ಬೆಳಗಾವಿ; ತಾಂತ್ರಿಕ ಯುಗದಲ್ಲಿ ಮನುಷ್ಯ ಏನೇನೊ ವೈಜ್ಞಾನಿಕ ಆವಿಷ್ಕಾರಗಳನ್ನು ಮಾಡಿದ್ದರೂ ಕೂಡ ಇಲ್ಲಿಯವರೆಗೆ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗಿಲ್ಲ ಎಂದು ರೊ.ಉದಯಸಿಂಗ ರಜಪೂತ ಹೇಳಿದರು.
ಅವರು ಗೋಗಟೆ ಇಂಜಿನಿಯರಿಂಗ್ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗ ,ಬೆಳಗಾವಿ ಬ್ಲಡ್ ಸೆಂಟರ್ ಮತ್ತು ರೋಟರಿ ಮಿಡ್ ಟೌನ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ "ಬೃಹತ್ ಬ್ಲಡ್ ಡೊನೇಶನ್ " ಕ್ಯಾಂಪ ನಲ್ಲಿ ಮಾತನಾಡುತ್ತಿದ್ದರು.
ನಾವು ರಕ್ತವನ್ನು ದಾನಿಗಳಿಂದಲೇ ಪಡೆದುಕೊಳ್ಳಬೇಕಾಗಿದೆ.ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಜನರಲ್ಲಿ ರಕ್ತದಾನದ ಮಹತ್ವದ ಕುರಿತು ಮೇಲಿಂದ ಮೇಲೆ ಜನಜಾಗೃತಿ ಮೂಡಿಸುತ್ತಿದೆ.ರಕ್ತ ದಾನ ಅಲ್ಲದೇ ಅಂಗಾಂಗ ದಾನಗಳ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.
ಒಟ್ಟು ೧೨೬ ಯುನಿಟ್ ರಕ್ತವನ್ನು ಹಲವು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ನಂದನ ಬಾಗಿ,ಸತೀಶ ಮಿಠಾರೆ,ಸತೀಶ ನಾಯಕ,ಗಿರೀಷ ಬುಡರಕಟ್ಟಿ,ಡಾ. ವಿಜಯ ಪೂಜಾರ,ಉದಯ ಇಡಗಲ್ಲ,ರಾಜೀವ ದೇಶಪಾಂಡೆ, ರೂಪಾ ದೇಶಪಾಂಡೆ.ಪ್ರಾಚಾರ್ಯರಾದ ಡಾ.ಎಮ್ ಎಸ್ ಪಾಟೀಲ್,ಪ್ರೊ.ಪರಾಗ ದಾತಾರ,ಪ್ರೊ.ನಿಖಿಲ್ ಚಿತ್ರಗಾರ ಉಪಸ್ಥಿತರಿದ್ದರು.