LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ತಕ್ಷಣಕ್ಕೆ ಯುದ್ಧ ಬೇಡ ಆದರೆ ಯುದ್ಧ ಮಾಡಲೇಬಾರದು ಎಂದೇನಿಲ್ಲ'- ಸಿಎಂ ಸ್ಪಷ್ಟನೆ

ಬೆಂಗಳೂರು :ಯುದ್ಧ ಬೇಡ ಎಂಬ ಮುಖ್ಯಮಂತ್ರಿಗಳ ಹೇಳಿಕೆಯ ಬಗ್ಗೆ ಚರ್ಚೆಗಳಾಗುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಯುದ್ಧ ಅನಿವಾರ್ಯವಾದಾಗ ಮಾತ್ರ ಮಾಡಬೇಕು. ಯುದ್ಧದಿಂದ ಪರಿಹಾರವಾಗಲು ಸಾಧ್ಯವಿಲ್ಲ. ಅನಿವಾರ್ಯವಾದಾಗ ಮಾತ್ರ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ: ಕೆ ಕಸ್ತೂರಿ ರಂಗನ್ ರವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವವನ್ನು ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರುಅವರು ದೇಶ ಕಂಡಂತ ಹೆಸರಾಂತ ವಿಜ್ಞಾನಿ.ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಡಾ: ಕಸ್ತೂರಿ ರಂಗನ್ ಅವರ ನಿಧನದಿಂದ ದೇಶಕ್ಕೆ ಅದರಲ್ಲೂ ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು  ತಿಳಿಸಿದರು.

ದೀರ್ಘ ಕಾಲ ಇಸ್ರೋ ಅಧ್ಯಕ್ಷರಾಗಿ ದ್ದವರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಅವರನ್ನು ನಾವು ಮರೆಯಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡ ಮಾಡುವ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಎಂದರು.

ಪರಿಸರ ಕ್ಷೇತ್ರಕ್ಕೆ ಹಾಗೂ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾದುದು. ಅವರನ್ನು ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಅನಿವಾರ್ಯವಾದಾಗ ಮಾತ್ರ ಯುದ್ಧಮಾಡಬೇಕು
ಯುದ್ಧ ಬೇಡ ಎಂಬ ಮುಖ್ಯಮಂತ್ರಿಗಳ ಹೇಳಿಕೆಯ ಬಗ್ಗೆ ಚರ್ಚೆಗಳಾಗುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಯುದ್ಧ ಅನಿವಾರ್ಯವಾದಾಗ ಮಾತ್ರ ಮಾಡಬೇಕು. ಯುದ್ಧದಿಂದ ಪರಿಹಾರವಾಗಲು ಸಾಧ್ಯವಿಲ್ಲ. ಅನಿವಾರ್ಯವಾದಾಗ ಮಾತ್ರ ಮಾಡಬೇಕು. ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಯ ವೈಫಲ್ಯ ಇದೆ ಎಂದು ಹೇಳಿದ್ದೇನೆ.

28 ಜನ ಪ್ರವಾಸಿಗರು ಉಗ್ರರ ದಾಳಿಯಲ್ಲಿ ಅಸುನೀಗಿದ್ದಾರೆ. ಹಿಂದೆ ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಮೃತಪಟ್ಟಿದ್ದರು. ಕೇಂದ್ರ ಸರ್ಕಾರ ಭದ್ರತೆಯನ್ನು ಸರಿಯಾದ ರೀತಿಯಲ್ಲಿ ಕೊಟ್ಟಿರಲಿಲ್ಲ. ತಕ್ಷಣಕ್ಕೆ ಯುದ್ಧ ಬೇಡ ಆದರೆ ಯುದ್ಧ ಮಾಡಲೇಬಾರದು ಎಂದೇನಿಲ್ಲ ಎಂದರು.ಸಿದ್ದರಾಮಯ್ಯ ಅವರು ಓಲೈಕೆ ರಾಜಕಾರಣ ಮಾಡುತ್ತಾರೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಸಿಎಂ ಬಿಜೆಪಿ ಹೇಳುವುದೆಲ್ಲ ಸರಿಯಲ್ಲ ಎಂದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆ - ಪ್ರಾಣಿಬಲಿ ನಿಷೇಧ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಈ ರೀತಿಯಾದ ಶ್ರೀಕೃಷ್ಣನ ಮೂರ್ತಿ ಇಟ್ಟು ಪೂಜಿಸಿ ನೋಡಿ ಸಂತಾನ ಪ್ರಾಪ್ತಿ ಗ್ಯಾರಂಟಿ?ಇಂದಿನ ವಚನ: - --ಸಿದ್ಧರಾಮೇಶ್ವರ   ಅವರ ವಚನ..!ಟಾಕ್ಸಿಕ್ ಸಿನಿಮಾದ ಫ್ಲೆಕ್ಸ್ ಅಳವಡಿಕೆ ನಟ ಯಶ್ ವಿರುದ್ಧ FIR.!ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ 26ನೇ ವರ್ಷದ ದೀಪೋತ್ಸವದಾವಣಗೆರೆ : ಮೆಕ್ಕೆಜೋಳ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಸುಬ್ರಹ್ಮಣ್ಯ ಸ್ವಾಮಿಯ ವೀರಗಾಥೆ! ದುಷ್ಟ ತಾರಕಾಸುರನನ್ನು ವೀರ ಶೂರ ಕಾರ್ತಿಕೇಯನು ಸಂಹರಿಸಿದ ಕಥೆ!ಇಂದಿನ ವಚನ: - -ಅಕ್ಕಮಹಾದೇವಿ  ಅವರ ವಚನ..!ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಹೆಣ್ಣಿನ ವೇಷ ಧರಿಸಿ ಓಡಾಡುತ್ತಿದ್ದ ಆರೋಪಿ ಬಂಧನ'ಬೀದಿ ನಾಯಿಗಳು ಕಚ್ಚಿದರೆ ಸರ್ಕಾರವೇ ಪರಿಹಾರ ನೀಡಬೇಕು'- ಸುಪ್ರೀಂ ಕೋರ್ಟ್‌