LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾರ್ವಜನಿಕರು ಹಸಿಕಸ, ಒಣಕಸ ವಿಂಗಡನೆ ಮಾಡಿ

ಬೆಂಗಳೂರು:  ಸಾರ್ವಜನಿಕರು ಹಸಿಕಸ, ಒಣಕಸ ವಿಂಗಡನೆ ಮಾಡಿ, ಉತ್ತಮ ಇಳುವರಿಗಾಗಿ ಕಾಂಪೋಸ್ಟ್ ಗೊಬ್ಬರ ಸಕಾಲಕ್ಕೆ ರೈತರಿಗೆ ವಿಲೇವಾರಿ ನಮ್ಮ ಗುರಿ ಎಂದು ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತದಅಧ್ಯಕ್ಷ ಎ.ಎನ್.ನಟರಾಜ್ ಗೌಡ ತಿಳಿಸಿದರು.

ಜಿಬಿಎ ಕೇಂದ್ರ ಕಛೇರಿಯಲ್ಲಿರುವ ಕರ್ನಾಟಕ ಕಾಂಪೋಸ್ಟ್ ಅಭಿವೃದ್ದಿ ನಿಗಮ ನಿಯಮಿತದ ಕಾರ್ಯ ಯೋಜನೆ ರೂಪರೇಷೆ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. ನಂತರ ಮಾತನಾಡಿ ಕಳೆದ ಎರಡು ತಿಂಗಳಲ್ಲಿ 5ಸಾವಿರ ಟನ್ ಹಸಿ ಕಸವನ್ನು ಕಾಂಪೋಸ್ಚ್ ಗೊಬ್ಬರ ಮಾಡಿ ವಿವಿಧ ಜಿಲ್ಲೆಯ ರೈತರಿಗೆ ಸಬ್ಸಡಿ ಮೂಲಕ ರೈತರಿಗೆ ನೀಡಲಾಗಿದೆ.ಟನ್ 3600ರೂ ನಿಗದಿ ಮಾಡಲಾಗಿದೆ ರಿಯಾಯಿತಿ ದರದಲ್ಲಿ 2000ರೂ ನೀಡಲಾಗಿದೆ.ಕಾಂಪೋಸ್ಟ್ ಗೊಬ್ಬರದಿಂದ ಬಳಕೆಯಿಂದ ಮಣ್ಣಿನ ಫಲವತ್ತಾತೆ ಬರುತ್ತದೆ,ಉತ್ತಮ ಬೇಳೆ ಸಿಗುತ್ತದೆ. ರೈತರಿಗೆ ಸಕಾಲಕ್ಕೆ ಗೊಬ್ಬರ ಸಿಗಬೇಕು ಉತ್ತಮ ಇಳುವರಿಯಾಗಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ.

ಕಸ ಬಿಂಗಡಣೆಯಿಂದ ಕಾಂಪೋಸ್ಟ್ ತಯಾರಿಕೆಗೆ ಅನುಕೂಲ

ಬೆಂಗಳೂರುನಗರ ನಾಗರಿಕರು ಹಸಿ ಕಸ,ಒಣಕಸ ವಿಂಗಡನೆ ಮಾಡುವುದರಿಂದ ನಗರ ಸ್ವಚ್ಚತೆ ಜೊತೆಗೆ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಸಹಕಾರಿಯಾಗಲಿದೆ.ಜಿಬಿಎ ವ್ಯಾಪ್ತಿಯ 5 ಪಾಲಿಕೆ 369ವಾರ್ಡ್ ಗಳಲ್ಲಿ ಹಸಿಕಸ, ಒಣಕಸ ವಿಂಗಡನೆ ಜನ ಜಾಗೃತಿ ಅಭಿಯಾನ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮಾಡುವ ಘಟಕಗಳಿಗೆ ಸ್ಥಾಪನೆ ಒತ್ತು ನೀಡಲಾಗುವುದು.

ಬೃಹತ್ ತ್ಯಾಜ್ಯ ಉತ್ಪಾದಕರ ನಿರ್ವಹಣೆ:

ನಗರದ ಪ್ರಮುಖ ವಾಣಿಜ್ಯ ಸಂಕೀರ್ಣಗಳು (Commercial Complexes) ಹಾಗೂ ವಸತಿ ಸಮುಚ್ಚಯಗಳಲ್ಲಿ (Apartments) ಸ್ಥಳೀಯವಾಗಿಯೇ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸುವ ಮೂಲಕ ತ್ಯಾಜ್ಯ ಸಾಗಾಣಿಕೆ ಹೊರೆಯನ್ನು ತಗ್ಗಿಸಲು ಯೋಜನೆ ರೂಪಿಸಲಾಗುತ್ತಿದೆ

ಉದ್ಯಾನವನಗಳಲ್ಲಿ ಹಸಿರು ಗೊಬ್ಬರ: ನಗರದ ದೊಡ್ಡ ಉದ್ಯಾನವನಗಳಲ್ಲಿ (Big Parks) ಕಾಂಪೋಸ್ಟ್ ಘಟಕಗಳನ್ನು ಸ್ಥಾಪಿಸಿ, ಅಲ್ಲಿ ಉದುರುವ ಎಲೆಗಳು ಮತ್ತು ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ, ಅದನ್ನು ಉದ್ಯಾನವನದ ಗಿಡಮರಗಳ ಪೋಷಣೆಗೆ ಬಳಸಲು ಯೋಜನೆ ರೂಪಿಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ಬೆಂಗಳೂರು ನಗರವನ್ನು "Zero Waste City" (ಶೂನ್ಯ ತ್ಯಾಜ್ಯ ನಗರ) ಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ.

ಸಾಮರ್ಥ್ಯ ಹೆಚ್ಚಳ: ಪ್ರತಿನಿತ್ಯ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ತ್ವರಿತವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲು ಆಧುನಿಕ ತಂತ್ರಜ್ಞಾನ ಅಳವಡಿಕೆ.

ದುರ್ವಾಸನೆ ನಿಯಂತ್ರಣ: ತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ವಾಸನೆ ನಿಯಂತ್ರಣಕ್ಕೆ (Odour Control) ಹೊಸ ವೈಜ್ಞಾನಿಕ ಕ್ರಮಗಳು ಜಾರಿ.

ಆಧುನಿಕ ತಂತ್ರಜ್ಞಾನ , ವೈಜ್ಞಾನಿಕ ಕ್ರಮ ಅಳವಡಿಕೆ ಮಾಡಿ, ಗೊಬ್ಬರ ತಯಾರಿಕೆ ಹೆಚ್ಚು ಮಾಡುವುದು.
ರೈತರಿಗೆ ಸಕಾಲಕ್ಕೆ ಗೊಬ್ಬರ ತಲುಪಿಸಲು ರೈತ ಸಂಪರ್ಕ ಕೇಂದ್ರ ಮೂಲಕ ಗೊಬ್ಬರ ತಲುಪಿಸುವ ವಿಶೇಷ ಅಭಿಯಾನ ಮೂಲಕ ತಲುಪಿಸಲಾಗುವುದು.

ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರ ಸಹಕಾರ, ಬೆಂಬಲದಿಂದ ಸುಂದರ, ಸ್ವಚ್ಚತೆಯ ನಗರ ನಿರ್ಮಾಣ, ರೈತ ಸ್ನೇಹಿ ಆಡಳಿತ ನಮ್ಮ ಗುರಿ ಎಂದು ಹೇಳಿದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ