LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪ್ರಧಾನಿ ಅಂಗಳ ತಲುಪಿದ ಮುಡಾ ಹಗರಣ..!!

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉರುಳಾಗಿ ಪರಣಮಿಸಿರುವ ಮುಡಾ ಹಗರಣ ಈಗ ಪ್ರಧಾನಿ ಅಂಗಳ ತಲುಪಿದೆ. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸದಿರುವುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಾದ ಬೆನ್ನಿಗೆ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ವಕೀಲರೊಬ್ಬರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ವಕೀಲ ರವಿಕುಮಾರ್ ಎಂಬವರು ಪ್ರಧಾನ ಮಂತ್ರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. 296 ಪುಟಗಳ ದಾಖಲೆ ಸಮೇತ ಪತ್ರ ರವಾನಿಸಲಾಗಿದೆ. ಈಗಾಗಲೇ ಪ್ರಧಾನಿಗಳ ಕಚೇರಿಗೆ ಪತ್ರ ತಲುಪಿದೆ.ಮುಡಾ ಮಾಜಿ ಆಯುಕ್ತರಾದ ದಿನೇಶ್ ಮತ್ತು ಡಿ.ಬಿ. ನಟೇಶ್ ಇಬ್ಬರೇ ಸರ್ಕಾರಕ್ಕೆ 100 ಕೋಟಿ ರೂ.ಗೂ ಅಧಿಕ ಆರ್ಥಿಕ ನಷ್ಟ ಮಾಡಿದ್ದಾರೆ. ಅಲ್ಲದೇ ಸೇಲ್ ಡೀಡ್ ಮತ್ತು ಸೆಟ್ಲ್‌ಮೆಂಟ್ ಡೀಡ್ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.



ದಿನೇಶ್ ಕುಮಾರ್ ಮತ್ತು ನಟೇಶ್ ಬೇನಾಮಿ ವಹಿವಾಟು ನಡೆಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಮುಡಾದಲ್ಲಿ 2800 ಕೋ.ರೂ.ಗೂ ಅಧಿಕ ಮೊತ್ತದ ಹಗರಣ ನಡೆದಿರುವುದು ಇ.ಡಿ.ತನಿಖೆಯಲ್ಲಿ ತಿಳಿದುಬಂದಿದೆ. 4000ಕ್ಕೂ ಅಧಿಕ ಸೈಟ್‌ಗಳನ್ನು ಅಕ್ರಮವಾಗಿ ಹಂಚಲಾಗಿದೆ ಎಂದು ಇ.ಡಿ.ವರದಿ ನೀಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ ಎಂದ ಡೊನಾಲ್ಡ್ ಟ್ರಂಪ್ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಮೂವರು ಪೊಲೀಸರ ವಶಕ್ಕೆರೈತರಿಗೆ ಗುಡ್ ನ್ಯೂಸ್, ಪಿಎಂ ಕಿಸಾನ್ 20ನೇ ಕಂತಿನ ಹಣ ಇಂದು ಬಿಡುಗಡೆಮಾಡೆಲಿಂಗ್‌ ಲೋಕ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಪಾಸ್‌ ಆಗಿ ಅಧಿಕಾರಿಯಾದ ಕಥೆದಿನದ ಮಂಡಕ್ಕಿ ಒಗ್ಗರಣೆ – ಮಿರ್ಚಿ.! 02-08-2025..!ವಚನ: -ಆಯ್ದಕ್ಕಿ ಮಾರಯ್ಯ .!ದೇಶಾದ್ಯಂತ 10,277 ಬ್ಯಾಂಕಿಂಗ್ ವಲಯದಲ್ಲಿ ಹುದ್ದೆಗಳ ಭರ್ತಿಗೆ ನೇಮಕಾತಿ, ಡಿಗ್ರಿ ಆದವರು ಅರ್ಜಿ ಸಲ್ಲಿಸಿಶಿವಮೊಗ್ಗ:ರೈತ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆIBPS ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿಅಮೆರಿಕದಿಂದ ಎಫ್-35 ಖರೀದಿಸಲ್ಲ ಎಂದ ಭಾರತ- ಟ್ಯಾರಿಫ್ ಏರಿಕೆ ಬೆನ್ನಲ್ಲೇ ಟ್ರಂಪ್‌ಗೆ ಶಾಕ್