ಸಿರುಗುಪ್ಪ. ಜನವರಿ 19.ಬಲಕುಂದಿ ಗ್ರಾಮದ ಬನ್ನಿಮಹಂಕಾಳಿ ದೇವಿ ದೇವಸ್ಥಾನದ ಬಳಿಯ ಪುಷ್ಕರಣಿಯಲ್ಲಿ ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಕೆ.ಸೂಗೂರು ಗ್ರಾಮದ ಶಿವಪ್ಪ (11) ಮೃತ ವಿದ್ಯಾರ್ಥಿ. ಕುಟುಂಬದ ಸದಸ್ಯರೊಂದಿಗೆ ಭಾನುವಾರ ನಡೆದ ಜಾತ್ರೆಗೆ ಬಂದಿದ್ದ ಶಿವಪ್ಪ ಬೆಳಿಗ್ಗೆ ದೇವಸ್ಥಾನದ ಪಕ್ಕದ ಪುಷ್ಕರಣಿಯಲ್ಲಿ ಸ್ನಾನಕ್ಕೆ ತೆರಳಿದ್ದಾನೆ. ಈಜು ಬಾರದ ಕಾರಣ ಆಳದ ಪುಷ್ಕರಣಿೆಯಲ್ಲಿ ಮುಳುಗಿ ಮೃತಪಟ್ಟಿದ್ದು, ಈ ಬಗ್ಗೆತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ