Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಒಂದೊಂದು ಕಡೆಯಿಂದ ಬೇರೆ ಬೇರೆ ಚಿತ್ರಗಳಂತೆ ಕಾಣುವ ಕಲೆ ಅಚ್ಚರಿ ಮೂಡಿಸಲಿದೆ-ಉಜ್ಜನಪ್ಪ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಂದು ಛಾಯಾಚಿತ್ರ ನೂರಾರು ಅರ್ಥಗಳನ್ನು ನೀಡುತ್ತದೆ. ಚಿತ್ರ ನೋಡುವುದು, ಚಿತ್ರ ಬಿಡಿಸುವುದು ಸುಲಭವಾಗಿದ್ದರೂ
, ಚಿತ್ರ ಕಲೆಯನ್ನು ಅರ್ಥಮಾಡಿ ಕೊಳ್ಳುವುದು ಕಷ್ಟಕರ. ಚಿತ್ರಕಲೆಯ ಆಳ ಮತ್ತು ಮೌಲ್ಯವು ಅಂತಹದ್ದಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಕೆ.ಎಂ.ವಿರೇಶ್ ತಿಳಿಸಿದ್ದಾರೆ.

ಇಲ್ಲಿನ ಧರ್ಮಶಾಲಾ ರಸ್ತೆಯ ಸೀತಾರಾಮ ಮಂದಿರದ ಆವರಣದಲ್ಲಿ ಕಲಾ ಚೈತನ್ಯ ಸೇವಾ ಸಂಸ್ಥೆ, ಸಾಂಸ್ಕೃತಿಕ ಕಲಾ ಸಂಘ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಕಲಾವಿದ ಲಿಯನಾರ್ಡೊ ಡಾವಿನ್ಸಿರವರ ಜನ್ಮ ದಿನದ ಸವಿನೆನಪಿಗಾಗಿ ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ನಡೆಸಲಾದ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಕ್ಕಳು ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು ಚಿತ್ರ ಕಲೆ
ಮತ್ತು ಆ ಚಿತ್ರದ ಸಾರ, ಸನ್ನಿವೇಶ, ಗಂಭೀರ ಆಲೋಚನೆಗಳು ಮಕ್ಕಳ ವಿಕಸನಕ್ಕೆ ದಾರಿ ಮಾಡಿಕೊಡಲಿದೆ ಎಂದು ತಿಳಿಸಿದರು.

ಪ್ರತಿಭಾನ್ವಿತ ಮಕ್ಕಳಿಗೆ ಚಿತ್ರಕಲೆಯಲ್ಲಿ ನೈಸರ್ಗಿಕ ಕೌಶಲ್ಯವಿಲ್ಲದಿದ್ದರೂ, ಚಿತ್ರಕಲೆ ಅಭ್ಯಾಸ ಮಾಡಲು ಮತ್ತು ಕಲೆಯನ್ನು ಪರಿಷ್ಕರಿಸಲು ಪ್ರೋತ್ಸಾಹಿಸಬೇಕು ಎಂದು ವಿರೇಶ್ ಕರೆ ನೀಡಿದರು.
ಮಕ್ಕಳಲ್ಲಿರುವ ಚಿತ್ರಕಲೆಯ ಕನಸು ಮತ್ತು ಪ್ರತಿಭೆಗಳನ್ನು ಬೆಂಬಲಿಸಿದರೆ
, ಉತ್ತಮ ಸಾಧನೆ ಮಾಡಲಿದ್ದಾರೆ. ಕೇವಲ ಅಂಕಗಳಿಗೆ ಮಕ್ಕಳನ್ನು ಸೀಮಿತ ಮಾಡುವುದು ಬೇಡ ಎಂದು ಅವರು ಕಿವಿ ಮಾತು ಹೇಳಿದರು.

ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜನಪ್ಪ ಮಾತನಾಡಿ, ಕಲಾವಿದ ಲಿಯನಾರ್ಡೊ ಡಾವಿನ್ಸಿರವರ ಜನ್ಮ ದಿನದ ಸವಿನೆನಪಿಗಾಗಿ ಚಿಕತ್ರಕಲಾ ಸ್ಪರ್ಧೆ ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇವರು ರಚನೆ ಮಾಡಿದ ಮನೋಲಿಸ್ ಚಿತ್ರ ಒಂದೊಂದು ಕಡೆಯಿಂದ ಒಂದೂಂದು ರೀತಿಯಲ್ಲಿ ಕಾಣುತ್ತಿತ್ತು. ಇದನ್ನು ನೋಡಿದವರು ಆಶ್ಚರ್ಯ ಚಿಕಿತರಾಗುತ್ತಿದ್ದರು. ಹೊರಗಿನ ಸುಂದರ ಪ್ರಕೃತಿಯನ್ನು ನೋಡುವುದರಲ್ಲಿ ಶಾಂತಿಯನ್ನು ಕಂಡುಕೊಳ್ಳುವ ಜನರಿದ್ದಾರೆ. ಆದರೆ ಈ ಸೌಂದರ್ಯವನ್ನು ತಮ್ಮ ವರ್ಣಚಿತ್ರಗಳಲ್ಲಿ ಸೆರೆಹಿಡಿಯುವಲ್ಲಿ ತೃಪ್ತಿ ಕಂಡುಕೊಳ್ಳುವವರು ಕೆಲವರಿದ್ದಾರೆ.

ಚಿತ್ರಕಲೆ ಪ್ರಬಂಧವು ಸರಳ ಮತ್ತು ನಿರೂಪಣಾ ಸ್ವರೂಪ ಹೊಂದಿರುವುದರಿಂದ ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಮಕ್ಕಳಿಗೆ ವೈವಿಧ್ಯಮಯ ಆಸಕ್ತಿಗಳಿರುತ್ತವೆ ಮತ್ತು ಅವರು ಕಲೆ ಮತ್ತು ಚಿತ್ರಕಲೆ ಇಷ್ಟಪಡುತ್ತಾರೆ. ಬಣ್ಣ, ಕುಂಚ ಮತ್ತು ಕಾಗದ ಖರೀದಿಸುವುದು ಒಳ್ಳೆಯದು. ಹವ್ಯಾಸವಾಗಿ ಚಿತ್ರಕಲೆ ಅವರಿಗೆ ವಿಶ್ರಾಂತಿ ಮತ್ತು ಆನಂದಿಸಲು ಸಹಾಯ ಮಾಡುತ್ತದೆ ಎಂದು ಉಜ್ಜನಪ್ಪ ಅಭಿಪ್ರಾಯಪಟ್ಟರು.
ಚಿತ್ರ ಕಲೆ ಮಕ್ಕಳ ಕಲ್ಪನಾಶಕ್ತಿ ಮತ್ತು ಸೃಜನಶೀಲ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಅವರ ಕೈ-ಕಣ್ಣಿನ ಸಮನ್ವಯವನ್ನು ಸುಧಾರಿಸುತ್ತದೆ ಎಂದು ಹಿರಿಯ ಪತ್ರಕರ್ತರು ತಿಳಿಸಿದರು.


 ಕಲಾವಿದ ನಾಗರಾಜ್ ಬೇದ್ರೆ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಚಿತ್ರಕಲೆ ಪರಿಚಯಿಸುವುದು ಒಳ್ಳೆಯದು. ಪೋಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲದೆ ಮಕ್ಕಳ ಮನೋ ವಿರುದ್ಧವಾಗಿ ನಡೆದುಕೊಳ್ಳದೆ ಮಕ್ಕಳ ಇಷ್ಟಕ್ಕೆ ತಕ್ಕಂತೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮಕ್ಕಳಿಗೆ ಚಿತ್ರ ಕತೆಯ ಪರಿಚಯ ಮಾಡುವ ಸಂದರ್ಭದಲ್ಲಿ ಮೊದಲು ಸಣ್ಣ ಕ್ಯಾನ್ವಾಸ್‍ಗಳನ್ನು ನೀಡಿ ಮತ್ತು ಹೊಸದನ್ನು ರೂಪಿಸಲು ಬಣ್ಣಗಳನ್ನು ಮಿಶ್ರಣ ಮಾಡುವುದು ಹೇಗೆ ಎಂದು ಕಲಿಯಲು ಬಿಡಿ. ಅವರು ಬಣ್ಣಗಳೊಂದಿಗೆ ಪರಿಚಿತರಾದ ನಂತರ, ಚಿತ್ರಿಸಲು ನಿರ್ದಿಷ್ಟ ವಿಷಯಗಳು, ಥೀಮ್‍ಗಳನ್ನು ನೀಡಿ. ಅಲ್ಲದೆ, ಜಲವರ್ಣ ಚಿತ್ರಕಲೆ, ಅಕ್ರಿಲಿಕ್ ಚಿತ್ರಕಲೆ ಮುಂತಾದ ವಿವಿಧ ರೀತಿಯ ವರ್ಣಚಿತ್ರಗಳನ್ನು ಅವರಿಗೆ ಪ್ರಸ್ತುತಪಡಿಸಿದಾಗ ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿದು ಆ ಕಲೆಯಲ್ಲಿ ಸಾಧನೆ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.



ಕಾರ್ಯಕ್ರಮದಲ್ಲಿ ಯೋಗು ಗುರು ಮುರಳಿ, ಶಿಕ್ಷಕಿ ಅನಿತಾ, ಕಂಪ್ಯೂಟರ್ ಶಿಕ್ಷಕ ಜಾವಿದ್, ಕಲಾವಿದರಾದ ಜವಳಿ ಶಾಂತಕುಮಾರ್, ನವೀನ್ ಬೇದ್ರೆ, ಶೃತಿ ಎಸ್ ಹೆಗಡೆ, ಮಾರುತಿ ಅಮೂಲ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.


 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ