LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

22ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾದ ಸುಲೋಚನಾ ಮೀನಾ

ರಾಜಸ್ಥಾನ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್‌ಸಿಯೂ ಒಂದಾಗಿದೆ. ಪ್ರತಿ ವರ್ಷವೂ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಹೀಗೆ ಪರೀಕ್ಷೆ ಬರೆದು ಅತ್ಯಂತ ಕಿರಿಯ ವಯಸ್ಸಿನಲ್ಲೇ ಐಎಎಸ್ ಅಧಿಕಾರಿಯಾದ ಸುಲೋಚನಾ ಮೀನಾ ಅವರ ಯಶೋಗಾಥೆ ಇದು.

ಸುಲೋಚನಾ ಮೀನಾ ಅವರು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಅಡಲ್ವಾರಾ ಗ್ರಾಮದವರು. ಅಲ್ಲಿಯೇ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಬಳಿಕ ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿತ್ತಾರೆ. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಪದವಿ ಪಡೆದರು. ಹಾಗೂ ಯುಪಿಎಸ್‌ಸಿ ಪರೀಕ್ಷೆ ಬರೆಯಲು ತಯಾರಿ ಪ್ರಾರಂಭಿಸಿದರು.

ಪ್ರತಿದಿನ 8-9 ಗಂಟೆಗಳ ಕಾಲ ಸುಲೋಚನಾ ಅವರು ಅಧ್ಯಯನ ಮಾಡುತ್ತಿದ್ದರು. ಜೊತೆಗೆ ಪರೀಕ್ಷೆಗೆ ತಯಾರಾಗಲು ಅವರು ಎನ್‌ಸಿಇಆರ್‌ಟಿ ಪುಸ್ತಕಗಳನ್ನು, ಅಣಕು ಪರೀಕ್ಷೆಗಳು ಮತ್ತು ಯೂಟ್ಯೂಬ್ ಮತ್ತು ಟೆಲಿಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನ ಅವಲಂಬಿಸುತ್ತಾರೆ. ತಾನು ಐಎಎಸ್ ಅಧಿಕಾರಿಯಾಗಬೇಕೆಂಬ ತಂದೆಯ ಕನಸು ಸುಲೋಚನಾ ಅವರಿಗೆ ಉತ್ತೇಜನ ನೀಡುತ್ತದೆ.

2021 ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಸುಲೋಚನ ಅವರು 415ನೇ ರ‍್ಯಾಂಕ್ ಗಳಿಸುತ್ತಾರೆ. ಈ ಮೂಲಕ ತನ್ನ ತಂದೆಯ ಕನಸನ್ನು ನನಸು ಮಾಡಿದರು. ತನ್ನ 22ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗುವ ಮೂಲಕ ಸುಲೋಚನಾ ಅವರು ಅನೇಕ ಯುವ ಆಕಾಂಕ್ಷಿಗಳಿಗೆ, ವಿಶೇಷವಾಗಿ ಗ್ರಾಮೀಣ ಹಿನ್ನೆಲೆಯ ಹುಡುಗಿಯರಿಗೆ ಮಾದರಿಯಾಗಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷ ಉಚಿತಶರ್ಟಿನ ಬಟನ್ ಸರಿಯಾಗಿ ಹಾಕಿಲ್ಲ ಎಂದು ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್ ;10 ಮಂದಿ ವಿರುದ್ಧ ಕೇಸುಟ್ರಂಪ್ ಸುಂಕ ಹೆಚ್ಚಳದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷಪುನೀತ್ ಕೆರೆಹಳ್ಳಿ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು'ಬ್ಯಾಕ್ ಟು ಊರು ಪರಿಕಲ್ಪನೆಗೆ, ಅಭಿವೃದ್ಧಿ-ಹೂಡಿಕೆಗಳಿಗೆ ಈ ಮನ್ನಣೆ ಪ್ರಬಲ ದಿಕ್ಸೂಚಿ' - ಸಂಸದ ಕ್ಯಾ. ಚೌಟದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಆಸ್ತಾ ಸಿಂಗ್ ಯಶಸ್ಸಿನ ಕಥನಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಹತ್ಯೆ.!ಕರ್ನಾಟಕ PGCET ಪರೀಕ್ಷೆ ಫಲಿತಾಂಶ ಪ್ರಕಟ.!ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ.!ಉಪ್ಪಿನಿಂದ ಅದೃಷ್ಟ, ಆರೋಗ್ಯ, ಐಶ್ವರ್ಯ ಮತ್ತು ಲಕ್ಷ್ಮಿ ಕೃಪಾಕಟಾಕ್ಷ ! ಹಿಂದೂ ಧರ್ಮದಲ್ಲಿ ಉಪ್ಪಿಗಿದೆ ವಿಶೇಷ ಸ್ಥಾನ