LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮದುವೆ ಮಂಟಪದಲ್ಲಿ ಜಗಳ: ನನಗೆ ಈ ಮದುವೆ ಬೇಡವೇ ಬೇಡ ಎಂದು ನಿರಾಕರಿಸಿದ ವಧು

ಹಸೆಮಣೆಯೇರೋ ಮೊದಲು ವಧು ಮದುವೆ ನಿರಾಕರಿಸಿರೋ ಘಟನೆ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ನಡೆದಿದೆ. ನಿನ್ನೆ ರಾತ್ರಿ ರಿಸೆಪ್ಶನ್‌ನಲ್ಲಿ ಸುಮ್ಮನಿದ್ದ ವಧು ಬೆಳಗ್ಗೆ ಏಕಾಏಕಿ ಮದುವೆಯಾಗಲು ನಿರಾಕರಿಸಿದ್ದು, ಮಧುಮಗ ಕಂಗಾಲಾಗಿದ್ದಾನೆ.



ಚಿತ್ರದುರ್ಗದ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಜಗಳೂರು ಮೂಲದ ಮನೋಜ್ ಕುಮಾರ್, ಶಿರಾ ಮೂಲದ ಯುವತಿ ಮದುವೆ ನಿಶ್ಚಯಾಗಿತ್ತು. ವಧು-ವರ ಇಬ್ಬರು ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೋಜ್ ಕುಮಾರ್ ಹಾಗೂ ವಧು ಪರಸ್ಪರ ಒಪ್ಪಿ ಮದುವೆ ಆಗಲು ಮುಂದಾಗಿದ್ದರು.

ಮದುವೆ ಮಂಟಪದಲ್ಲಿ ರಾತ್ರಿ ವಧು ಕಡೆಯವರು ವರನ ಕಡೆಯವರಿಗೆ ಕುಡಿಯಲು ನೀರು ಕೊಡದೆ ಕಿರಿಕ್ ಮಾಡಿದ್ದರಂತೆ. ನೀರು ಕೊಡದಿದ್ದಕ್ಕೆ ಎರಡು ಕಡೆಯವರ ನಡುವೆ ಜಗಳ, ಮನಸ್ತಾಪ ಉಂಟಾಗಿದೆ.

ಕುಡಿಯೋ ನೀರಿನ ಗಲಾಟೆಗೆ ಲಕ್ಷ, ಲಕ್ಷ ಖರ್ಚು ಮಾಡಿ ಮದುವೆ ಮಾಡುತ್ತಿದ್ದ ಪೋಷಕರು ಶಾಕ್ ಆಗಿದ್ದಾರೆ. ರಾತ್ರಿ ನೀರಿನ ಜಗಳ‌ ಮರೆತು ಮದುವೆಗೆ ಒಪ್ಪುವಂತೆ ವರನ ಕಡೆಯವರು ಮನವಿ ಮಾಡಿದ್ದಾರೆ. ಆದರೆ ಈ ವರನ ಜೊತೆ ನನಗೆ ಮದುವೆ ಬೇಡವೇ ಬೇಡ ಎಂದು ವಧು ನಿರಾಕರಿಸಿದ್ದಾಳೆ. ಮದುವೆ ಮುರಿದು ಬೀಳುತ್ತಿದ್ದಂತೆ ಕಲ್ಯಾಣ ಮಂಟಪದಿಂದ ಸಂಬಂಧಿಕರು ಗಂಟು ಮೂಟೆ ಕಟ್ಟಿ‌ ಮನೆಗೆ ತೆರಳಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿವಿಲ್ ಸೇವಾ ಹುದ್ದೆಗಳ ನೇಮಕಾತಿಗೆ 5 ವರ್ಷ ವಯೋಮಿತಿ ಸಡಿಲಿಕೆ- ಸಂಪುಟ ಒಪ್ಪಿಗೆನೀವು ಮೆಟ್ರೋ ದಲ್ಲಿ ಓಡಾಡುವವರೆ, ? ಮುಂದಿನ ತಿಂಗಳಿಂದ ಮೆಟ್ರೋ ದರ ರೇಟ್.!ಸಣ್ಣಪುಟ್ಟ ಮನಸ್ತಾಪಗಳಿಂದ ಮೂರನೇ ವ್ಯಕ್ತಿ ಹಸ್ತಕ್ಷೇಪದಿಂದ ಭಿನ್ನಾಭಿಪ್ರಾಯದಿಂದ ನಿಮ್ಮಿಂದ ದೂರಾದಂತ ವ್ಯಕ್ತಿಗಳನ್ನು ಈ ರೀತಿಯಾಗಿ ನಿಮ್ಮ ಹತ್ತಿರ ಸೆಳೆಯಬಹುದು!ರೈಲ್ವೆ ಇಲಾಖೆಯಲ್ಲಿ 22,000 ಖಾಲಿ ಹುದ್ದೆಗಳ ಭರ್ಜರಿ ನೇಮಕಾತಿ2 ನೇ ರ‍್ಯಾಂಕ್ ಪಡೆದ ಅನಿಮೇಶ್ ಪ್ರಧಾನ್ ಸ್ಪೂರ್ತಿದಾಯಕ ಕಥೆಈ ಕಾರಣಕ್ಕೆ ಹಿರಿಯ ಐಎಎಸ್ ಪಂಕಜ್ ಕುಮಾರ್ ಪಾಂಡೆಯವರಿಗೆ ನೋಟಿಸ್.!ದೆಹಲಿ ಗಣರಾಜ್ಯೋತ್ಸವದಲ್ಲಿ ರಾಜ್ಯದ  ಸ್ತಬ್ಧಚಿತ್ರ : ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ .!ಬೇಕರಿ ಉತ್ಪನ್ನಗಳ ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 23-01-2026 .!ಇಂದಿನ ವಚನ: -ಹಾವಿನಹಾಳ ಕಲ್ಲಯ್ಯ ಅವರ ವಚನ..!