LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹತ್ತು ನಿಮಿಷ ಹತ್ತು ಸಾವಿರ.


‎ಭವ್ಯಭಾರತ ಸಂಸ್ಕೃತಿಯು ಆಚಾರ ವಿಚಾರ ಸಂಪ್ರದಾಯಗಳನ್ನು ತನ್ನಲ್ಲಿ ಅಡಗಿಸಿಕೊಂಡ ದಿವ್ಯಧರೆ. ಸಾಧು ಸಂತರು ಜನಿಸಿದ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಮನುಷ್ಯರಾಗಿ ಹುಟ್ಟಿರುವುದೇ ನಮ್ಮ ಸೌಭಾಗ್ಯ. ಇಂತಹ ಸ್ವರ್ಗದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೂಡ ಸಮಾಜಕ್ಕೆ ಸ್ವಲ್ಪವಾದರು ಅಳಿಲು ಸೇವೆ ಮಾಡಬೇಕು. ನಮ್ಮ ಸೇವೆ ಹಾಗೂ ಬದುಕಿನ ಶೈಲಿ ಮತ್ತೊಬ್ಬರಿಗೆ ಮಾರ್ಗದರ್ಶನ ಮಾಡುವಂತಿರಬೇಕು.ಇದೆ ಬದುಕಿನ ನಿಜ ಅರ್ಥ.

‎ಎಷ್ಟೋ ಹೃದಯ ಶ್ರೀಮಂತರು ನಮಗರಿವಿಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ಮಗ್ನರಾಗಿದ್ದಾರೆ. ಇಂತವರ ಸಂಗ ಮಾಡಿದರೆ ಅವರ ಸದ್ಗುಣಗಳು ಎಲ್ಲರಲ್ಲೂ ಮೊಳೆಯುವುದು. ಇಂತಹ ಹೃದಯ ಸಿರಿವಂತರು ನಮ್ಮ ನಿಮ್ಮೊಡನೆಯೇ ಇರುತ್ತಾರೆ ಅವರನ್ನು ನಾವು ಗುರುತಿಸಿಬೇಕು ಜೊತೆಗೆ ಅವರ ಒಡನಾಡಿಯಾಗಬೇಕು. ಇವರ ಸಂಗ ನಮ್ಮನ್ನು ಕೂಡ ಜಾಗೃತಿಗೊಳಿಸುವುದು.ಇದಕ್ಕೆ ಉತ್ತಮವಾದ ನಿದರ್ಶನ ಮಾನ್ಯ ಸುವರ್ಧನ್ ಯತಿರಾಜ್ ರವರ ಪರಿವಾರ.ಇವರು ನಮ್ಮ ಸಂಪರ್ಕಕ್ಕೆ ಸಿಕ್ಕಿದ್ದು ನನಗೆ ಒಯಸಿಸ್ ನಲ್ಲಿ ನೀರು ಸಿಕ್ಕ ಸಂತೃಪ್ತಿ.

‎ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು ಮುಖತಃ ಇಲ್ಲಿಯವರೆಗೆ ಇವರನ್ನು ಭೇಟಿಯಾಗಿಲ್ಲ. ಇವರ ಪರಿಚಯವಾಗಿದ್ದು ಮಾನ್ಯ ಮೂಡಿಗೆರೆ ಗಿರೀಶ್ ರವರು ರಚಿಸಿದ ಅಂತರ್ಜಾಲದ ಸಮೂಹ ಬಳಗದಲ್ಲಿ. ಆ ಅಂತರ್ಜಾಲದಲ್ಲಿ ಆಕಸ್ಮಿಕವಾಗಿ ಸಿಕ್ಕ ಮಾನ್ಯ ಸುವರ್ಧನ್ ರವರ ಕಾರ್ಯವ್ಯಾಪ್ತಿ, ಹೆಚ್ಚಿನ ಮಾತು, ಹುದ್ದೆ ಇದಾವುದು ನನಗರಿವಿಲ್ಲ. ಅವರ ಕಾರ್ಯಶೈಲಿಯ ಹಿಂಬಾಲಕ ಅಷ್ಟೇ. ಸುಮಾರು ಹತ್ತು ತಿಂಗಳ ಹಿಂದೆ ಹಸಿರು ಬಣ್ಣದ ಫಲಕ ಬೇಕೆಂದು ತಂತ್ರಜ್ಞಾನದ ಸಮೂಹದಲ್ಲಿ ಹಂಚಿದಾಗ ಆ ಕಡೆಯಿಂದ ಜಂಗಮವಾಣಿಗೆ ಒಂದು ಕರೆ ಬಂದಿತು ಸೂರಿಜೀ.. ನಾನು ಸುವರ್ಧನ್ ಎಂದು ಬೆಂಗಳೂರಿನಿಂದ.ನಿಮ್ಮ ಸಂದೇಶ ನೋಡಿದೆ ನಾನು ನಿಮಗೆ ಸಹಾಯ ಮಾಡುವೆ ನು ಎಂದು. ಈ ಧ್ವನಿ ನನ್ನ ಸಂತೋಷವನ್ನು ಹಿಮ್ಮಡಿಗೊಳಿಸಿತು.ಕರೆ ಮುಗಿಯುವ ವೇಳೆಗೆ ನನ್ನ ಜಂಗಮವಾಣಿಯ ಪರದೆಯ ಮೇಲೆ ಒಂದು ಸಂದೇಶ ಬಂದಿತ್ತು. ನಿಮ್ಮ ಖಾತೆಗೆ ಏಳುಸಾವಿರದ ಐದುನೂರು ರೂಪಾಯಿಗಳು ಜಮಾ ಆಗಿದೆ ಎಂದು. ಮಾನ್ಯರಿಗೆ ಧನ್ಯವಾದಗಳನ್ನು ಹೇಳಿ ಮರುದಿನ ಮಾತನಾಡುವುದಾಗಿ ತಿಳಿಸಿದೆನು. ಮರುದಿನ ಒಂದು ಹಸಿರು ಮತ್ತು ಬಿಳಿ ಬಣ್ಣದ ಫಲಕ ಖರೀದಿಸಿ ಅದರ ರಸೀದಿ ಮತ್ತು ಉಳಿಕೆ ಹಣದ ಲೆಕ್ಕ ನೀಡಿದೆನು.ನನ್ನ ಸಂದೇಶಗಳು ಅವರನ್ನು ಬೆಸೆದಿದ್ದರ ಫಲ ಅಕ್ಕಪಕ್ಕದ ತಲಮಕ್ಕಿ, ಕಲ್ಕೆರೆ ಮತ್ತು ಬಿಸಲೇಹಳ್ಳಿ ಶಾಲೆಗೂ ಅದರ ಫಲ ದೊರೆಯಿತು. ಹೀಗೆ ಸಂಬಂಧದ ಕೊಂಡಿ ಅವರೊಂದಿಗೆ ಚಾಚಿತು.

‎ಹಾಗೆ ಸುಮ್ಮನೆ ಶನಿವಾರದಂದು ನನ್ನ ಸಂವಹನದ ವೈಯಕ್ತಿಕ ಪರದೆಯ ಮೇಲೆ ನಮ್ಮ ಶಾಲೆಗೆ ಧ್ವನಿವರ್ಧಕದ ಅವಶ್ಯಕತೆ ಇದೆ ಎಂದು ಒಂದು ಸಂದೇಶ ಹರಿಯಬಿಟ್ಟೆ. ತುಂಬಾ ಜನ ಸ್ನೇಹಿತರು ವೈಯಕ್ತಿಕ ಪರದೆಯನ್ನು ವೀಕ್ಷಣೆ ಮಾಡುತ್ತಿದ್ದರು,ಅಷ್ಟರಲ್ಲಿ ಒಂದು ಕರೆ ಬಂದಿತ್ತು.ಅದು ಸುವರ್ಧನ್ ರವರ ಕರೆಯಾಗಿತ್ತು. ಬೇರೆ ಯಾವುದೋ ವಿಚಾರ ಇರಬಹುದೆಂದು ಕರೆ ಸ್ವೀಕರಿಸಿದೆ. ಆ ಕಡೆಯಿಂದ ಸೂರಿ ಜೀ.. ಹೇಗಿದ್ದೀರ ಎನ್ನುವ ಮಾತು ಆರಂಭವಾಯಿತು. ಒಂದೆರಡು ನಿಮಿಷದ ಕುಶಲೋಪಚಾರದ ಮಾತು ಮುಗಿದ ನಂತರ ನನ್ನ ಕಡೆಯಿಂದ ನಿಮ್ಮ ಶಾಲೆಗೆ ಧ್ವನಿವರ್ಧಕ ವ್ಯವಸ್ಥೆ ಎಂದರು. ಅವರ ಮಾತಿಗೆ ಏನು ಹೇಳಬೇಕು ತಿಳಿಯದಾಯಿತು. ಕೂಡಲೇ ಖರೀದಿಸಿ ಹಣ ವರ್ಗಾವಣೆ ಮಾಡುವೆ ಎಂದರು. ಅಂದು ಅಂಗಡಿಗೆ ರಜೆಯಿದ್ದ ಕಾರಣ ಇಂದು ಖರೀದಿಸಲಾಯಿತು. ಅಂಗಡಿ ಮಾಲೀಕರಿಗೆ ನೇರ ಹಣ ವರ್ಗಾವಣೆ ಅವರಿಂದ ಆಯಿತು. ವೈಯುಕ್ತಿಕ ಪರದೆಯ ಮೇಲೆ ಹಾಕಿದ ಒಂದು ಸಂದೇಶ ಹತ್ತು ನಿಮಿಷದಲ್ಲಿ ಹತ್ತು ಸಾವಿರಗಳ ಮಾತನಾಡಿತು. ಅವರಿಗೆ ಹೇಗೆ ಧನ್ಯವಾದಗಳನ್ನು ಹೇಳಲಿ ಮಾತು ಬಾರದಾಗಿದೆ. ಪ್ರೀತಿಯಿಂದ ಅಂತರಾತ್ಮದ ಪ್ರಣಾಮಗಳು...

‎ ನಿಮ್ಮೊಲುಮೆ ಬಯಸಿ...
‎ ಚೌಡ್ಲಾಪುರ ಸೂರಿ (ಸಿ ಆರ್ ಸುರೇಶ್).
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು