LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದೊಡ್ಡದು: ಕಮಲಾಕ್ಷ

 

ಚಿತ್ರದುರ್ಗ : ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ತುಂಬಾ ದೊಡ್ಡದಿದೆ, ಮನೆಯಲ್ಲಿ ಇರುವವರನೆಲ್ಲಾ ಸಭಾಳಿಸಿ ಅವರಿಗೆ ಬೇಕು ಬೇಡಗಳನ್ನು ಪೂರ್ಣ ಮಾಡುವುದರ ಮೂಲಕ ಎಲ್ಲರನ್ನು ಸಮಾನಾಗಿ ನೋಡಿ ಕೊಳ್ಳುವ ಗುಣ ಮಹಿಳೆಯರಲ್ಲಿ ಇದೆ  ಎಂದು ಧರ್ಮಸ್ಥಳ ಗ್ರಾಮಾಭೀವೃದ್ದಿ ಬಿ.ಸಿ. ಟ್ರಸ್ಟ್ನ  ಚಿತ್ರದುರ್ಗ ಜಿಲ್ಲೆಯ ನಿರ್ದೇಶಕರು ಕಮಲಾಕ್ಷ ತಿಳಿಸಿದರು.

ಸಿರಿಗೆರೆ ತಾಲೂಕಿನ ಹಿರೇಗುಂಟನೂರು ವಲಯದ ಬೆನಕನಹಳ್ಳಿ ಕಾರ್ಯಕ್ಷೇತ್ರದ ಒನಕೆ ಓಬವ್ವ ಜ್ಞಾನವಿಕಾಸ ಕೇಂದ್ರದಲ್ಲಿ ಗುರುವಾರ ನಡೆದ ಮಾಸಿಕ ಸಭೆಯಲ್ಲಿ ಟೈಲರಿಂಗ್ ತರಬೇತಿಯ ಸಮಾರೋಪ ಕಾರ್ಯಕ್ರಮ   ಭಾಗವಹಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಕುಟುಂಬದಲ್ಲಿ ಪುರುಷನೊಬ್ಬನೇ ದುಡಿಮೆ ಮಾಡಿದರೆ ಕುಟುಂಬ ನಡೆಸಲು ಆಗುವುದಿಲ್ಲ ಈ ಹಿನ್ನಲೆಯಲ್ಲಿಮ ಮಹಿಳೆಯಾದವರು ಸಹಾ ಗಂಡನೊಂದಿಗೆ ಕೈ ಜೋಡಿಸಿದರೆ ಕುಟುಂಬ ಸರಿಯಾಗಿ ಸಾಗಲು ಅನುಕೂಲವಾಗುತ್ತದೆ, ಇದಕ್ಕೆ ಮನೆಯಲ್ಲಿಯೇ ಇದ್ದಕೊಂಡು ಮನೆಗೆಲಸವನ್ನು ಪೂರ್ಣ ಮಾಡಿ ತದ ನಂತರ ಬಿಡುವಿದ್ಧಾಗ ಈ ಟೈಲರಿಂಗ್ ಕೆಲಸವನ್ನು ಮಾಡುವುದರ ಮೂಲಕ ಆದಾಯವನ್ನು ಗಳಿಸಬಹುದಾಗಿದೆ, ಇಂದಿನ ದಿನದಲ್ಲಿ ಬಹುತೇಕ ಜನತೆ ಮನೆಯಲ್ಲಿ ಟೈಲರಿಂಗ್ ಮಾಡುವುದರ ಮುಲಕ ತಮ್ಮ ಕಟುಂಬವನ್ನು ಸಲಹುತ್ತಿದ್ದಾರೆ ಎಂದರು.

ಧರ್ಮಸ್ಥಳ ಗ್ರಾಮಾಭೀವೃದ್ದಿ ಬಿ.ಸಿ. ಟ್ರಸ್ಟ್ನ  ಯೋಜನಾಧಿಕಾರಿ. ರವಿಚಂದ್ರ ಮಾತನಾಡಿ, ಇಂದಿನ ದಿನದಲ್ಲಿ ಪುರುಷನಷ್ಟೇ ಮಹಿಳೆಯು ಸಹಾ ದುಡಿಮೆಯನ್ನು ಮಾಡುತ್ತಿದ್ದಾಳೆ. ಅವರು ಸಹಾ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಂತೆ ಪುರುಷನಿಗೆ ಪೈಪೋಟಿಯನ್ನು ನೀಡುತ್ತಿದ್ದಾಳೆ, ಕಡಿಮೆ ಬಂಡವಾಳದಲ್ಲಿ ದುಡಿಮೆಯನ್ನು ಮಾಡುವುದೆಂದರೆ ಅದರು ಟೈಲರಿಂಗ ಕೆಲಸವಾಗಿದೆ ಇದನ್ನು ಕಲಿತವರು ಮನೆಯಲ್ಲಿಯೇ ಸ್ವಂತವಾಗಿ ಕೆಲಸವನ್ನು ಮಾಡಬಹುದೆ ಇಲ್ಲವಾದರೆ ಬೇರೆ ಕಡೆಯಲ್ಲಿ ಕೆಲಸವನ್ನು ಮಾಡುವುದರ ಮೂಲಕ ದುಡಿಮೆಯನ್ನು ಮಾಡಬಹುದಾಗಿದೆ. ಇದರಿಂದ ನಿಮ್ಮ ಕುಟುಂಬದ ಅರ್ಥಿಕ ಪ್ರಗತಿಯನ್ನು ಕಾಣ ಬಹುದಾಗಿದೆ ಎಂದ ಅವರು. ಸಮಾಜದಲ್ಲಿ ಮಹಿಳೆ ಯಾವ ರೀತಿ ಬದುಕು ನಡೆಸಬೇಕು ಹಾಗೂ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ್ದರು

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದ್ಯಸರಾದ ರಾಜಪ್ಪ. ಒಕ್ಕೂಟ ಅಧ್ಯಕ್ಷರು ಕಮಲಮ್ಮ, ತರಬೇತಿ ಶಿಕ್ಷಕಿ ವಾಣಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿ ಉಪಸ್ಥಿತರಿದ್ದರು..

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026