LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಕ್ಕಳಿಗೆ ಹಾಲುಣಿಸಲು ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ಸೌಕರ್ಯ ಕಲ್ಪಿಸಿ - ಸುಪ್ರೀಂ ಸೂಚನೆ

ನವದೆಹಲಿ : ತಾಯಂದಿರು ಮಕ್ಕಳಿಗೆ ಹಾಲುಣಿಸಲು ನೆರವಾಗುವ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿರಬೇಕು ಎಂದು ಮಹಿಳಾ ಹಕ್ಕುಗಳ ಕುರಿತಂತೆ ಸುಪ್ರೀಂ ಕೋರ್ಟ್‌  ಮಹತ್ವದ ತೀರ್ಪು ನೀಡಿದೆ.

ಹಾಲುಣಿಸುವಿಕೆಯು ಮಹಿಳೆಯ ಸಂತಾನೋತ್ಪತ್ತಿ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದ್ದು, ತಾಯಿ ಮತ್ತು ಮಗುವಿನ ಆರೋಗ್ಯ, ಯೋಗಕ್ಷೇಮಕ್ಕೆ ಅದು ಅತ್ಯಗತ್ಯ ಎಂದು ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಪ್ರಸನ್ನ ಬಿ. ವರಾಳೆ ಅವರಿದ್ದ ಪೀಠ ತಿಳಿಸಿದೆ.

ಮಕ್ಕಳಿಗೆ ಹಾಲುಣಿಸುವ ಹಕ್ಕನ್ನು ತಾಯಂದಿರು ಚಲಾಯಿಸಲು ಅನುಕೂಲವಾಗುವಂತೆ ಮಾಡುವುದು ಸರ್ಕಾರದ ಅತಿ ಪ್ರಾಶಸ್ತ್ಯದ ಕರ್ತವ್ಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಸ್ತನ್ಯಪಾನ ಮಾಡಿಸುವುದಕ್ಕೆ ಕಳಂಕ ಬಾರದಂತೆ ನಾಗರಿಕರು ನೋಡಿಕೊಳ್ಳಬೇಕು ಎಂದು ಕೂಡ ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಶಿಶುಗಳು ಮತ್ತು ತಾಯಂದಿರಿಗೆ ಅಗತ್ಯವಿರುವ ಹಾಲುಣಿಸುವ ಕೊಠಡಿಗಳು ಮತ್ತು ಮಕ್ಕಳ ಆರೈಕೆ ಕೊಠಡಿಗಳು ಅಥವಾ ಅಂತಹ ಬೇರೆ ಸೌಲಭ್ಯಗಳನ್ನು ಸರ್ಕಾರ ರೂಪಿಸಲು ನಿರ್ದೇಶನ ನೀಡುವಂತೆ ಕೋರಿ ಅವ್ಯಾನ್ ಪ್ರತಿಷ್ಠಾನ ಅರ್ಜಿ ಸಲ್ಲಿಸಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಹಾಲುಣಿಸುವ ಕೇಂದ್ರ, ಶಿಶುವಿಹಾರಗಳ ನಿರ್ಮಿಸುವ ಸಂಬಂಧ ಕೇಂದ್ರ ಸರ್ಕಾರ 2024ರ ಫೆಬ್ರವರಿಯಲ್ಲಿ ನೀಡಿದ್ದ ಸಲಹೆಯನ್ನು ಜ್ಞಾಪನಾಪತ್ರದ ರೂಪದಲ್ಲಿ ಇನ್ನೆರಡು ವಾರಗಳಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಾವಳಿಗೆ ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ: ಹರ್ಷ ವ್ಯಕ್ತಪಡಿಸಿದ ಪ್ರಧಾನಿ ಮೋದಿಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನದಂಪತಿ ನಡುವೆ ಈರುಳ್ಳಿ-ಬೆಳ್ಳುಳ್ಳಿ ವಿವಾದ; 11 ವರ್ಷದ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯಕ್ರಿಕೆಟ್ ಅಭಿಮಾನಿಗಳಿಗೆ ಡಿಕೆಶಿ ಗುಡ್ ನ್ಯೂಸ್; ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್ಕಳುವಾದ ಫೋನನ್ನು ಪೊಲೀಸರು ಹೇಗೆ ಪತ್ತೆಹಚ್ಚುತ್ತಾರೆ ಗೊತ್ತಾ?!ಗೋವಾ ನೈಟ್​ಕ್ಲಬ್ ಅಗ್ನಿ ಅವಘಡ - ಲೂತ್ರಾ ಸಹೋದರರ ಒಡೆತನದ ಕಟ್ಟಡ ನೆಲಸಮಕ್ಷಮೆ ಕೇಳಿ ಉಡುಗೊರೆ ನೀಡಿದ ಇಂಡಿಗೋ!ಮಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಪ್ರತೀಕಾರ ಪೋಸ್ಟ್‌ಗಳ ಅಬ್ಬರಮಂಗಳೂರಿನ ಹೆಸರಾಂತ ಗೌಜಿ ಇವೆಂಟ್ ಮಾಲಕ ಕಾರು ಅಪಘಾತಕ್ಕೆ ಬಲಿ..!!ಘೋರ ಅಘೋರ ತಂತ್ರಗಳಾದ ಮಾಟ ಮಂತ್ರ ವಶೀಕರಣ ತಂತ್ರಗಳೆಂದರೇನು, ಅದರ ಪ್ರಭಾವ ಹೇಗಿರುತ್ತದೆ ತಿಳಿಯಿರಿ!