LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಕೂಟರ್‌ನಲ್ಲಿ ಸೇರಿಕೊಂಡಿದ್ದ ನಾಗರಹಾವು ರಕ್ಷಣೆ

ಶಿವಮೊಗ್ಗ, ಅ.02  : ಟಿವಿಎಸ್ ಸ್ಕೂಟರ್‌ನಲ್ಲಿ ಅಡಗಿಕೊಂಡಿದ್ದ ನಾಗರಹಾವೊಂದನ್ನು ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ್ದಾರೆ.  ಶಿವಮೊಗ್ಗದ ಹೊರ ವಲಯದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುವ ಸುಮಾ  ಅವರ ಟಿವಿಎಸ್ ಜ್ಯೂಪಿಟರ್ ಬೈಕ್‌ನಲ್ಲಿ ಈ ಹಾವು ಸೇರಿಕೊಂಡಿತ್ತು.
ಸುಮಾ ಅವರು ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ಡ್ಯೂಟಿಗೆಂದು ಹೋದಾಗ ಇವರ ಬೈಕ್?ನಲ್ಲಿ ಹಾವು ಸೇರಿಕೊಂಡಿದ್ದನ್ನು ಆಸ್ಪತ್ರೆಯ ಡಾ. ಸುನೀಲ್ ನಾಯ್ಕ್ ಅವರು ನೋಡಿದ್ದರು. ನಂತರ ಈ ಬಗ್ಗೆ ಸುಮ ಅವರಿಗೆ ತಿಳಿಸಿದ್ದಾರೆ. ಸುಮ ಅವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದರು.
ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಬಂದ ಸ್ನೇಕ್ ಕಿರಣ್ ಅವರು ಮೊದಲು ಬೈಕ್ ಅನ್ನು ಪರಿಶೀಲಿಸಿದರು. ಆದರೆ ಹಾವು ಮಾತ್ರ ಕಂಡು ಬಂದಿಲ್ಲ. ಕೊನೆಗೆ ಮೆಕ್ಯಾನಿಕ್ ಓರ್ವರನ್ನು ಸ್ಥಳಕ್ಕೆ ಕರೆಯಿಸಿ ಬೈಕ್ ಸೀಟ್ ಕೆಳಭಾಗವನ್ನು ಬಿಚ್ಚಿದಾಗ ಅಲ್ಲಿ ಹಾವು ಅಡಗಿರುವುದು ಕಂಡಿದೆ. ಸುಮಾರು ಎರಡೂವರೆ ಅಡಿ ಉದ್ದವಿದ್ದ ನಾಗರಹಾವನ್ನು ಅತ್ಯಂತ ಸುರಕ್ಷಿತವಾಗಿ ಹಿಡಿದು ಚೀಲದಲ್ಲಿ ಹಾಕಿ, ನಂತರ ಅರಣ್ಯ ಇಲಾಖೆಯವರ ಅನುಮತಿಯೊಂದಿಗೆ ಕಾಡಿಗೆ ಬಿಟ್ಟು ಬಂದಿದ್ದಾರೆ.
ಈ ಕುರಿತು ಮಾತನಾಡಿದ ಅವರು, ’ಮಳೆಯ ವಾತಾವರಣ ಇದ್ದ ಕಾರಣಕ್ಕೆ ಹಾವು ಸ್ವಲ್ಪ ಬೆಚ್ಚಗಿನ ವಾತಾವರಣವನ್ನು ಹುಡುಕುತ್ತದೆ. ಹೀಗಾಗಿ, ನಾಗರಹಾವು ಬೈಕ್‌ನಲ್ಲಿ ಸೇರಿಕೊಂಡಿರಬಹುದು. ಬೈಕ್ ಚಲಿಸಿಕೊಂಡು ಬಂದು ನಿಂತಾಗ ಸ್ವಲ್ಪ ಹೀಟ್ ಆಗಿರುತ್ತದೆ. ಇದರಿಂದಾಗಿ ಹಾವು ಬೈಕ್‌ನಲ್ಲಿ ಸೇರಿಕೊಂಡಿರಬಹುದು’ ಎಂದಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST