ಬೆಳಗಾವಿ :
ಬೈಲಹೊಂಗಲ ತಾಲೂಕು ಉಡಿಕೇರಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಗೊಂಡು ತಂದೆ-ಮಗ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಪ್ರಭಾಕರ ಹುಂಬಿ(71) ಮತ್ತು ಮಂಜುನಾಥ ಹುಂಬಿ(31)ಮೃತಪಟ್ಟವರು.
ಶುಕ್ರವಾರ ಬೆಳಗ್ಗೆ ದನದ ಕೊಟ್ಟಿಗೆಗೆ ಪ್ರಭಾಕರ ಅವರು ಹೋಗಿ ಆಕಳಿಗೆ ಅಹಾರ ನೀಡಿದ್ದಾರೆ. ನಂತರ ಹೊರಗೆ ಬಂದು ಸಹಜವಾಗಿ ವಿದ್ಯುತ್ ಕಂಬ ಮುಟ್ಟಿದಾಗ ಅವರಿಗೆ ವಿದ್ಯುತ್ ಸ್ಪರ್ಶಗೊಂಡಿದೆ.
ಕಂಬಕ್ಕೆ ಸಪೋರ್ಟ್ ಆಗಿ ನಿಲ್ಲಿಸಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಶಾಕ್ ಗೆ ಒಳಗಾಗಿದ್ದಾರೆ. ಇದನ್ನು ಕಂಡ ಮಗ ಮಂಜುನಾಥ ತಂದೆಯ ಸಹಾಯಕ್ಕೆ ಧಾವಿಸಿದಾಗ ಅವರಿಗೂ ಶಾಕ್ ಹೊಡೆದಿದೆ. ಪ್ರಭಾಕರ ಸ್ಥಳದಲ್ಲೇ ಮೃತರಾದರು. ಮಗ ಮಂಜುನಾಥ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಮಳೆಯಾಗಿದ್ದ ಕಾರಣ ವಿದ್ಯುತ್ ಕಂಬಕ್ಕೆ ಸಪೋರ್ಟ್ ಆಗಿ ಹಾಕಿದ್ದ ತಂತಿಗೆ ವಿದ್ಯುತ್ ಪ್ರವಹಿಸಿದ್ದರಿಂದ ಈ ಅವಘಡ ಸಂಭವಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.