡ್ ಹೌದಾ ಅಲ್ಲವಾ ಎಂಬುದನ್ನು ಪ್ಲಾಟ್​ಫಾರ್ಮ್​ಗಳು ಕೇಳಬೇಕು. ಫೇಸ್ಬುಕ್​ನಲ್ಲಿ ಯಾರಾದರೂ ಫೋಟೋ ಅಪ್ಲೋಡ್ ಮಾಡುವಾಗ ಇದನ್ನು ಘೋಷಿಸಬೇಕು.

ಇಷ್ಟು ಮಾತ್ರವಲ್ಲ, ಯಾರಾದರೂ ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಎಐ ಸೃಷ್ಟಿತ ಕಂಟೆಂಟ್ ಅನ್ನು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಹಾಕುವ ಸಾಧ್ಯತೆ ಇರುವುದರಿಂದ, ಆಟೊಮೇಟ್ ಟೂಲ್​ಗಳ ಮೂಲಕ ಅವುಗಳ ಕ್ರಾಸ್ ವೆರಿಫಿಕೇಶನ್ ಮಾಡಬೇಕು ಎನ್ನುತ್ತದೆ ನಿಯಮ.

ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ನಿರ್ದಿಷ್ಟ ಕಂಟೆಂಟ್ ಅನ್ನು ತೆಗೆದುಹಾಕಲು ಕಾನೂನಿನ ಆದೇಶ ಬಂದರೆ ಅದನ್ನು ಪಾಲಿಸಲು 36 ಗಂಟೆ ಇದ್ದ ಕಾಲಾವಕಾಶದ ಅವಧಿಯನ್ನು 3 ಗಂಟೆಗೆ ಇಳಿಸಲಾಗಿದೆ. 15 ದಿನಗಳಿದ್ದ ಕಾಲಾವಕಾಶವನ್ನು ಏಳು ದಿನಕ್ಕೆ ಇಳಿಸಲಾಗಿದೆ. 24 ಗಂಟೆ ಇದ್ದ ಡೆಡ್​ಲೈನ್ ಅನ್ನು 12 ಗಂಟೆಗೆ ಇಳಿಸಲಾಗಿದೆ.

ಮಕ್ಕಳ ಲೈಂಗಿಕ ದುರ್ಬಳಕೆಯ ಸರಕುಗಳು, ಅಶ್ಲೀಲ ಕಂಟೆಂಟ್, ನಕಲಿ ಎಲೆಕ್ಟ್ರಾನಿಕ್ ರೆಕಾರ್ಡ್​ಗಳು, ನೈಜ ವ್ಯಕ್ತಿಯನ್ನು ಹೋಲುವ ಡೀಪ್​ಫೇಕ್​ಗಳು ಮತ್ತು ನಕಲಿ ಧ್ವನಿಗಳನ್ನು ಸೃಷ್ಟಿಸಿದರೆ ಅದು ಭಾರತೀಯ ನ್ಯಾಯ ಸಂಹಿತೆ, ಪೋಕ್ಸೋ ಕಾಯ್ದೆ ಅಡಿಯಲ್ಲಿನ ಅಪರಾಧವಾಗುತ್ತದೆ ಎಂದು ಹೊಸ ಐಟಿ ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026