ಬೆಳಗಾವಿ:ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರನ ಕೊರಳಲ್ಲಿ 'ಟೈಗರ್ ಕ್ಲಾ ಪೆಂಡೆಂಟ್' ಕಂಡುಬಂದ ಹಿನ್ನಲೆಯಲ್ಲಿ ಇಂದು ಬೆಳಗಾವಿ ಡಿಸಿಎಫ್ ನೇತೃತ್ವದ ತಂಡ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿತು.
ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಸಚಿವೆಯ ಪುತ್ರ ಮೃಣಾಲ ಹೆಬ್ಬಾಳಕರ ಧರಿಸಿದ್ದ ಹುಲಿ ಉಗುರಿನ ಚಿತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಅರಣ್ಯಾಧಿಕಾರಿಗಳು ಡಿಸಿಎಫ್ ಶಂಕರ ಕಲ್ಲೋಳಿಕರ ನೇತೃತ್ವದಲ್ಲಿ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಪೆಂಡೆಂಟ್ ನೈಜತೆಯ ಬಗ್ಗೆ ಪರಿಶೀಲಿಸಿ, ವಿಸ್ಕೃತ ವರದಿ ರಾಜ್ಯಮಟ್ಟದ ಸಮಿತಿಗೆ ನೀಡಲಾಗುವುದು ಎಂದು, ನೈಜವಾಗಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಫ್ ತಿಳಿಸಿದ್ದಾರೆ.
ಎಸಿಎಫ್ ಶಿವರುದ್ರಪ್ಪ ಕಬಾಡಗಿ, ವಲಯ ಅರಣ್ಯಾಧಿಕಾರಿ ಪುರುಷೋತ್ತಮ, ಉಪವಲಯ ಅರಣ್ಯಾಧಿಕಾರಿ ವಿನಯ ಗೌಡರ, ಪ್ರಾದೇಶಿಕ ಹಾಗೂ ಸ್ಕ್ವಾಡ್ ಸಿಬ್ಬಂದಿ ಹಾಜರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.