LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷಿ ಇಲಾಖೆ ಜಾಗೃತ ದಳದಿಂದ ದಿಢೀರ್ ದಾಳಿ

ಶಿವಮೊಗ್ಗ , ಫೆ .18 : ಕೃಷಿ ಇಲಾಖೆಯ ಜಾಗೃತದಳ ನಗರದ ಕೀಟನಾಶಕ ಮಳಿಗೆಯೊಂದರ ಮೇಲೆ ಸುಮಾರು 17 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಕೀಟ ನಾಶಕವನ್ನು ಜಪ್ತಿ ಮಾಡಿದೆ.
ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್ ಮೇಲೆ  ದಾಳಿ ಮಾಡಿದ ಜಾಗೃತ ದಳ ತಂಡ ಮಳಿಗೆಯಲ್ಲಿ  ಗುಜರಾತ್ ಕಂಪನಿಯ ರ‍್ಯಾಟಲ್ ಎಂಬ 1008  ಕೆ ಜಿ ಅಲ್ಟಿಮ ಸರ್ಚ್ ವಾಪಿ ಪೀಡೆ ನಾಶಕವನ್ನು ದಾಸ್ತಾನು ಮಾಡಲಾಗಿದ್ದು, ಈ ಪೀಡೆ ನಾಶಕವು ಸಿಐಆರ್ ಸಂಖ್ಯೆ ಹಾಗೂ ತಯಾರಿಕಾ ಪರವಾನಗಿ ಸಂಖ್ಯೆ ನಮೂದಿಸದೇಅಲ್ಲದೇ ದಾಸ್ತಾನು ಮಾಡಲಾಗಿತು. ಅಲ್ಲದೇ ಮಾರಾಟ ಮಾಡಲಾಗುತ್ತಿತ್ತು. ಇದರ ಖಚಿತ ಮಾಹಿತಿ ಅರಿತ ಜಾಗೃತ ದಳ ತಂಡ ದಿಢೀರ್ ದಾಳಿ ನಡೆಸಿ ವಶಪಡಿಸಿಕೊಂಡಿದೆ.
ಇದು ಕೀಟ ನಾಶಕ ಅಧಿನಿಯಮ 1968  ಹಾಗೂ ಕೀಟ ನಾಶಕ ಕಾಯ್ದೆ 1971  ಉಲ್ಲಘಂನೆಯಾಗಿರುತ್ತದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯು ಮೈಸೂರು ಜಂಟಿ ಕೃಷಿ ನಿರ್ದೇಶಕ (ಜಾಗೃತ ಕೋಶ) ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ  ದಾಳಿ ತಂಡದಲ್ಲಿ ಮೈಸೂರಿನ ಸಹಾಯಕ ಕೃಷಿ ನಿರ್ದೇಶಕರುಗಳಾದ ಜಗದೀಶ್ ಯಾದವ ಬಾಬು, ಸಹಾಯಕ ಕೃಷಿ ನಿರ್ದೇಶಕ (ಜಾಗೃತ ಕೋಶ ಶಿವಮೊಗ್ಗ) ಬಿ.ಸಿ.ಶಶಿಧರ್ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಗಿರಿಜಾ ಪಟ್ಟಣಶೆಟ್ಟಿ, ತಾಂತ್ರಿಕ ಅಧಿಕಾರಿ ಚೇತನ್ ಸಿ.ಜೆ., ಕೃಷಿ ಅಧಿಕಾರಿ ಸುನೀಲ್, ಪಾಲ್ಗೊಂಡಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST