LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಬರಲಿದೆ 2 ಸಿಂಹದ ಮರಿಗಳು

ಶಿವಮೊಗ್ಗ, ಮೇ 27 : ನಗರದ ಹೊರವಲಯದಲ್ಲಿರುವ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಸಿಂಹದ ಮರಿಗಳು ಬರಲಿವೆ.

ಪ್ರಾಣಿ ವಿನಿಮಯ ಯೋಜನೆಯ ಅಂಗವಾಗಿ, ಇಂದೋರಿನ ಕಮಲಾ ನೆಹರು ಪ್ರಾಣಿಸಂಗ್ರಹಾಲಯದಿಂದ ೨ ವರ್ಷ ವಯಸ್ಸಿನ ಸಿಂಹ-ಸಿಂಹಿಣಿಯ ಜೋಡಿಯನ್ನು ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಒಪ್ಪಂದದ ಪ್ರಕಾರ, ಶಿವಮೊಗ್ಗದ ಸಫಾರಿಯಿಂದ ನಾಲ್ಕು ಭಾರತೀಯ ಗೌರ್ (ಕಾಡೆಮ್ಮೆ)ಗಳನ್ನು ಇಂದೋರ್ ಮೃಗಾಲಯಕ್ಕೆ ರವಾನೆ ಮಾಡಲಾಗುವುದು. ಈ ವಿನಿಮಯ ಪ್ರಕ್ರಿಯೆಗೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದ  ಅನುಮತಿ ಲಭಿಸಿದೆ. ಹೀಗೆ ರಾಜ್ಯಗಳ ನಡುವೆ ಪ್ರಾಣಿ ವೈವಿಧ್ಯ ಸಂರಕ್ಷಣೆಗೆ ಅವಕಾಶ ಒದಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST