Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ನಾಗೇನಹಳ್ಳಿ-ನೆಲಗುದಿಗೆ ಸಂಪರ್ಕ ರಸ್ತೆ ಸಂಪೂರ್ಣ ಗುಂಡಿ ಮಯ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ  ನಾಗೇನಹಳ್ಳಿ ಹಾಗು ನೆಲ್ಲುಗುದಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಳ್ಳಗಳಿಂದ ಕೂಡಿದ್ದು ಜನ ಸಾಮಾನ್ಯರು ಓಡಾಡಲು ಹಾಗು ವಾಹನ ಸವಾರರಿಗೆ ತೊಂದರೆ ಯಾಗಿದೆ.ರಸ್ತೆಗಳಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳಿಂದಾಗಿ  ಜನಸಾಮಾನ್ಯರು ಮತ್ತು ವಾಹನ ಸವಾರರು ದಿನನಿತ್ಯ ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಇದು ಕೇವಲ ಸಂಚಾರಕ್ಕೆ ಅಡ್ಡಿಯಾಗುತ್ತಿಲ್ಲ, ಬದಲಿಗೆ ಅನೇಕ ಪ್ರಾಣಾಂತಿಕ ಅಪಘಾತಗಳಿಗೂ ಕಾರಣವಾಗುತ್ತಿದೆ ದೊಡ್ಡಬಳ್ಳಾಪುರ ದಿಂದ  ಮುಂಚೇನಹಳ್ಳಿಗೆ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ  ಸುಮಾರು ಹಳ್ಳಿಗಳಿಗೆ ಹೋಗುವ ವಾಹನ ಸವಾರರಿಗೆ ಅದರಲ್ಲೂ ರಾತ್ರಿ ಸಂಚಾರದ ವೇಳೆಯಲ್ಲoತು ತುಂಬಾ ತೊಂದರೆ ಯಾಗುತ್ತಿದೆ ಎಂದು ಸಾರ್ವಜನಿಕರು ಪಂಚಾಯತಿಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

 ಗ್ರಾಮೀಣ ಬಾಗದ ರಸ್ತೆ ಸಮಸ್ಯೆ ಬಗೆಹರಿಸುವುದು ಯಾವಾಗ  ಜನಪ್ರತಿನಿಧಿಗಳಿಗೆ  ಸಾಮಾನ್ಯ ಜನರ ಕೂಗು:
ಹಳ್ಳಿಗಳಲ್ಲಿ ಮಳೆ ಬಂದಾಗ ರಸ್ತೆಗಳು ಹಾಳಾಗಿ, ಗುಂಡಿಗಳಲ್ಲಿ ನೀರು ತುಂಬಿ ಹೊಂಡಗಳಾಗುವುದು ಮತ್ತು ಸಂಚಾರಕ್ಕೆ ತೊಂದರೆಯಾಗುವುದು ನಮ್ಮ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳಲ್ಲೊಂದಾಗಿದೆ. ಗ್ರಾಮೀಣ ರಸ್ತೆಗಳ ದುರಸ್ತಿ, ಅಭಿವೃದ್ಧಿ ಕಾಣದೆ ಸಮಸ್ಯೆ ಇದ್ದಾರೆ. ಇದರ ಬಗ್ಗೆ ಜನ ಪ್ರತಿ ನಿದಿಗಳಾಗಲಿ ಅಧಿಕಾರಿಗಳಾಗಲಿ ಇದರ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿದರೆ ಸಾಕು ಎನ್ನುತ್ತಿದ್ದಾರೆ ವಾಹನ ಸವಾರರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು. 

“ಮೂರ್ನಾಲ್ಕು ವರ್ಷದ ಹಿಂದೆ ತರಾತುರಿಯಲ್ಲಿ ಡಾಂಬರೀಕರಣ ಮಾಡಲಾಗಿದ್ದು ಅದು ತುಂಬಾ ಕಳಪೆ ಕಾಮಗಾರಿಯಾಗಿದೆ.ಕಾಮಗಾರಿಯ ಗುತ್ತಿಗೆ ಧಾರನನ್ನು ಯಾವ ಅಧಿಕಾರಿಯು ಸಹ ಪ್ರಶ್ನೇ ಮಾಡಲಿಲ್ಲ. ಕಳಪೆ ಡಾಂಬರಿಕಾರಣದಿಂದಾಗಿ ರಸ್ತೆ  ಗುಂಡಿಗಳಾಗಿ ಮಾರ್ಪಾಡಾಗಿದೆ ಅದರೆ ರಸ್ತೆಯಲ್ಲಿ ವೃದ್ದರು ಮಹಿಳೆಯರು ಮಕ್ಕಳು ಓಡಾಡಲು ಸಾದ್ಯವಾಗುತ್ತಿಲ್ಲ  ಸಂಬಂದ ಪಟ್ಟ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರು ಪ್ರಯೋಜನ ವಾಗಿಲ್ಲ”.
ಗಂಗಾಧರ, ಸ್ಥಳಿಯ ನೆಲ್ಲುಗುದಿಗೆ.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗದ ದಸರಾ: ಶರಣ ಸಂಸ್ಕೃತಿಯ ಜನೋತ್ಸವ:ಮಂಗಳೂರಿನ ದಸರಾ; ಶಾರದಾ ಮಹೋತ್ಸವದಿಂದ ಜನೋತ್ಸವದವರೆಗೆ:… ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ-ರಮೇಶ್ ಬಾಬುನವರಾತ್ರಿ ಪ್ರಯುಕ್ತ ಅಂಭಾ ಭವಾನಿ ದೇವಿಗೆ ವಿಶೇಷ ಅಲಂಕಾರಹಾಡುಹಗಲೆ ವೃದ್ದೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಕಳ್ಳಛಲವಾದಿ ಗುರುಪೀಠದಲ್ಲಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಆರೋಗ್ಯ ತಪಾಸಣೆ ಶಿಬಿರ ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿಕಾಂತ್ ಎಸ್.ಯಾದವ್ ಮತ ನೀಡಲು ಮನವಿಸಂವಿಧಾನದ ಮೌಲ್ಯ ಎತ್ತಿಹಿಡಿಯಲು ಸಿಜೆಐ ಸೂರ್ಯಕಾಂತ್ ಹಾಗೂ ಡಿಕೆಶಿ ಕರೆಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್' ಸಂಚಿಗೆ ರಕ್ತ ಕುದಿಯುತ್ತಿಲ್ಲವೇ?: ಹೆಚ್.ಡಿ. ಕುಮಾರಸ್ವಾಮಿ