LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಬೆಂಗಳೂರು: ಸಿಎಂ ನಿವಾಸದಲ್ಲಿ ಬಜೆಟ್ ಬಗ್ಗೆ ಚರ್ಚೆ

ಬೆಂಗಳೂರು: ಕರ್ನಾಟಕ ಬಜೆಟ್ 2025 ಮಾರ್ಚ್ ಮೊದಲ ವಾರದಲ್ಲಿ ಮಂಡನೆಯಾಗುವ ಸಾಧ್ಯತೆ ಇದ್ದು, ಈ ಹಿನ್ನಲೆ ಸಿಎಂ ಸಿದ್ದರಾಮಯ್ಯ ಎರಡನೇ ದಿನವೂ ಕಾವೇರಿ ನಿವಾಸದಲ್ಲಿ ಇಲಾಖಾವಾರು ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ. ಎಡಗಾಲಿನ ನೋವು ಹಿನ್ನಲೆ ಭಾನುವಾರದಿಂದ ವಿಶ್ರಾಂತಿಯಲ್ಲಿದ್ದ ಸಿಎಂ ಸಿದ್ದರಾಮಯ್ಯ, ಬಜೆಟ್‌ ಕುರಿತ ಪೂರ್ವಸಿದ್ಧತಾ ಸಭೆಗಳನ್ನ ನಡೆಸಿದ್ದಾರೆ. ವಿವಿಧ ಇಲಾಖೆಗಳ ಬೇಡಿಕೆಗಳ ಕುರಿತು ಒಟ್ಟು ಐದು ದಿನ -ಇಲಾಖಾವಾರು ಆಯವ್ಯಯ ಸಿದ್ಧತಾ ಸಭೆ ನಡೆಯಲಿದೆ. ಫೆ.6 ರಿಂದ ಫೆ.8ರವರೆಗೆ ಮೂರು ದಿನ ಬೆಳಗ್ಗೆಯಿಂದ ಸಂಜೆಯವರೆಗೂ ಇಲಾಖಾವಾರು ಸಭೆಗಳನ್ನು ಸಿಎಂ ನಡೆಸಲಿದ್ದು, ಇಂದು ಕೂಡ ಸಮಾಜ ಕಲ್ಯಾಣ ಇಲಾಖೆಯ ಜೊತೆ ಸಭೆ ನಡೆಸಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಲಿದ್ದಾರೆ. ಇಂದು ಕೂಡ ಕಾವೇರಿ ನಿವಾಸದಲ್ಲಿ ನಿವೃತ್ತ IAS ಅಧಿಕಾರಿ ಕೆ.ಪಿ.ಕೃಷ್ಣನ್ ಅವರ ಅಧ್ಯಕ್ಷತೆಯ Resources Mobilisation Committee ಜೊತೆಗೆ‌ ಬಜೆಟ್ ಸಂಬಂಧದ ಸಭೆ ನಡೆಸಿದರು. ಇದೇ ವೇಳೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಲಿವರ್ ಪೂಲ್ ವಿಶ್ವ ವಿದ್ಯಾಲಯ ರಾಜ್ಯ ಸರ್ಕಾರದ ಜೊತೆಗೆ MOU ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಲಿವರ್ ಪೂಲ್ ವಿವಿಯ VC ಟಿಮ್ ಜೋನ್ಸ್ , ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ.: ---ಜೇಡರ ದಾಸಿಮಯ್ಯಭೋವಿ ನಿಗಮದ ನೂತನ ಅಧ್ಯಕ್ಷ ನೆರಲಗುಂಟೆ ಎಂ.ರಾಮಪ್ಪ ಭೋವಿ ಮಠಕ್ಕೆ ಭೇಟಿ.!8 ದಿನ ಪ್ರೇಯಿಸಿ ಜೊತೆ ಲಾಡ್ಜ್ನಲ್ಲಿದ್ದು ಆನಂತರ ಸಾವಾಗಿರುವುದರ ಬಗ್ಗೆ ಅನುಮಾನದ ಹುತ್ತಾ.?ಬಾಣೂರು ಗ್ರಾಮದ ಬಿ. ಯಶಸ್ವಿನಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಸಕಸ್ಸ್‌ ಆಗಿದ್ದು ಹೀಗೆ.!ಹಿಂಗಾರು ಮಳೆ ಚುರುಕು ಮೂರು ದಿನ ಬಿರುಸಿನ ಮಳೆ.!ಶಿಕ್ಷಕರಾಗುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ.!ನೇಮಕಾತಿಗೆ ಅಂತಿಮ ಆದೇಶ ಪ್ರಕಟಿಸದಂತೆ ಹೈಕೋರ್ಟ್ ನಿರ್ಬಂಧ..!ನಿದ್ರೆ ಮಾಡುವಾಗ ಯಾವಕಡೆ ಮಲಗಿದರೆ ಆರೋಗ್ಯಕ್ಕೆ ಉತ್ತಮ.?ಸಕಲ ಸಮಸ್ಯೆಗಳ ಪರಿಹಾರಕ್ಕೆ ಇಷ್ಟಾರ್ಥ ಕಾರ್ಯಸಿದ್ಧಿಗೆ ದುರ್ಗಾ ಯಂತ್ರದ ಮಹತ್ವ ತಿಳಿದು ಪರಿಹರಿಸಿಕೊಳ್ಳಿ!ಪಿಜಿಯಲ್ಲಿ ನೇಣು ಬಿಗಿದುಕೊಂಡು ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ.!