LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಕಲಚೇತನರಿಗಾಗಿ ರಾಜ್ಯದಲ್ಲಿ ಮೂರು ಪ್ರಮುಖ ಯೋಜನೆ ಜಾರಿ..!

ಬೆಂಗಳೂರು: ರಾಜ್ಯದಲ್ಲಿ ವಿಕಲಚೇತನರಿಗಾಗಿ ಸರ್ಕಾರ ಮೂರು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಯೋಜನೆಗಳ ವಿವರ:

  • ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆ: ಶಸ್ತ್ರಚಿಕಿತ್ಸೆಯ ಮೂಲಕ ಅಂಗವಿಕಲತೆ ಕಡಿಮೆ ಮಾಡುವ ಅಥವಾ ನಿವಾರಣೆಗೆ 1 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ.

  • ನಿರಾಮಯ ಆರೋಗ್ಯ ವಿಮಾ ಯೋಜನೆ: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ವಿಕಲಚೇತನರು ವಾರ್ಷಿಕ 250 ರೂ. ಪಾವತಿಸಿ, 1 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.

  • ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ: ತೀವ್ರ ಶ್ರವಣದೋಷ ಹೊಂದಿರುವ 6 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಶ್ರವಣ ಸಾಧನ ಮತ್ತು ಥೆರಪಿ ಚಿಕಿತ್ಸೆ ಒದಗಿಸಲಾಗುತ್ತದೆ.
    2016-17 ರಿಂದ ಈವರೆಗೆ 665 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಕಲಚೇತನರಿಗಾಗಿ ಕೈಗೊಳ್ಳುತ್ತಿರುವ ಯೋಜನೆಗಳ ಕುರಿತು ಶಾಸಕ ವೈ.ಎಂ. ಸತೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.




Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆ - ಪ್ರಾಣಿಬಲಿ ನಿಷೇಧ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿಮದುವೆಯಾಗಿ ವರ್ಷ ಗಟ್ಟಲೆ ಸಂತಾನವಿಲ್ಲದೆ ನರಳುತ್ತಿದ್ದರೆ ಈ ರೀತಿಯಾದ ಶ್ರೀಕೃಷ್ಣನ ಮೂರ್ತಿ ಇಟ್ಟು ಪೂಜಿಸಿ ನೋಡಿ ಸಂತಾನ ಪ್ರಾಪ್ತಿ ಗ್ಯಾರಂಟಿ?ಇಂದಿನ ವಚನ: - --ಸಿದ್ಧರಾಮೇಶ್ವರ   ಅವರ ವಚನ..!ಟಾಕ್ಸಿಕ್ ಸಿನಿಮಾದ ಫ್ಲೆಕ್ಸ್ ಅಳವಡಿಕೆ ನಟ ಯಶ್ ವಿರುದ್ಧ FIR.!ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ 26ನೇ ವರ್ಷದ ದೀಪೋತ್ಸವದಾವಣಗೆರೆ : ಮೆಕ್ಕೆಜೋಳ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭಸುಬ್ರಹ್ಮಣ್ಯ ಸ್ವಾಮಿಯ ವೀರಗಾಥೆ! ದುಷ್ಟ ತಾರಕಾಸುರನನ್ನು ವೀರ ಶೂರ ಕಾರ್ತಿಕೇಯನು ಸಂಹರಿಸಿದ ಕಥೆ!ಇಂದಿನ ವಚನ: - -ಅಕ್ಕಮಹಾದೇವಿ  ಅವರ ವಚನ..!ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಹೆಣ್ಣಿನ ವೇಷ ಧರಿಸಿ ಓಡಾಡುತ್ತಿದ್ದ ಆರೋಪಿ ಬಂಧನ'ಬೀದಿ ನಾಯಿಗಳು ಕಚ್ಚಿದರೆ ಸರ್ಕಾರವೇ ಪರಿಹಾರ ನೀಡಬೇಕು'- ಸುಪ್ರೀಂ ಕೋರ್ಟ್‌