ಟಿಪ್ಪುಸುಲ್ತಾನ್ರವರ 233 ನೇ ಗಂಧ ಮತ್ತು ಉತ್ಸವ.!
ಚಿತ್ರದುರ್ಗ : ಶ್ರೀರಂಗಪಟ್ಟಣದಲ್ಲಿ ಮಂಗಳವಾರ ನಡೆದ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್ರವರ 233 ನೇ ಗಂಧ ಮತ್ತು ಉತ್ಸವಕ್ಕೆ ಚಿತ್ರದುರ್ಗದ ಬಡಾ ಮಕಾನ್ನಿಂದ ಬೆಳಿಗ್ಗೆ ಗಂಧ ತೆಗೆದುಕೊಂಡು ಹೋಗಿ ಸಮರ್ಪಿಸಲಾಯಿತು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಗಂಧ ತೆಗೆದುಕೊಂಡು ಹೋಗುವ ವೇಳೆ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಚಿತ್ರದುರ್ಗದ ಬಡಾ ಮಕಾನ್ನಿಂದ ಗಂಧ ತೆಗೆದುಕೊಂಡು ಹೋಗುತ್ತಿದ್ದೇವೆ. ದೇಶ ವಿದೇಶಗಳಿಂದ ಟಿಪ್ಪುಸುಲ್ತಾನ್ರವರ ಅಪಾರ ಅಭಿಮಾನಿಗಳು ಗಂಧ ಮತ್ತು ಉತ್ಸವದಲ್ಲಿ ಪಾಲ್ಗೊಂಡು ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಲಿದ್ದಾರೆಂದು ಹೇಳಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿರಾಜುದ್ದಿನ್ ಸುಲ್ತಾನ್, ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಫೈಲ್ವಾನ್ ಸದ್ದಾಂ, ಶಹಬಾಜ್, ಖಯೂಂ, ಜಿಯಾವುಲ್ಲಾ, ಫೈಲ್ವಾನ್ ಅಫೀಜ್, ಅಸ್ಲಾಂ, ನಸರ್ಬೇಗ್, ನಜ್ಮತಾಜ್ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.