LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ರಿಕೆಗಳನ್ನು ಓದುವ ಸಂಸ್ಕೃತಿ ಬೆಳೆಸಬೇಕಿದೆ

ಧಾರವಾಡ,ಡಿ.2 : ಇಂದು ಪತ್ರಿಕಾ ಕ್ಷೇತ್ರ ಕವಲುದಾರಿಯಲ್ಲಿ ರುವುದರ ಜೊತೆಗೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇಂಥಹ ಸಂಕ್ರಮಣ ಕಾಲಘಟ್ಟ ದಲ್ಲಿ ಯುವ ಸಮೂಹದಲ್ಲಿ  ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನು ಬೆಳೆಸಬೇಕಿದೆ ಎಂದು ವಿಶ್ರಾಂತ ವಿಶೇಷ ಜಿಲ್ಲಾಕಾರಿ ವ್ಯಾಸ ದೇಶಪಾಂಡೆ ಆಶಯ ವ್ಯಕ್ತಪಡಿಸಿದರು.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾಂಗಣದಲ್ಲಿ ಶಿವಮೊಗ್ಗದ ಮಿಂಚು ಶ್ರಿನಿವಾಸ ಕುಟುಂಬ, ಧಾರವಾಡದ ಸಾಕಾರ - ಸಾಂಸ್ಕೃತಿಕ ಹಾಗೂ ಮಾಧ್ಯಮ ಪ್ರತಿಷ್ಟಾನಗಳ ವತಿಯಿಂದ ಆಯೋಜಿ ಸಲಾದ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಬದಲಾದ ಹಾಗೂ ಬದಲಾಗುತ್ತಿರುವ ಸಂದರ್ಭದಲ್ಲಿ ಪತ್ರಿಕಾ ಭಾಷೆ, ಸಾಹಿತ್ಯ ಹಾಗೂ ರಂಗಭೂಮಿಯ ಭಾಷೆ  ಕೂಡಾ ಬದಲಾಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸಮಷ್ಟಿ ಚಿಂತನೆಗಳು ನಡೆಯಬೇಕು ಎಂದರು.

ಹಿರಿಯ ಪತ್ರಕರ್ತರಾಗಿದ್ದ ಖಾದ್ರಿ ಶಾಮಣ್ಣ, ಟಿ.ಎಸ್. ರಾಮಚಂದ್ರರಾವ್ ಸೇರಿದಂತೆ ಆ ತಲೆಮಾರಿನ ಪತ್ರಕರ್ತರು ಬಳಸುತ್ತಿದ್ದ  ಭಾಷೆಗೂ, ಆನಂತರ ಬಂದ ಲಂಕೇಶ್, ರವಿ ಬೆಳಗೆರೆಯವರು ಬಳಸುತ್ತಿದ್ದ ಭಾಷೆಗೂ ಅಜಗಜಾಂತರ ವ್ಯತ್ಯಾ ಸವಿದೆ. ಹಾಗೆಯೇ ಸಾಹಿತ್ಯ, ರಂಗ ಭೂಮಿಯ ಪರಿಭಾಷೆ ಕೂಡಾ ಬದಲಾಗುತ್ತಿರು ವುದನ್ನು ಗಮನಿಸು ತ್ತಲೇ ಇದ್ದೇವೆ ಎಂದು ವಿವರಿ ಸಿದ ಅವರು, ಈ ಬದಲಾವಣೆಗ ಳನ್ನು  ಒಪ್ಪಿ ಕೊಳ್ಳುತ್ತಲೇ, ಈ ಕ್ಷೇತ್ರಗಳಲ್ಲಿ ಭವಿಷ್ಯ ವನ್ನು ರೂಪಿಸಬೇಕಿದೆ ಎಂದರು.

ಇಂದು ಪ್ರಪಂಚ ತೀರಾ ಸಣ್ಣ ದಾಗಿದೆ. ವಿಷಯಗಳು ಹಾಗೂ ಮಾಹಿತಿಗಳ ಭರಪೂರ ಸಂಗ್ರಹವೇ ಅಂಗೈಯಲ್ಲಿದೆ. ಇಲ್ಲಿ ಭಾಷೆ ಎಂಬುದು ಒಂದು ವಾಹಕವಾಗಿ ಉಳಿದಿದೆಯೇ ಹೊರತು, ಭಾಷೆ ಅಡ್ಡಿಯಾಗಿಲ್ಲ ಎಂದ ಅವರು, ಭಾಷೆಯ ಮೂಲ ಸೆಲೆಯನ್ನು ಉಳಿಸಿಕೊಂಡೇ ಪತ್ರಿಕಾ ಕ್ಷೇತ್ರವನ್ನು ಕಟ್ಟಿದವರು ಮಿಂಚು ಶ್ರೀನಿವಾಸ್‌ರವರು ಎಂದು ಬಣ್ಣಿಸಿದರು.

ಸಮಾಜದ ಸಮೃದ್ಧಿ ಹಾಗೂ ಸ್ವಾಸ್ಥ್ಯಕ್ಕೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಪತ್ರಿಕಾರಂಗಗಳು ಅತ್ಯಗತ್ಯ ಎಂದ ಅವರು, ಮಲೆ ನಾಡಿನ ಶ್ರೇಷ್ಟ ಕವಿ ಕುವೆಂಪುರವರ ಶಿವಮೊಗ್ಗ ಜಿಲ್ಲೆಯಿಂದ, ವರಕವಿ ಬೇಂದ್ರೆ ಯವರ ಈ ಅರೆಮಲೆನಾಡಿನ ಧಾರವಾಡದಲ್ಲಿ ಶ್ರೇಷ್ಟ ಪತ್ರಕರ್ತನ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನಿಜಕ್ಕೂ ಕೂಡಾ ಸಮಗ್ರತೆಯ ಸಂಕೇತ ಎಂದು ಅರ್ಥೈಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿಕ್ಕಮಗಳೂ ರಿನ ಹಿರಿಯ ಪತ್ರಕರ್ತ ಗಿರಿಜಾ ಶಂಕರ್, ಪತ್ರಿಕಾ ರಂಗ, ಪತ್ರಿಕೋದ್ಯಮವಾಗಿ ಬದಲಾದ ನಂತರ ಅನೇಕ ಸವಾಲುಗಳನ್ನು ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ಎದುರಿಸುತ್ತಿದೆ. ಆದಾಗ್ಯೂ ಕೂಡಾ ಸ್ಥಳೀಯ ಪತ್ರಿಕೆಗಳ ಅಗತ್ಯವನ್ನು ಎಂದೂ ಅಲ್ಲಗೆಳೆಯಲು ಆಗುವುದಿಲ್ಲ. ಸಮಾಜಕ್ಕೆ ಈ ಪತ್ರಿಕೆಗಳ ಅಗತ್ಯ-ಅನಿವಾರ್ಯ ಎರಡೂ ಇದೆ ಎಂದರು.

ಹಿರಿಯರು ವಿಶ್ಲೇಷಿಸಿದಂತೆ ಪತ್ರಿಕಾ ಕ್ಷೇತ್ರ ಎನ್ನುವುದು ಒಂದು ಪಾರ್ಲಿಮೆಂಟ್. ಇಲ್ಲಿಯ ಅವೇಶನಗಳಿಗೆ ವಿರಾಮ ಎನ್ನುವುದಿಲ್ಲ. ನಿತ್ಯ ಚರ್ಚೆಗಳು ನಡೆಯುತ್ತಲೇ ಇರಬೇಕು. ಆ ಮೂಲಕ ಸಮಾಜವನ್ನು ಎಚ್ಚರದ ಸ್ಥಿತಿಯಲ್ಲಿ ಇರಿಸಲು ಸಾಧ್ಯ ಎಂದ ಅವರು, ಹತ್ತು ಹಲವು ಸವಾಲುಗಳ ನಡುವೆ, ಸದಾ ಹೊಸತನ್ನು ನೀಡುವ  ಕ್ರಿಯಾಶೀಲತೆ ಪತ್ರಕರ್ತನಿಗೆ ಇರಬೇಕು ಎಂದರು.

ಇದೇ ಸಂದರ್ಭದಲ್ಲಿ ವಿದುಷಿ ಸುಮಂಗಲಾ ರತ್ನಾಕರ್‌ಗೆ ಸಿ.ಆರ್. ಭಟ್ ಹೆಸರಿನಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ, ಜೆ. ದಾದಾಗೌಡ ಪಾಟೀಲ್‌ಗೆ ದತ್ತಾತ್ರೇಯ ಕುಲಕರ್ಣಿ ಹೆಸರಿನಲ್ಲಿ ಶಿಕ್ಷಣ ಸಿರಿ ಪ್ರಶಸ್ತಿ ಹಾಗೂ ಮಂಜುನಾಥ ಹೆಗಡೆಯವರಿಗೆ ಎಂ.ಎಲ್. ಜೋಷಿಯವರ ಹೆಸರಿನಲ್ಲಿ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಿವಮೊಗ್ಗ ಪ್ರಸ್ ಟ್ರಸ್ಟ್‌ನ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ  ಸಾಕಾರದ ಗೌರವಾಧ್ಯಕ್ಷರಾದ ವಿದೂಷಿ ನಾಗರತ್ನಾ ಎನ್. ಹಡಗಲಿ, ಕಾರ್ಯಾ ಧ್ಯಕ್ಷರಾದ ಡಾ. ಶುಭದಾ ಉಪಸ್ಥಿತರಿದ್ದರು.

ಜ್ಯೋತಿ ರವಿಕುಮಾರ್‌ರವರಿಂದ ಪ್ರಾರ್ಥನೆ, ಸುರ್ ಕುಲಕರ್ಣಿಯವರಿಂದ ಸ್ವಾಗತ, ಡಾ. ಶುಭದಾ, ಚಿಕ್ಕರಸರವರಿಂದ ಪ್ರಾಸ್ತಾವಿಕ, ಸುನಿಲ್ ಕುಲಕರ್ಣಿಯವರಿಂದ ವಂದನಾರ್ಪಣೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷ ವೈದ್ಯರವರಿಂದ ನಿರೂಪಣೆ ನಡೆಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST