LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಭಯದಿಂದ ಸಾವಿರಾರು ಜನ ದುರ್ಗಾದೀಪ  ಸಂಕಲ್ಪ

ಬೆಂಗಳೂರು: ರಾಜಾಜಿನಗರದ ರಾಮಮಂದಿರ ಮೈದಾನದಲ್ಲಿ ಅಭಯ ಸೇವಾ ಫೌಂಡೇಶನ್ ವತಿಯಿಂದ. ಮಹಿಳೆಯರು ದುರ್ಗಾದೀಪ ನಮಸ್ಕಾರ ಸಂಕಲ್ಪ ಮಾಡಿ ಪ್ರಸಾದ ಪಡೆದ್ರು.


ಅಭಯ ಸೇವಾ ಫೌಂಡೇಷನ್ ವತಿಯಿಂದ 3ದಿನಗಳ ಕಾಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ವಾರ್ಷಿಕ ಸಡಗರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎರಡನೇ ದಿನದ ಸೇವಾ ಸಂಕಲ್ಪ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಇಲ್ಲಿ ವಿಶೇಷವಾಗಿ ಎರಡು ಸಾವಿರ ಮಹಿಳೆರು  ದುರ್ಗಾದೀಪ ನಮಸ್ಕಾರ ಸಂಕಲ್ಪ ಮಾಡಿ ಪ್ರಸಾದ ಪಡೆದರು.

ಅಭಯ ಸೇವಾ ಫೌಂಡೇಶನ್ ‌ ಸಂಸ್ಥಾಪಕ ಅಧ್ಯಕ್ಷರಾದ ಎಂ. ಬಿ. ಉಮೇಶ್ ಶೆಟ್ಟಿ ಅವರು ಮಾತನಾಡಿ, ಸಮಾಜ ಸುಧಾರಣೆಗಾಗಿ ಕಳೆದ 20 ವರ್ಷಗಳಿಂದ ವಿವಿಧ ಸಮಾಜಸೇವೆಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಸಮಾಜದಿಂದ ಸಮಾಜಕ್ಕೆ ಕೊಡುವ ಉದ್ದೇಶದಿಂದ, ಅಶಕ್ತರಿಗೆ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಸೇವೆ ಮಾಡಿಕೊಂಡು ಬರಲಾಗುತ್ತಿದೆ.


ಐದು ಸಾವಿರಕ್ಕೂ ಹೆಚ್ಚು ಜನರನ್ನ ಸೇರಿಸಿ ಎರಡು ದಿನದಿಂದ ದೇವತಾ ಪೂಜಾ ಕಾರ್ಯ, ಸಾಮಾಜಿಕ ಕಾರ್ಯ ಆಯೋಜನೆ ಮಾಡಲಾಗಿತ್ತು. ಇದು ಎರಡನೇ ವರ್ಷದ ಕಾರ್ಯಕ್ರಮವಾಗಿದ್ದು, ಹಲವರನ್ನ ಗುರ್ತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಹಾಗೂ ಬಡವರಿಗೆ ಶಾಲೆ ಮಕ್ಕಳಿಗೆ ಬ್ಯಾಗು, ಚಳಿಗಾಲಕ್ಕೆ ಹಿರಿಯನಾಗರಿಕರಿಗೆ ಮೂರು ಸಾವಿರ ಬ್ಲಾಂಕೆಟ್  ವಿತರಣೆ ಮಾಡಿದ್ದೇವೆ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿಗೋಸ್ಕರ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಅವರು ಮಾತನಾಡಿ, ಅಭಯ ಸೇವಾ ಫೌಂಡೇಶನ್ ಅಧ್ಯಕ್ಷರು ಎಂ ಬಿ. ಉಮೇಶ್ ಶೆಟ್ಟಿ,  ಜನಪರ ಕಾಳಜಿ ಉಳ್ಳವರು. ಬಡವರಿಗೆ, ಶಾಲೆ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಬ್ಲಾಂಕೆಟ್, ಕನ್ನಡಕ  ಉಚಿತವಾಗಿ ನೀಡಿದ್ದಾರೆ. ಉಮೇಶ್ ಅವರ ಸಮಾಜಮುಕಿ ಕಾರ್ಯ ನನಗೂ ಇಷ್ಟವಾಗಿದೆ. ಸಮಾಜಕ್ಕೆ ಏನಾದರೂ ಕೊಡುವ ದೃಷ್ಟಿಯಿಂದ ಸದಾ ಕಾಯಕದಲ್ಲಿ ಇರುತ್ತಾರೆ.  ಮಂಗಳೂರಿನಲ್ಲಿ ಹುಟ್ಟಿದ್ದರೂ ಬೆಂಗಳೂರು ಅವರಿಗೆ ಪ್ರೀತಿ,ನೆಲೆಯ ಜಾಗವಾಗಿದೆ. ಅದರಲ್ಲೂ ರಾಜಾಜಿನಗರ ಜನರಿಗೆ ಪ್ರೀತಿಯ ಅಣ್ಣರಾಗಿದ್ದಾರೆ. ಜನೋಪಯೋಗಿ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.  ಈ ಭಾಗಕ್ಕೆ ಅವರ ಸೇವೆ ದೊಡ್ಡದು.


ರಾಜಾಜಿನಗರದಲ್ಲಿ ಅಭಯ ಸೇವಾ ಫೌಂಡೇಶನ್ ಮೂಲಕ ಸೇವೆ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ.  ಇನ್ನಷ್ಟು ಸೇವೆ ಮಾಡುವ ಭಾಗ್ಯ ದೇವರು ನೀಡಲಿ ಎಂದು  ಆಶಿಸಿದರು.


ಕಾರ್ಯಕ್ರಮ ದಲ್ಲಿ ಟಿಟಿಡಿ ಸದಸ್ಯ ಎಸ್ ನರೇಶ್ ಕುಮಾರ್, ಪಾಲಿಕೆಯ ಮಾಜಿ ಸದಸ್ಯರಾದ ಎಮ್. ಜಿ. ಜಯರತ್ನ, ಬೈಂದೂರು


ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷಾದ ರವಿ ಶೆಟ್ಟಿ,ಪ್ರಸಾದ್ ಶೆಟ್ಟಿ, ಯುಸಿಸಿಯ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ, ಉದ್ಯಮಿ ಉದಯ ಶೆಟ್ಟಿ ಜಡ್ಕಲ್ , ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆಉಡಾನ್' ಯೋಜನೆ ಮೂಲಕ ಭಾರತದ ಭವಿಷ್ಯದ ವೈದ್ಯಕೀಯ ಕಾರ್ಯಪಡೆಯನ್ನು ನಿರ್ಮಿಸುವ ಬದ್ಧತೆಯನ್ನು ಸಾರಿದ ನಾರಾಯಣ ಹೆಲ್ತ್ಮೆಟ್ರೋ ಟಿಕೆಟ್ ದರ: ಕೇಂದ್ರದತ್ತ ಬೊಟ್ಟು ಮಾಡಿದ ರಾಜ್ಯ ಸರ್ಕಾರಕ್ಕೆ ದಾಖಲೆ ಸಮೇತ ಟಾಂಗ್ ಕೊಟ್ಟ ನಿಖಿಲ್ಬಿಜೆಪಿ ಜಾಹೀರಾತಿನ ವಿರುದ್ಧ ಎಎಪಿ ದೂರುಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ, 20 ವರ್ಷ ಕಳೆದರೂ ರೈತರಿಗೆ ಸಿಗತ ಪರಿಹಾರಕಾಂಗ್ರೆಸ್ ಪಕ್ಷ ಪಾರ್ಕಿಂಗ್ ವಿಚಾರದಲ್ಲಿ ಅಂದಾ ದರ್ಬಾರ್ ಮಾಡಲು ಹೊರಟಿದೆ