ಶಿವಮೊಗ್ಗ, ಏಪ್ರಿಲ್ 23: ಶಿಕಾರಿಪುರ ತೋಟಗಾರಿಕೆ ಇಲಾಖೆಯು 2026-27 ರಿಂದ 2028-29ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ, ಶುಂಠಿ, ಕಾಳುಮೆಣಸು ಮತ್ತು ಮಾವು ಬೆಳೆಗಳ ಉದ್ದೇಶಿತ ಕರಡು ಟರ್ಮ್ ಶೀಟ್ ತಯಾರಿಸಿದ್ದು, ಟರ್ಮ್ ಶೀಟ್ ಉತ್ತಮಗೊಳಿಸಲು ರೈತರಿಂದ ಸಲಹೆಗಳನ್ನು ಆಹ್ವಾನಿಸಿದೆ.
ರೈತರು ತಮ್ಮ ಸಲಹೆಗಳನ್ನು ಏ. 27 ರೊಳಗಾಗಿ ಲಿಖಿತ ರೂಪದಲ್ಲಿ ಕಚೇರಿಗೆ ಸಲ್ಲಿಸುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.