ಬೆಂಗಳೂರು:
ರಾಜ್ಯ ಸರಕಾರ ಅಧಿಕಾರಿಗಳ ವರ್ಗಾವಣೆ ಮುಂದುವರಿಸಿದೆ. 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶಿಸಿದೆ. ಮೊಹಮ್ಮದ್ ಮೊಹಿನ್ ಅವರನ್ನು ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ, ಟಿ.ಎಚ್.ಎಂ.ಕುಮಾರ್ ಅವರನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಎಂಡಿಯಾಗಿ, ಆರ್. ಸ್ನೇಹಲ್ ಅವರನ್ನು ಬಿಎಂಟಿಸಿನಿರ್ದೇಶಕಿ (ಐಟಿ), ಪ್ರಭುಲಿಂಗಕವಳಿಕಟ್ಟಿ ಅವರನ್ನು ಪಶುಸಂಗೋಪನಾ ಆಯುಕ್ತರು, ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕ, ಪಂಡೈ ರಾಹುಲ್ ತುಕಾರಾಮ್ ಅವರನ್ನು ರಾಯಚೂರು ಜಿಪಂ ಸಿಇಒ, ಎಸ್.ಜೆ. ಸೋಮಶೇಖರ ಅವರನ್ನು ಚಿತ್ರದುರ್ಗ ಜಿಪಂ ಸಿಇಒ, ಎಸ್.ರಂಗಪ್ಪ ಅವರನ್ನು ಕಂದಾಯ ಇಲಾಖೆಯ ಪಿಂಚಣಿ ವಿಭಾಗದ ನಿರ್ದೇಶಕ, ಡಾ.ಎಸ್. ಆಕಾಶ್ ಅವರನ್ನು ಕಲಬುರಗಿ ಜಿಲ್ಲೆಯ ಸಾರ್ವಜನಿಕ ಸೂಚನೆಗಳು ವಿಭಾಗದ ಹೆಚ್ಚುವರಿ ಆಯುಕ್ತ, ಅನ್ಮೂಲ್ ಜೈನ್ ಅವರನ್ನು ನೋಂದಣಿ ಡಿಐಜಿ ಆಗಿ ನೇಮಿಸಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.