LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸುಧಾಮೂರ್ತಿ ಮಾತೃ ಪ್ರೇಮಕ್ಕೆ ಧನ್ಯವಾದವಿತ್ತ ಕೇಂದ್ರ ಸಚಿವ ರಾಮ್‌ಮೋಹನ್ ನಾಯ್ಡು

ನವದೆಹಲಿ : ರಾಜ್ಯಸಭೆಯಲ್ಲಿ ಕುತೂಹಲಕಾರಿ ಸನ್ನಿವೇಶವೊಂದು ನಡೆದಿದೆ. ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಮಾತನಾಡು ಸಂದರ್ಭ ಅವರಿಗೆ ಗಂಟಲು ಒಣಗಿದೆ. ಆಗ ಅಲ್ಲಿನ ಸಿಬ್ಬಂದಿಗೆ ನೀರು ತರಲು ಹೇಳಿದ್ದಾರೆ. ಆದರೆ ಅವರು ನೀರು ತರುವಷ್ಟರಲ್ಲಿ ಸುಧಾ ಮೂರ್ತಿಯವರೇ ನೀರಿನ ಬಾಟಲ್ ನೀಡಿದ್ದಾರೆ. ಅದಕ್ಕೆ ಧನ್ಯವಾದ ಹೇಳಿದ ರಾಮಮೋಹನ್ ನಾಯ್ಡು ನೀವು ನಮಗೆಲ್ಲ ತಾಯಿ ಸ್ವರೂಪರಾಗಿದ್ದೀರಿ. ನಿಮ್ಮ ಮಾತೃತ್ವವನ್ನು ಸದಾ ಸಾಬೀತುಪಡಿಸುತ್ತಲೇ ಇರುತ್ತೀರಿ ಎಂದು ನಮಸ್ಕರಿಸಿದ್ದಾರೆ. ಈ ಸನ್ನಿವೇಶ ಲೋಕಸಭೆಯಲ್ಲಿ ಒಂದು ಕ್ಷಣ ಮಾತೃ ಪ್ರೇಮವನ್ನು ಭಿತ್ತಾರ ಮಾಡಿತ್ತು.

ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ವೇಳೆ ಸಂಸತ್ತಿನಲ್ಲಿ ಈ ವಿಚಾರ ಜರುಗಿದೆ. ಸುಧಾಮೂರ್ತಿ ಅವರ ವಾತ್ಸಲ್ಯಕ್ಕೆ ಕೇಂದ್ರ ಸಚಿವ ರಾಮಮೋಹನ್ ನಾಯ್ಡು ಮನಸೋತು ಅವರಿಗೆ ಎರಡೂ ಕೈಗಳಿಂದ ನಮಸ್ಕರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಸದಾ ತನ್ನನ್ನು ತನ್ನ ತಾಯಿಯಂತೆಯೇ ನಡೆಸಿಕೊಂಡಿರುವುದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಎಲ್ಲರೂ ಕೈ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

ಸುಧಾ ಮೂರ್ತಿ ಪ್ರಸ್ತುತ ಮೂರ್ತಿ ಟ್ರಸ್ಟ್‌ನ ಅಧ್ಯಕ್ಷೆಯಾಗಿದ್ದಾರೆ. ಅವರು ಲೇಖಕಿ, ಶಿಕ್ಷಣತಜ್ಞೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ಬಹಳ ಜನಪ್ರಿಯರಾಗಿದ್ದಾರೆ. ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಷನ್ ಮೂಲಕ ಹಲವಾರು ಅನಾಥಾಶ್ರಮಗಳನ್ನು ಸ್ಥಾಪಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ-ಮಿರ್ಚಿ 13-08-2025.!ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಮಹಿಳಾ ಉದ್ಯೋಗ ಕೋಶ ಪ್ರಾರಂಭ.!ಸ್ವಯಂ ಸೇವಾ ಸಂಸ್ಥೆಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ.!ವಚನ: --ತೋಂಟದ ಸಿದ್ಧಲಿಂಗ ಶಿವಯೋಗಿಗಳು .!ಬಾಂಗ್ಲಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತಮೊಸರು ಕುಡಿಕೆ ಅಭ್ಯಾಸದ ವೇಳೆ ಬಾಲಕ ಸಾವುಒಳಮೀಸಲಾತಿ : ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ತಾರತಮ್ಯ.!ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಅಪಪ್ರಾಚಾರ ಮಾಡುತ್ತಿರುವವರ ಮೇಲೆ  ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ.!ಪ್ರೀತಿಸಿದ ಯುವಕನಿಂದ ಮತಾಂತರಕ್ಕೆ ಒತ್ತಾಯ: ಯುವತಿ ಸಾವಿಗೆ ಶರಣುಪತ್ನಿಯ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ ಪತಿ - ವೀಡಿಯೋ ವೈರಲ್‌