LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಪ್ರವಾಸೋದ್ಯಮ, ಸೇಬು ಬೆನ್ನಲ್ಲೇ ಟರ್ಕಿಶ್ ಆಭರಣಗಳಿಗೂ ಬಹಿಷ್ಕಾರ

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಪಾಕ್ ಪರವಾಗಿ ನಿಂತ ಟರ್ಕಿ ವಿರುದ್ಧ ದೇಶದಲ್ಲಿ ಬಹಿಷ್ಕಾರ ಅಭಿಯಾನವೇ ಶುರುವಾಗಿದೆ. ಭಾರತೀಯರು ಟರ್ಕಿ ಪ್ರವಾಸಗಳನ್ನು ರದ್ದು ಮಾಡುತ್ತಿದ್ದಾರೆ, ಅಲ್ಲದೆ ಸೇಬು, ಅಮೃತಶಿಲೆ ಸೇರಿದಂತೆ ಟರ್ಕಿ ಉತ್ಪನ್ನಗಳ ಪೂರೈಕೆಗೂ ಬಹಿಷ್ಕಾರ ಹಾಕಲಾಗಿತ್ತು. ಇದೀಗ ಆಭರಣ ವರ್ತಕರು ಟರ್ಕಿ ಆಭರಣಗಳಿಗೂ ಬಹಿಷ್ಕಾರ ಹಾಕಿದ್ದಾರೆ.

ಹೌದು ಆಭರಣ ವರ್ತಕರು ಟರ್ಕಿ ಆಭರಣಗಳ ಖರೀದಿ ಮತ್ತು ಮಾರಾಟ, ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಇದರೊಂದಿಗೆ ಕಿವಿಯೋಲೆಗಳು ಮತ್ತು ನೆಕ್ಲೇಸ್‌ನಂತಹ ದೊಡ್ಡ ಗಾತ್ರದ ಆಭರಣಗಳಿಗೆ ನೀಡಲಾಗುತ್ತಿದ್ದ ಟರ್ಕಿಶ್ ಟ್ಯಾಗ್ ಅನ್ನು ತೆಗೆದು ಸಿಂಧೂರ್ ಎಂದು ಹೆಸರಿಡಲು ಮುಂದಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಟರ್ಕಿಶ್ ಆಭರಣಗಳಿಗೆ ಬಹು ಬೇಡಿಕೆಯಿದೆ. ಆದರೆ ಇದೀಗ ಆಭರಣ ವರ್ತಕರು ಟರ್ಕಿ ಆಭರಣಗಳ ಖರೀದಿ ಮತ್ತು ಮಾರಾಟ, ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಜೊತೆಗೆ ಭಾರತದಲ್ಲಿ ಆ ದೇಶದ ಆಭರಣಗಳ ಹೆಸರನ್ನು ಬದಲಾಯಿಸಲಾಗಿದೆ. ಆಭರಣಗಳಿಗೆ ನೀಡುತ್ತಿದ್ದ ಟರ್ಕಿಶ್ ಎಂಬ ಟ್ಯಾಗ್ ತೆಗೆದು ಸಿಂಧೂರ್ ಎಂಬ ಹೆಸರನ್ನು ಮರುನಾಮಕರಣ ಮಾಡಲಾಗಿದೆ. 'ಟರ್ಕಿಶ್ ಆಭರಣಗಳನ್ನು ಇನ್ನು ಮುಂದೆ ಭಾರತದಲ್ಲಿ 'ಸಿಂಧೂರ್ ಆಭರಣ' ಎಂದು ಕರೆಯಲಾಗುತ್ತದೆ ಎಂದು ಹೇಳಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭದ್ರಾ ಜಲಾಶಯ ರೈತರಿಗೆ ಮುಖ್ಯ ಮಾಹಿತಿ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು.!ನಾಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜಾಮೀನು ಅರ್ಜಿ ವಿಚಾರಣೆ.!ಕನ್ನಡದ ಖ್ಯಾತ ಹಿರಿಯ ಕಲಾವಿದ ಇನ್ನಿಲ್ಲ.!ಕಗಂಟಾಗಿದ್ದ ಕೇರಳ ಮುಖ್ಯಂತ್ರಿ ಸ್ಥಾನ ಕುತೂಹಲಕ್ಕೆ ತೆರೆ.!ಕೈ ಮುಷ್ಟಿಯಷ್ಟು ಕಲ್ಲುಪ್ಪನ್ನು ತೆಗೆದುಕೊಂಡು ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲಿ ಹೀಗೆ ಮಾಡಿದರೆ ಧನ ಪ್ರವಾಹ ಖಚಿತ.!ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ.!ಎಲ್ಲಾ ಶಾಲಾ-ಕಾಲೇಜುಗಳಲ್ಲಿ ‘ಹಿಜಾಬ್’ ನಿಷೇಧ ರದ್ದು.!ಪ್ರಥಮ ವರ್ಷದ ಡಿಪಿಎಸ್‍ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಗಂಜಿಗಟ್ಟೆ ಲಂಬಾಣಿಹಟ್ಟಿಯಲ್ಲಿ ಪ್ರತ್ಯೇಕ ಚುನಾವಣಾ ಬೂತ್ಗೆ ಆಗ್ರಹದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 14-05-2026