LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಅಂತಾರಾಷ್ಟ್ರೀಯ ಜಾಗ್ವಾರ್ ದಿನಾಚರಣೆಯ ಮಹತ್ವ ವಿಭಿನ್ನ!

ನವದೆಹಲಿ : ಪ್ಯಾಂಥೆರಾ ಓಂಕಾ ಎನ್ನುವ ವೈಜ್ಞಾನಿಕ ಹೆಸರಿನ ಜಾಗ್ವಾರ್‌ ದೈತ್ಯ ಬೆಕ್ಕಿನ ಜಾತಿಗೆ ಸೇರಿದ ಶಕ್ತಿಶಾಲಿ ಕಾಡುಪ್ರಾಣಿ. ಹುಲಿ, ಸಿಂಹ, ಚಿರತೆಗಳಂತೆ ಇದು ಕೂಡ ಪ್ರಾಕೃತಿಕ ಆಹಾರ ಸರಪಳಿಯ ಉನ್ನತ ಸ್ಥಾನದ ಬೇಟೆಗಾರ. ಆದರೆ ಇಂದು ಜಾಗ್ವಾರ್‌ಗಳನ್ನು ಕಾಡಿನಲ್ಲಿ ಕಾಣುವುದು ಅಪರೂಪ. ಹವಾಮಾನ ಬದಲಾವಣೆ, ಕಾಡಿನ ನಾಶ, ಅನಧಿಕೃತ ಬೇಟೆಯಿಂದಾಗಿ ಇವುಗಳ ಸಂತತಿ ತೀವ್ರ ಅಪಾಯಕ್ಕೆ ಗುರಿಯಾಗಿದೆ. ಈ ಹಿನ್ನೆಲೆ ಜಾಗ್ವಾರ್ ಸಂರಕ್ಷಣೆಯ ಮಹತ್ವ ಅರಿವು ಮೂಡಿಸಲು ಪ್ರತಿ ವರ್ಷ ನವೆಂಬರ್ 29ರಂದು ‘ಅಂತರರಾಷ್ಟ್ರೀಯ ಜಾಗ್ವಾರ್ ದಿನ’ ಎಂದು ಆಚರಿಸಲಾಗುತ್ತದೆ.

ಅಂತರರಾಷ್ಟ್ರೀಯ ಜಾಗ್ವಾರ್ ದಿನದ ಇತಿಹಾಸ : ಅಂತರರಾಷ್ಟ್ರೀಯ ಜಾಗ್ವಾರ್ ದಿನವನ್ನು 2018ರಲ್ಲಿ ಸ್ಥಾಪಿಸಲಾಯಿತು. ಜಾಗ್ವಾರ್‌ಗಳ ಸಂರಕ್ಷಣೆಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಮುಖ ಅಭಿಯಾನದ ಭಾಗವಾಗಿ ಈ ದಿನವನ್ನು ಆಯ್ಕೆ ಮಾಡಲಾಯಿತು. ಬೆಕ್ಕಿನ ಜಾತಿಯ ಕಾಡುಪ್ರಾಣಿಗಳನ್ನು ರಕ್ಷಿಸಲು ಸಮರ್ಪಿತವಾಗಿರುವ ‘ಪ್ಯಾಂಥೆರಾ’ ಸಂಸ್ಥೆ, ಅನೇಕ ದೇಶಗಳ ಸರ್ಕಾರಗಳು ಮತ್ತು ಸಂರಕ್ಷಣಾ ಸಂಘಟನೆಗಳ ಸಹಯೋಗದಿಂದ ಈ ಉಪಕ್ರಮವನ್ನು ಆರಂಭಿಸಿತು.

ಮೆಕ್ಸಿಕೋದಿಂದ ಅರ್ಜೆಂಟೀನಾವರೆಗೆ ಇರುವ 18 ದೇಶಗಳಲ್ಲಿನ ಜಾಗ್ವಾರ್‌ಗಳ ನೈಸರ್ಗಿಕ ವಾಸಸ್ಥಾನಗಳನ್ನು ಕನೆಕ್ಟ್ ಮಾಡುವ ‘ಜಾಗ್ವಾರ್ ಕಾರಿಡಾರ್ ಇನಿಶಿಯೇಟಿವ್’ ಕಾರ್ಯಕ್ರಮ ಜಾರಿಗೆ ಬಂದ ದಿನದ ಗೌರವಾರ್ಥವಾಗಿ ನವೆಂಬರ್ 29ನ್ನು ಆಯ್ಕೆ ಮಾಡಲಾಗಿದೆ. ಈ ವಿಭಿನ್ನಕಾರ್ಯಕ್ರಮಗಳು ಜಾಗ್ವಾರ್‌ಗಳು ಮುಕ್ತವಾಗಿ ಸಂಚರಿಸಲು ಹಾಗೂ ತಮ್ಮ ಜನಸಂಖ್ಯೆಯನ್ನು ಕಾಪಾಡಿಕೊಳ್ಳಲು ಅರಿವು ಮೂಡಿಸುವ ಅತ್ಯಂತ ಪ್ರಮುಖ ಕಾರ್ಯವಾಗಿದೆ.

ಅಂತರರಾಷ್ಟ್ರೀಯ ಜಾಗ್ವಾರ್ ದಿನದ ಮಹತ್ವ : 

-ಜಾಗ್ವಾರ್‌ಗಳ ಪರಿಸರ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು
-ಜಾಗ್ವಾರ್‌ಗಳು ಕಾಡಿನ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
-ಬೇಡಿಕೆ–ಪೂರೈಕೆ, ಆವಾಸಸ್ಥಾನದ ನಾಶ ಮುಂತಾದ ಅಪಾಯಗಳಿಂದ ಜಾಗ್ವಾರ್‌ಗಳನ್ನು ರಕ್ಷಿಸಲು ಸಂರಕ್ಷಣಾ ಕಾರ್ಯಕ್ಕೆ ಉತ್ತೇಜನ.
-ವನ್ಯಜೀವಿ ಕಾರಿಡಾರ್‌ಗಳು, ಸಂರಕ್ಷಿತ ಮೀಸಲು ಪ್ರದೇಶಗಳ ನಿರ್ಮಾಣಕ್ಕೆ ಪ್ರೇರೇಪಣೆ.
-ಸರ್ಕಾರಗಳು ಮತ್ತು ಪರಿಸರ ಸಂಘಟನೆಗಳು ಸಂರಕ್ಷಣಾ ಯೋಜನೆಗಳಿಗೆ ಹಣಕಾಸು ಹಾಗೂ ತಾಂತ್ರಿಕ ಬೆಂಬಲ ನೀಡಲು ಪ್ರೋತ್ಸಾಹ.

ಪ್ರಕೃತಿ ಮಾನವನ ಸರ್ವತೋಮುಖ ಅಭಿವೃದ್ಧಿಗೆ ತನ್ನೆಲ್ಲಾ ಸಂಪತ್ತನ್ನು ಧಾರಾಳವಾಗಿ ಧಾರೆ ಎರೆದಿದೆ. ಆದರೆ ಮನುಷ್ಯ ಈ ಸಂಪದ್ಭರಿತ ಪರಿಸರವನ್ನು ತಮ್ಮ ಸ್ವಂತಕ್ಕಾಗಿ ಉಪಯೋಗಿಸುತ್ತಿದ್ದಾನೆ. ಮಾನವನಂತೆ ಉಳಿದೆಲ್ಲಾ ಜೀವಿಗಳಿಗೂ ಭೂಮಿಯಲ್ಲಿ ಜೀವಿಸೋ ಅಧಿಕಾರವಿದೆ. ಅದರಂತೆ ಪ್ರಕೃತಿ ಸಮತೋಲನ ಮತ್ತು ಕಾಡಿನ ಆರೋಗ್ಯಕ್ಕಾಗಿ ಜಾಗ್ವಾರ್‌ಗಳನ್ನು ಉಳಿಸಿಕೊಳ್ಳುವುದು ಅತ್ಯಂತ ಅವಶ್ಯಕ. ಜಾಗೃತಿಯಿಂದ ಸಂರಕ್ಷಣೆಯವರೆಗೆ ಈ ದಿನದ ಉದ್ದೇಶ ಜಾಗ್ವಾರ್‌ಗಳ ಭವಿಷ್ಯ ಸುರಕ್ಷಿತಗೊಳಿಸುವುದು

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026