Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಚಿತ್ರದುರ್ಗದಲ್ಲಿ ಟಾಟಾ ಸಿಯೆರಾ ಅದ್ಧೂರಿ ಬಿಡುಗಡೆ, ಭಾರೀ ಬೇಡಿಕೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಶ್ರೀ ಆಟೋ ಟಾಟಾ ಮೋಟಾರ್ಸ್ ವತಿಯಿಂದ ಭಾರತದಲ್ಲೇ ಹೊಸ ಸಂಚಲನ ಮೂಡಿಸಿರುವ ಟಾಟಾ ಸಿಯೆರಾ ಕಾರನ್ನು ಬಿಡುಗಡೆ ಮಾಡಲಾಗಿದೆ ಎಂದು ಶ್ರೀ ಆಟೋ ಪಾಲುದಾರರಾದ ಎಂ.ವಿ. ವಿಶ್ವನಾಥ್ ಹೇಳಿದರು.


ಇಲ್ಲಿನ ಕೆಳಗೋಟೆ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶ್ರೀ ಆಟೋ ಟಾಟಾ ಶೋ ರೂಂ ಬಳಿ ಸೋಮವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.


Qಟಾಟಾ ಸಿಯೆರಾ ಮತ್ತು ಮರು ವಿನ್ಯಾಸದೊಂದಿಗೆ ಟಾಟಾ ಪಂಚ್ ಕಾರುಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಬಿಡುಗಡೆ ಮಾಡಲಾಗಿದೆ. ಈ ವಾಹನಗಳು ಮಾರುಕಟ್ಟೆಯಲ್ಲಿ ಅತ್ಯಂತ ವಿಶ್ವಾಸಾರ್ಹತೆ ಹೊಂದಿವೆ ಎಂದು ವಿಶ್ವನಾಥ್ ಹೇಳಿದರು.


ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆ ರೂ. 11.49 ಲಕ್ಷದಿಂದ ಪ್ರಾರಂಭವಾಗುತ್ತದೆ, ಬುಕಿಂಗ್ ಪ್ರಾರಂಭವಾಗಿದ್ದು ಕಾರುಗಳ ವಿತರಣೆ ಮಾಡಲಾಗುತ್ತದೆ.​ ಹೊಸ ಟಾಟಾ ಸಿಯೆರಾ ಪೆಟ್ರೋಲ್ ಮತ್ತು ಡೀಸೆಲ್ ಪವರ್‌ ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಎಲೆಕ್ಟ್ರಿಕ್ ಆವೃತ್ತಿಯು ನಂತರ ಬಿಡುಗಡೆಯಾಗಲಿದೆ ಎಂದು ವಿಶ್ವನಾಥ್ ತಿಳಿಸಿದರು.

ಶ್ರೀ ಆಟೋ ಪಾಲುದಾರರಾದ ಶ್ರೀನಿವಾಸ್, ಮಾರುಕಟ್ಟೆ ವ್ಯವಸ್ಥಾಪಕ ರಾಜಶೇಖರ್ ಮಾತನಾಡಿ ಇದು ಪನೋರಮಿಕ್ ಸನ್‌ರೂಫ್, ಡಿಜಿಟಲ್ ಡ್ಯಾಶ್‌ಬೋರ್ಡ್ ಮತ್ತು ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಆಧುನಿಕ ಶೈಲಿ ಹೊಂದಿದೆ. ಸುರಕ್ಷತೆಯು ಒಂದು ಪ್ರಮುಖ ಅಂಶವಾಗಿದ್ದು, ಆರು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ನಂತಹ ಸುಧಾರಿತ ಫೀಚರ್ಸ್ ಒಳಗೊಂಡಿದೆ. ಐಕಾನಿಕ್ ಡಿಸೈನ್, ಆಧುನಿಕ ತಂತ್ರಜ್ಞಾನ ಮತ್ತು ಬಲವಾದ ಸುರಕ್ಷತಾ ಫೀಚರ್ಸ್ ಹುಡುಕುವ ಖರೀದಿದಾರರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.

ಇಂಟೀರಿಯರ್‌ನಲ್ಲಿ ಟಾಟಾ ಸಿಯೆರಾ ಮೂರು ಡ್ಯಾಶ್‌ಬೋರ್ಡ್ ಡಿಸ್ಪ್ಲೇಗಳಿಂದ ಹೈಲೈಟ್ ಮಾಡಲಾದ ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ ಎಂದು ತಿಳಿಸಿದರು.


ನಾಲ್ಕು-ಸ್ಪೋಕ್ ಸ್ಟೀರಿಂಗ್ ವೀಲ್ ಪ್ರಕಾಶಿತ ಟಾಟಾ ಲೋಗೋ ಮತ್ತು ಟಚ್ ಕಂಟ್ರೋಲ್‌ಗಳನ್ನು ಹೊಂದಿದೆ. 12-ಸ್ಪೀಕರ್ JBL ಸೌಂಡ್ ಸಿಸ್ಟಮ್, ಸೋನಿಕ್‌ಶಾಫ್ಟ್ ಸೌಂಡ್‌ಬಾರ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ (ಭಾರತದಲ್ಲಿ ಅತಿ ದೊಡ್ಡದು) ನೀಡಲಾಗಿದೆ ಎಂದು ಅವರು ಹೇಳಿದರು.

ಇವಿಷ್ಟೇ ಅಲ್ಲದೆ ವೈರ್‌ಲೆಸ್ ಚಾರ್ಜರ್, ಹಿಂಭಾಗದ ಸನ್‌ಶೇಡ್ ‌ಗಳು, ಪವರ್ಡ್ ಫ್ರಂಟ್ ಸೀಟ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ. ಸೌಕರ್ಯವನ್ನು ಹೆಚ್ಚಿಸುವ ಸಿಯೆರಾ ಒಳಾಂಗಣದಾದ್ಯಂತ ಸಾಫ್ಟ್-ಟಚ್ ಪ್ಯಾನೆಲ್‌ಗಳನ್ನು ಮತ್ತು ಆಧುನಿಕ, ಉನ್ನತ ಮಟ್ಟದ ಭಾವನೆಗಾಗಿ ಫ್ಲೋಟಿಂಗ್ ಆರ್ಮ್‌ರೆಸ್ಟ್ ಅನ್ನು ಸಹ ನೀಡಲಾಗಿದೆ.ಟಾಟಾ ಸಿಯೆರಾ ಬಿಡುಗಡೆಯಾದ ನಂತರ ಹೆಚ್ಚಿನ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.


ಟಾಟಾ ಸಿಯೆರಾ ಮೂರು ಎಂಜಿನ್ ಆಯ್ಕೆಗಳನ್ನು ಪಡೆದಿದ್ದು, 1.5-ಲೀಟರ್ ಕ್ರಯೋಜೆಟ್ ಡೀಸೆಲ್ ಎಂಜಿನ್, ಹೊಚ್ಚ ಹೊಸ 1.5 - ಲೀಟರ್ TGDi ಹೈಪರಿಯನ್ ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ 1.5-ಲೀಟರ್ NA ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.1.5-ಲೀಟರ್ ಕ್ರಯೋಜೆಟ್ ಟರ್ಬೊ ಡೀಸೆಲ್ ಎಂಜಿನ್ 118 PS ಪವರ್ ಮತ್ತು 260 Nm (MT) ಟಾರ್ಕ್ ಮತ್ತು 280 Nm (AT) ಗರಿಷ್ಠ ಪವರ್ ಹೊರಹಾಕುತ್ತದೆ. ಹಾಗೆಯೇ 1.5-ಲೀಟರ್ NA ರೆವೊಟ್ರಾನ್ 6-ಸ್ಪೀಡ್ MT ಮತ್ತು 7-ಸ್ಪೀಡ್ DCT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದ್ದು,

ಇದು 106 PS ಪವರ್ ಮತ್ತು 145 Nm ಟಾರ್ಕ್ ಹೊರಹಾಕುತ್ತದೆ. ಕೊನೆಯದಾಗಿ 1.5-ಲೀಟರ್ ಟರ್ಬೋಚಾರ್ಜ್ಡ್ ಹೈಪರಿಯನ್ ಎಂಜಿನ್ 160 PS ಪವರ್ ಮತ್ತು 255 Nm ಟಾರ್ಕ್ ಹೊರಹಾಕುತ್ತದೆ.ಸುರಕ್ಷತೆಯ ವಿಷಯದಲ್ಲಿ, ಟಾಟಾ ಸಿಯೆರಾದ ಲೆವೆಲ್ 2 ADAS ಸೂಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್ ಬ್ಲೈಂಡ್ ಸ್ಪಾಟ್ ಡಿಟೆಕ್ಟರ್‌ಗಳು, 21 ಕಾರ್ಯಗಳನ್ನು ಹೊಂದಿರುವ ESP ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿದೆ. ಇದು ಕಾರಿಗೆ ಅತ್ಯಾಧುನಿಕ ಸೇಫ್ಟಿ ಫೀಚರ್ಸ್ ಅನ್ನು ಒದಗಿಸುವುದಲ್ಲದೆ ಪ್ರಯಾಣಿಕರಿಗೆ ಸಂಭವನೀಯ ಅಪಘಾತಗಳಿಂದ ರಕ್ಷಣೆ ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಹೊಸ ಟಾಟಾ ಸಿಯೆರಾ 6-ಏರ್‌ಬ್ಯಾಗ್‌ಗಳು, ಸೀಟ್‌ಬೆಲ್ಟ್ ಆಂಕರ್ ಪ್ರಿ-ಟೆನ್ಶನ್, ಮಕ್ಕಳ ಸುರಕ್ಷತೆಗಾಗಿ ಐಸೊಫಿಕ್ಸ್ ಟೆಥರ್‌ಗಳು, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ELR ಸೀಟ್ ಬೆಲ್ಟ್‌ಗಳು ಮತ್ತು ಇನ್ನೂ ಹೆಚ್ಚಿನವುಗಳಂತಹ ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಒಟ್ಟಾರೆ ಹೊಸ ಟಾಟಾ ಸಿಯೆರಾ ಆಕರ್ಷಕ ಐಷಾರಾಮಿ ಪ್ಯಾಕೇಜ್ ನೊಂದಿಗೆ ಬಿಡುಗಡೆಯಾಗಿದ್ದು ಗ್ರಾಹಕರು ಶ್ರೀಆಟೋ ಟಾಟಾ ಶೋಂನಲ್ಲಿ ಬುಕ್ಕಿಂಗ್ ಮಾಡಬಹುದಾಗಿದೆ ಎಂದು ತಿಳಿಸಿದರು.
ಶ್ರೀ ಆಟೋ ಪಾಲುದಾರರಾದ ಸಿ.ಸತ್ಯನಾರಾಯಣ, ಉದ್ಯಮಿಗಳಾದ ಭೀಮಾ ರೆಡ್ಡಿ, ಪ್ರದೀಪ್, ಗಿರೀಶ್, ಚನ್ನಪ್ಪ ಅಂದನೂರು ಸೇರಿದಂತೆ ಇತರರು ಹಾಜರಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ